ಶ್ರೀನಿವಾಸಪುರ 2 : ಭಕ್ತಿ, ಭಕ್ತ ಹಾಗೂ ವಾಸ್ತವದಲ್ಲಿನ ನಡವಳಿಕೆ ಕುರಿತು ತಿಳಿಸಿದ್ದಾರೆ. ಅಂತಹ ಮಹನೀಯರ ಸಾಧನೆ ನಮಗೆ ಸ್ಪೂರ್ತಿಯಾಗಬೇಕಿದ್ದು, ಹಿಂದುಳಿದ ಸಮಾಜ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ನೌಕರರ ಭವನದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.
ತಾಲೂಕಿಗೆ ಸಂಬಂದಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ 3 ಸಾವಿರ ಎಕರೆಗಳಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸೃಷ್ಟಿ ಮಾಡಿ ನಿರುದ್ಯೋಗ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು. ಕ್ಷೇತ್ರಕ್ಕೆ ಸಂಬಂದಿಸಿದಂತೆ ಸಾರ್ವಜನಿಕರು ತಮಗೆ ಬೇಕಾದ ಮೂಲಸೌಲಭ್ಯಗಳ ಬಗ್ಗೆ ನನ್ನ ಗಮನಕ್ಕೆ ತಂದು ಅವುಗಳ ಸರಿಪಡಿಸಿಕೊಂಡು ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವುದು. ಹಾಗು ಸಾರ್ವಜನಿಕರು ತಮ್ಮ ಮಕ್ಕಳ ಶಿಕ್ಷಣ , ಆರೋಗ್ಯ, ಯಾವುದೇ ಇಲಾಖೆಗೆ ಸಂಬಂದಿಸಿದ ಕೆಲಸ ಕಾರ್ಯಗಳು ಇದ್ದ ಪಕ್ಷದಲ್ಲಿ ನನ್ನ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಿಕೊಳ್ಳವಂತೆ ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರವನ್ನು ಹಾಕುವುದರ ಮೂಲಕ ನಮನ ಸಲ್ಲಿಸಿದರು ಸಮುದಾಯದಲ್ಲಿನ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಲೋಕೋಪಯೋಗಿ ಇಲಾಖೆ ಎಇಇ ನಾರಾಯಣಸ್ವಾಮಿ, ರೇಷ್ಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಆರ್ಐ ಮುನಿರೆಡ್ಡಿ, ಪಶುಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ್, ನಿವೃತ್ತ ಶಿಕ್ಷಕ ತಿಪಣ್ಣ, ಜೆ.ವಿ.ಕಾಲೋನಿ ಗ್ರಾ.ಪಂ.ಸದಸ್ಯ ರಾಜಣ್ಣ, ಮುಖಂಡರಾದ ಶಿವಪುರ ಗಣೇಶ್. , ಬೈರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್,ಪ್ರಸನ್ನ, ನಾರಾಯಣಸ್ವಾಮಿ ಅಭಿಷೇಕ್ ಇದ್ದರು.