ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕೊರೊನಾ ಭಯದ ನಡುವೆ ಶ್ರೀರಾಮ ನವಮಿಯನ್ನು ಸರಳವಾಗಿ ಆಚರಿಸಲಾಯಿತು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕೊರೊನಾ ಭಯದ ನಡುವೆ ಶ್ರೀರಾಮ ನವಮಿಯನ್ನು ಸರಳವಾಗಿ ಆಚರಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ಆಚರಣೆ ಪೂಜೆಗೆ ಸೀಮಿತವಾಗಿತ್ತು.
ಪಟ್ಟಣದ ರಾಮ ಮಂದಿರದಲ್ಲಿ ಧರ್ಮದರ್ಶಿ ಕೆ.ಮೋಹನಾಚಾರಿ ರಾಮ ದೇವರ ಪಟಕ್ಕೆ ಪೂಜೆ ಸಲ್ಲಿಸಿ ಪಾನಕ ಪನಿಯಾರ ವಿತರಿಸಿದರು. ಪುರಸಭೆಯ ಮಾಜಿ ಸದಸ್ಯೆ ರಾಧಮ್ಮ ಇದ್ದರು.
ಪಟ್ಟಣದ ಹೊರ ವಲಯದಲ್ಲಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ರಾಮ ದೇವರ ಮೆರವಣಿಗೆ ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಸರಳವಾಗಿ ಮೆರವಣಿಗೆ ಆಚರಿಸಿದರು.
ತಾಲ್ಲೂಕಿನ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ ಬಳಿಕ ಪಾನಕ ಪನಿಯಾರ ವಿತರಿಸಲಾಯಿತು. ದೇವಾಲಯಗಳ ಸಮೀಪ ಪಾನಕ, ಕೋಸಂಬರಿ ವಿತರಣೆಗೆ ಸಿದ್ಧತೆ ನಡೆದಿತ್ತಾದರೂ, ಕೊರೊನಾ ಭಯದಿಂದಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಸ್ವೀಕರಿಸಲು ಮುಂದಾಗಲಿಲ್ಲ. ಕೆಲವು ಕಡೆ ಸ್ಯಾನಿಟೈಸರ್ ಹಾಗೂ ಹ್ಯಾಡ್ ವಾಷ್ ಸೌ¯ಭ್ಯ ಕಲ್ಪಿಸಲಾಗಿತ್ತು. ಆದರೂ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ತೀರಾ ವಿರಳವಾಗಿತ್ತು.