ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಶ್ರೀರಾಮ ಸಮಾಜಕ್ಕೆ ಮಾದರಿಯಾಗಿದ್ದಾನೆ. ರಾಮನ ನಡೆ ಸರ್ವಕಾಲಕ್ಕೂ ಆದರ್ಶವಾಗಿದೆ. ಅವನ ಸ್ಮರಣೆಯಿಂದ ಸತ್ಯ ದರ್ಶನವಾಗುತ್ತದೆ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಹೇಳಿದರು.
ಪಟ್ಟಣದ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯನ ಕಚೇರಿ ಉದ್ಘಾಟಿಸಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ರಾಷ್ಟ್ರೀಯ ಸ್ಮಾರಕವಾಗಿ ನಿರ್ಮಿಸಲಾಗುತ್ತಿದೆ. ಜಗತ್ತಿನ ಎಲ್ಲ ಹಿಂದೂ ಧರ್ಮೀಯರು ಮಂದಿರ ನಿರ್ಮಾಣಕ್ಕೆ ತನು ಮನ ಧನ ಅರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರ ಸಹಕಾರದಿಂದ ಮಂದಿರ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಮುಖ್ಯಸ್ಥ ಗೋವಿಂದರಾಜು ಮಾತನಾಡಿ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಯಾವುದೇ ಜಾತಿ ಭೇದ ತೋರದೆ ಎಲ್ಲಾ ಹಿಂದೂಗಳು ತೊಡಗಿಸಿಕೊಳ್ಳಬೇಕು. ಎಲ್ಲಾ ಹಿಂದೂ ಸಮುದಾಯಗಳ ಜನರ ಶ್ರದ್ಧೆಯ ಅಮೂರ್ತ ರೂಪ ಶ್ರೀರಾಮ. ರಾಮನ ಭವ್ಯ ಮಂದಿರ ನಿರ್ಮಾಣದ ಜತೆಗೆ ರಾಮಾಯಣದ ಕುರುಹುಗಳ ಚಿತ್ರಗಳೊಂದಿಗೆ ವಸ್ತು ಸಂಗ್ರಹಾಲಯ ನಿರ್ಮಿಸಲಾಗುತ್ತಿz ಎಂದು ಹೇಳಿದರು.
ಜಿಲ್ಲಾ ಸ್ಥರದ ಮುಖ್ಯಸ್ಥ ಸಿದ್ದಲಿಂಗೇಶ್ವರ, ತಾಲೂಕು ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ದಿವಾಕರ್, ತಾಲೂಕು ಸಂಚಾಲಕ ಮಾಸ್ತೇನಹಳ್ಳಿ ಸೊಣ್ಣೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ಆವುಲಕುಪ್ಪ ನಾರಾಯಣಸ್ವಾಮಿ, ನಿವೃತ್ತ ಶಿಕ್ಷಕ ಕಲ್ಲೂರು ಎ.ವೆಂಕಟರೆಡ್ಡಿ, ರಘುನಂದನರೆಡ್ಡಿ, ಭರತ್ಚಂದ್ರ, ನಂದೀಶ, ಅಡಿಕೆ ರಘು ಇದ್ದರು.