ಬಾರಕೂರು: ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನಲ್ಲಿ 2024-25ರ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಮತ್ತು ವಿವಿಧ ಸಂಘದ ಉದ್ಘಾಟನೆ ಯನ್ನು ಬಾರಕೂರು ಎಜುಕೇಷನಲ್ ಸೊಸೈಟಿ ಯ ಆಡಳಿತಕ್ಕೆ ಒಳ ಪಟ್ಟ ಎಲ್ಲಾ ಸಂಸ್ಥೆ ಗಳ ಕೋ ಒರ್ಡಿ ನೇಟರ್ ಆಗಿರುವ ಶ್ರೀ ಆರ್ಚಿ ಬಾಲ್ಡ್ ಪುಟಾರ್ದೋರವರು ದೀಪ ಬೆಳಗಿಸಿ ” ನಾಯಕತ್ವ ಪರಿ ಪೂರ್ಣತೆಯಿಂದ ಇರಬೇಕು, ಇನ್ನೊಬ್ಬರಿಗೆ ಮಾರ್ಗದರ್ಶನ ವಾಗಿರಬೇಕು ” ಎಂದು ತಿಳಿಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕರಾದ ಶ್ರೀ ರಾಜಾರಾಮ್ ಶೆಟ್ಟಿ ರವರು ವಹಿಸಿ , “ವಿದ್ಯಾರ್ಥಿ ಗಳು ನಾಯಕತ್ವ ದ ಗುಣ ವನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ತು ಉತ್ತಮ ವೇದಿಕೆ ” ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ ರವರುಶಾಲಾ ಸಂಸತ್ತು ನ ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿದರು.
ವೇದಿಕೆ ಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಪ್ರತೀಕ್, ವಿರೋಧ ಪಕ್ಷದ ನಾಯಕಿ ವೈಷ್ಣವಿ , ಉಪ ವಿದ್ಯಾರ್ಥಿ ನಾಯಕಿ ಶರಣ್ಯ , ಸಾಂಸ್ಕೃತಿಕ ಕಾರ್ಯದರ್ಶಿ ಸಿಂಚನ , ಆರೋಗ್ಯ ಮಂತ್ರಿ ವರ್ಷ , ಕ್ರೀಡಾ ಕಾರ್ಯದರ್ಶಿ ಶೋಭಿತ್ ಶೆಟ್ಟಿ , ಪ್ರೌಢ ಶಾಲಾ ವಿಭಾಗದ ವಿವಿಧ ಸಂಘ ಗಳಾದ ಪರಿಸರ ಸಂಘ ದ ಅಧ್ಯಕ್ಷೆ ಖುಷಿ , ಸಾಹಿತ್ಯ ಸಂಘ ದ ಅಧ್ಯಕ್ಷೆ ಧನುಶ್ರೀ , ಗ್ರಾಹಕ ಸಂಘ ದ ಅಧ್ಯಕ್ಷ ದಿಗಂತ್ , ವಿಜ್ಞಾನ ಸಂಘ ದ ಅಧ್ಯಕ್ಷ ಸುಶ್ರುತ್ , ಪ್ರಾಥಮಿಕ ವಿಭಾಗ ದಲ್ಲಿ ಪರಿಸರ ಸಂಘದ ಅಧ್ಯಕ್ಷೆ ಶಿವಾನಿ , ವಿಜ್ಞಾನ ಸಂಘದ ಅಧ್ಯಕ್ಷೆ ಕೀರ್ತನಾ, ಸಾಹಿತ್ಯ ಸಂಘ ದ ಸಾನಿಧ್ಯ, ರವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ವನ್ನು ಅನಿಷಾ ನಿರೂಪಿಸಿ, ವೈಷ್ಣವಿ, ಅಧಿತಿ ಪ್ರಸ್ತುತಿ ರವರು ಪ್ರಾರ್ಥಿಸಿದರು, ಶ್ರೀಶ ಸ್ವಾಗಸಿ, ಕೀರ್ತಿ ವಂದಿಸಿದರು.
ಶಾಲಾ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ ಶೆಟ್ಟಿ ಮತ್ತು ನಾಗರತ್ನ ಹೆಬ್ಬಾರ್ ಈ ಕಾರ್ಯಕ್ರಮ ವನ್ನು ಸಂಯೋಜನೆ ಮಾಡಿದರು ಶಾಲೆಯ ಎಲ್ಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.