ಕೋಲಾರ ಜ.09 ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳವಾರ ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರವನ್ನು ವಜಾ ಗೊಳಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅರುಣ್ ಪ್ರಕಾಶ್, ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 6 ತಿಂಗಳಿನಿಂದ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕಿರುಕುಳ, ಸುಳ್ಳು ಮೊಕದ್ದಮೆ,ಜೈಲ್ ವಾಸ ನಿರಂತರವಾಗಿ ನಡೆಯುತ್ತಿದ್ದು,ಪೆÇಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕೀಯ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರದಲ್ಲಿ ಗೋರಕ್ಷಕರಿಗೆ 48 ದಿನ ಜೈಲುವಾಸ, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರಮೋದ್ ಮುತಾಲಿಕ್ ಅವರಿಗೆ ಪ್ರವೇಶ ನಿಬರ್ಂಧ, ಗ್ಯಾನೇಂದ್ರ ಜೈನ ಬಂಧನ, ಮಂಗಳೂರಿನ ಹಿಂದೂ ಕಾರ್ಯಕರ್ತರಿಗೆ ಗಡಿಪಾರು ಆದೇಶ,ಬೆಂಗಳೂರಿನಲ್ಲಿ ಹಿಂದೂ ಹೋರಾಟಗಾರರ ಬಂಧನ ಗುಂಡಾ ಆಕ್ಟ್ ಮೊಕದ್ದೊಮ್ಮೆ, ಕಲ್ಬುರ್ಗಿ ಹಿಂದೂ ಕಾರ್ಯಕರ್ತರಿಗೆ ರೌಡಿ ಶೀಟ್ ,ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್
ಹಬ್ಬದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕ ಹಿಂದೂಗಳ ಬಂಧನ,ಗಂಗಾವತಿಯಲ್ಲಿ ಗಣವತಿ ವಿಸರ್ಜನೆ ಸಂದರ್ಭದಲ್ಲಿ ಮಸೀದೆಗೆ ಆರತಿ ಮಾಡಿದ್ರು ಅಂತ ಕೇಸ್.ಚಿಕ್ಕಮಗಳೂರಿನಲ್ಲಿ 14 ಹಿಂದೂ ಕಾರ್ಯಕರ್ತರ 7 ವರ್ಷ ಹಳೆಯ ಕೇಸ್ ಮತ್ತೆ ಪ್ರಾರಂಭ.ಹೀಗೆ ಇನ್ನೂ ಹಲವಾರು ಅಹಿತಕರ ಹಿಂದೂ ವಿರೋಧಿ ದುರ್ಘಟನೆಗಳು ನಡೆಯುತ್ತಲೇ ಇದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಓಲೈಸಲು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ನಿಜಕ್ಕೂ ಖಂಡನೀಯ ಕೂಡಲೇ ಮಾನ್ಯ ರಾಜ್ಯಪಾಲರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಗೊಳಿಸಿ ಹಿಂದೂಗಳ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಶ್ರೀ ರಾಮ ಸೇನೆ ಕೋಲಾರ ವಿಭಾಗಿಯ ಅಧ್ಯಕ್ಷರ ರಮೇಶ್ ರಾಜ್ ಅರಸ್,ಯೋಗ ರವಿ, ಶಂಕರ್, ನವೀನ್, ನಾಗೇಂದ್ರ ಶ್ರೀಕಾಂತ್, ಸುಭಾμï, ಕಾರ್ತಿಕ್, ವಿನೋದ್ ಮುಂತಾದವರು ಭಾಗವಹಿಸಿದ್ದರು.