JANANUDI.COM NETWORK
ಶಿರ್ವ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಯಾವುದೇ ಪರೀಕ್ಷೆಯನ್ನು ಎದುರಿಸಬೇಕಾದದಲ್ಲಿ ಅವರಲ್ಲಿ ಪರೀಕ್ಷೆಯ ಸಂಪೂರ್ಣ ಮಾಹಿತಿ, ಮಾರ್ಗದರ್ಶನವನ್ನು ಪಡೆದು ಪೂರ್ವಸಿದ್ಧತೆಯನ್ನು ಮಾಡಿದ್ದಲ್ಲಿ ಮುಂದೆ ಎಂಥಾ ಸವಾಲುಗಳನ್ನು ಎದುರಿಸುವ ಗುಣಗಳನ್ನು ಪಡೆಯಬಹುದು. ಕಠಿಣ ಪರಿಶ್ರಮದ ಜೊತೆಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕೌಶಲ್ಯಗಳನ್ನು ಅರಿತುಕೊಂಡು ಪ್ರಯತ್ನ ಪಡುವ ಮೂಲಕ ಉದ್ಯೋಗವನ್ನು ಪಡೆದು ಅವರ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಇಂತಹ ಕಾರ್ಯಗಾರಗಳು ಅತ್ಯಗತ್ಯ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಹಾಗೂ ಐಟಿ ಕ್ಲಬ್ ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೋಟೇಶ್ವರ,ಇಸಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನಾ ಗಣಿತ ಉಪನ್ಯಾಸಕಿ ಕು. ಪ್ರಣಿತ ರವರು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟಂತ ಗಣಿತ ವಿಷಯದ ಬಗ್ಗೆ ವಿವರಣೆ ನೀಡಿ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ರವರು ಕಾರ್ಯಕ್ರಮದ ಉದ್ದೇಶ ಮತ್ತು ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿಸಿಎ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಕ್ಯಾಂಪಸ್ನಲ್ಲಿ ಆಯ್ಕೆ ಆದ ಪ್ರೀತಿಕಾ,ವಿಧಾತ ಶೆಟ್ಟಿ, ಪ್ರಜ್ವಲ್, ಪ್ರತ್ವಿನ್ ಬಂಗೇರ, ದೇವಿಪ್ರಸಾದ್ ಶೆಟ್ಟಿ, ಪ್ರಿಯಾಂಕ ಆಚಾರ್ಯ, ಸುರೇಖಾ ರಾವ್, ಶಮಿತಾ ಶೆಟ್ಟಿ , ದ್ಯುತಿಶ್ರೀ, ಹಾರ್ದಿಕ ಸಾಲಿಯಾನ್, ದೀಕ್ಷಾ ಪಿಜಿ ವಿದ್ಯಾರ್ಥಿ ಗಳನ್ನು ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ದಿವ್ಯಶ್ರೀ ಬಿ, ಪ್ರಕಾಶ್ ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಪ್ ನಾಯಕ ಹಾಗೂ ಅಲಿಸ್ಟರ್ ಸುಜಾಯ್ ಡಿಸೋಜಾ ಸಹಕರಿಸಿದರು.ಕು. ಸುಪ್ರಿಯ ಪ್ರಾರ್ಥಿಸಿದರು. ಕು. ಸಹನ ಶೆಟ್ಟಿ ಸ್ವಾಗತಿಸಿ, ಕು.ಪ್ರತಿಕ್ಷ ವಂದಿಸಿದರು. ಕು. ಶ್ವೇತಾ ಕಾರ್ಯಕ್ರಮ ಸಂಯೋಜಿಸಿದರು.