ಕೋಲಾರ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಸಿದ್ಧರಾಮಯ್ಯನವರಿಗೆ ಮನವಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಮಾ.13 : ಕೋಲಾರ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಸದನದ ಕಲಾಪಗಳಲ್ಲಿ ಪ್ರಸ್ಥಾಪಿಸಿ ಕೋಲಾರ ಜಿಲ್ಲೆಗೆ ನ್ಯಾಯ ದೊರಕಿಸಿಕೊಡುವಂತೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರಿಗೆ ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ಮನವಿ ಸಲ್ಲಿಸಿದರು.
ಕೋಲಾರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ಧರಾಮಯ್ಯನವರುರವರನ್ನು ಭೇಟಿ ಮನವಿ ಸಲ್ಲಿಸಿದ ಅವರು ಕುರುಬರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣದ ಬಗ್ಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ 1 ಕೋಟಿ ಮಂಜೂರು ಮಾಡಿಸಿದ್ದು ಇನ್ನೂ ಕಾರ್ಯಗತವಾಗಿಲ್ಲ. ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲು ಒತ್ತಡ ತರುವಂತೆ ಕೋರಿದರು.
ಕೋಲಾರ ಜಿಲ್ಲೆಯ ಗಡಿ ಭಾಗದಲ್ಲಿ ಆಂಧ್ರಪ್ರದೇಶದಿಂದ ಕುಪ್ಪಂಗೆ ಕುಡಿಯುವ ನೀರಿಗಾಗಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಕೋಲಾರ ಜಿಲ್ಲೆಗೆ ಕುಡಿಯುವ ನೀರಿನ ತೊಂದರೆ ಇದ್ದು ತುಂಗಭದ್ರಾ ನದಿಯ ನೀರಿನ ನಮ್ಮ ಪಾಲಿನ 3 ಟಿಎಂಸಿ ನೀರನ್ನು ಜಿಲ್ಲೆಗೆ ಒದಗಿಸಲು ಆಂಧ್ರಪ್ರದೇಶದ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಮತ್ತು ಸದನದಲ್ಲಿ ಪ್ರಸ್ತಾಪ ಮಾಡಿ ಮಂಡಿಸಲು ಕೋರಿದ್ದಾರೆ.
ಎತ್ತಿನ ಹೊಳೆ ಮತ್ತು ಯರಗೋಳ್ ಯೋಜನೆ ವಿಳಂಬವಾಗಿದ್ದು ಶ್ರೀಘದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರಕ್ಕೆ ಒತ್ತಾಯ ಮಾಡಬೇಕು. ಶುದ್ಧ ನೀರಿನ ಘಟಕಗಳಿಂದ ನಾಗರಿಕರಿಗೆ ಉಚಿತವಾಗಿ ನೀರನ್ನು ನೀಡಲು ಸರ್ಕಾರದ ಮೇಲೆ ಒತ್ತಡ ತರಬೇಕು. ಕೋಲಾರ ನಗರದ ಮೆಕ್ಕೆ ವೃತದಿಂದ ಕ್ಲಾಕ್ ಟವರ್ ವರೆಗೆ 10 ಕೋಟಿ ವೆಚ್ಚದಲ್ಲಿ ರಸ್ತೆ ಅಗಲಿಕರಣ ಮಾಡಿದ್ದು ರಸ್ತೆಯ ಅಕ್ಕಪಕ್ಕ ಮನೆಗಳನ್ನು ಹೊಂದಿರುವ ಕುರುಬರ ಪೇಟೆ, ಗೌರಿಪೇಟೆ, ಕಠಾರಿಪಾಳ್ಯದ ಮನೆಗಳನ್ನು ಮತ್ತು ದೇವಾಲಯಗಳನ್ನು ಕೆಡವಿದ್ದು ಮನೆ ಮಾಲಿಕರಿಗೆ ಪರಿಹಾರ ಮತ್ತು ದೇವಾಲಯಗಳ ಪುನರ್ ನಿರ್ಮಾಣ ಮಾಡಲು ಸರ್ಕಾರದ ಮೇಲೆ ಒತ್ತಡ ತರಲು ಕೋರಿದರು.
ಹಿಂದುಳಿದ ವರ್ಗದವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಉಚಿತವಾಗಿ ಪ್ರಾಥಮಿಕ ಶಾಲೆಯಿಂದ ಉನ್ನತ ವಿದ್ಯಾಭ್ಯಾಸದವರೆಗೆ ಮತ್ತು ಖಾಸಗಿ ಶಾಲೆಗಳಲ್ಲಿಯೂ ಸಹ ಉಚಿತ ಶಿಕ್ಷಣ ಆದ್ಯತೆ ಮೇರೆಗೆ ಕೊಡಿಸಲು ಸರ್ಕಾರದ ಮೇಲೆ ಒತ್ತಡ ತರಲು ಕೋರಿದರು. ಕೋಲಾರ ಜಿಲ್ಲೆಗೆ ಕ್ಯಾನ್ಸರ್ ಆಸ್ಪತ್ರೆ, ಕೃಷಿ ಕಾಲೇಜು, ವ್ಯೆದ್ಯಕೀಯ ಕಾಲೇಜು, ಪಶು ವ್ಯೆದ್ಯಕೀಯ ಕಾಲೇಜು ಮಂಜೂರು ಮಾಡಿಸಲು ಸರ್ಕಾರದ ಮೇಲೆ ಒತ್ತಡ ತರಲು ಕೋರಿದರು. ಇದರೊಂದಿಗೆ ಈ ಹಿಂದೆ ನಿವೇದಿಸಿಕೊಂಡಿರುವ ಅಗತ್ಯ ದಾಖಲೆಗಳನ್ನು ಲಗ್ಗತಿಸಿ ನಿವೇದಿಸಿಕೊಂಡಿದ್ದಾರೆ.