

ಶಿವ೯: ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಕಚೇರಿ ಅಧೀಕ್ಷಕ್ಕಿ ಶ್ರೀಮತಿ ಡೋರಿನ್ ಡೀಸಿಲ್ವ ಅವರು ಉಪನ್ಯಾಸಕ ಕೆ.ಪ್ರವೀಣ್ ಕುಮಾರ್‍ರವರ “ಸಿ ಪ್ರೋಗ್ರಾಮ್ ಮೇಡ್ ಈಜಿ” – ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಿದರು. ಪ್ರತಿಯೊಂದು ಪುಸ್ತಕ ಒಂದು ಒಳ್ಳೆಯ ಸ್ನೇಹಿತ, ಪುಸ್ತಕಗಳ ಓದುವ ಮೂಲಕ ಅನೇಕ ವಿಷಯಗಳನ್ನು ಸಂಗ್ರಹಿಸಬಹುದು ಮತ್ತು ವಿವಿಧ ಜ್ಞಾನಾರ್ಜನೆಗಳನ್ನು ವಿದ್ಯಾರ್ಥಿಗಳು ವೃದ್ಧಿಸಿಕೊಳ್ಳಬಹುದು.
ಪರೀಕ್ಷಾ ತಯಾರಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಪರೀಕ್ಷಾ ಪೂವ೯ ತಯಾರಿಯಾಗಿ ಇಂತಹ ಪ್ರಶ್ನೋತ್ತರ ಮಾಲಿಕೆ ಪುಸ್ತಕಗಳು ವಿದ್ಯಾರ್ಥಿಯ ಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯೆಂದು ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ್ ರವರು ಪುಸ್ತಕದ ಬಗ್ಗೆ ಲೇಖಕರನ್ನು ಪ್ರಶಂಸೆಯ ಮಾತುಗಳೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬಿ.ಸಿ.ಎ. ವಿಭಾಗದ ಮುಖ್ಯಸ್ಥ ಹಾಗೂ ಮಾಹಿತಿ ತಂತ್ರಜ್ಞಾನದ ಸಂಯೋಜಕರಾದ ಲೆಫ್ಟಿನೆಂಟ್ ಕೆ.ಪವೀಣ್ ಕುಮಾರ್ ರವರು ಇಂತಹ ಪುಸ್ತಕಗಳನ್ನು ತಯಾರು ಮಾಡಲು ನನ್ನ ಗಣಕ ವಿಜ್ಞಾನದ ವಿದ್ಯಾರ್ಥಿಗಳೆ ಪ್ರೇರಕ ಶಕ್ತಿ, ಅವರಿಗೆ ನಾನು ಅಭಾರಿಯಾಗಿದ್ದೇನೆ. ಪುಸ್ತಕದ ಬಗ್ಗೆ ಮಾತನಾಡುತ್ತಾ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ಪ್ರಥಮ ಬಿ.ಸಿ.ಎ. ಒಂದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿ ಯಿಂದ ಈ ಪುಸ್ತಕ ಹೆಚ್ವು ಸಹಕಾರಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಅಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಹಮ್ಮದ್ ಆಶಿಕ್, ಮಹಮ್ಮದ್ ಜಿಯಾನ್ ಸಹಕರಿಸಿದ್ದರು.ಕು. ರಕ್ಷ ಮತ್ತು ಬಳಗ ಪ್ರಾರ್ಥಿಸಿ,ಕು. ಜಿಯಾ ಸಿ ಪೂಜಾರಿ ವಂದಿಸಿದರು., ಕು. ಸನಿಯಾ ಶೇಕ್ ಸ್ವಾಗತಿಸಿ, ಕು.ತರನಂ ಕಾರ್ಯಕ್ರಮ ನಿರೂಪಿಸಿದರು.




