ಶ್ರೀನಿವಾಸಪುರ: ಸುಮಾರು 39 ಲಕ್ಷ ರೂ ವೆಚ್ಚದಲ್ಲಿ ಅಮೃತ ಸರೋವರ ಯೋಜನೆಗೆ ಆಯ್ಕೆಯಾದ ಕೊಳತೂರು ಪಂಚಾಯಿತಿಯ ಶೇಟ್ಟಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕೆರೆಯ ಕಾಮಗಾರಿಯನ್ನು ವೀಕ್ಷಿಸಿದ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ನರೇಗಾ ಆಯುಕ್ತಕರಾದ ಶಿಲ್ಪಾ ನಾಗ್.
ಜಿಲ್ಲಾ ಪಂಚಾಯಿತಿ ಸಭೆಗೆ ಆಗಮಿಸಿದ್ದ ಹಿನ್ನಲೆಯಲ್ಲಿ ಜಿಲ್ಲೆಯ ಹಲವು ತಾಲ್ಲೂಕುಗಳ ಬೇಟಿನೀಡಿದ ನಂತರ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿಯ ಕೊಳತೂರು ಗ್ರಾಮ ಪಂಚಾಯಿತಿಗೆ ಒಳಪಡುವ ಶಟ್ಟಿಹಳ್ಳಿ ಗ್ರಾಮದ ಅಮೃತ ಸರೋವರ ಯೋಜನೆಗೆ ಆಯ್ಕೆಯಾದ ಕೆರೆಯ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿ ಗ್ರಾಮಸ್ಥÀ್ತರು ಮತ್ತು ಗ್ರಾಮ ಪಂಚಾಯಿತಿಯ ಅದ್ಯಕ್ಷ ಸದಸ್ಯರೊಂದಿಗೆ ಕೆರೆಯ ಅಗತ್ಯ ಹಿಂದಿನ ಸ್ವರೂಪ ಮುಂದಿನ ಅನುಕೂಲಗಳ ಬಗ್ಗೆ ವಿಶ್ಲೇಶಿಸಿ ಗ್ರಾಮಸ್ತರು ಸಹಕರಿಸಬೇಕು ಈ ಸದಾವಕಾಶ ಬಳಕೆಮಾಡಿಕೊಳ್ಳುವುದರಿಂದ ಸುತ್ತಮುತ್ತಲ ಕೆರೆಗಳಿಗೆ ನೀರು ಹರಿಯುವುದು ಅಂತರ್ಜಲ ವೃದ್ದಿಯಾಗುವುದು ಹಿಂದಿನ ಕಾಲದ ಗತ ವೈಭವ ಕೆರೆಯ ಸೊಬಗು ಪ್ರಕೃತಿ ಪ್ರಾಣಿ ಪಕ್ಷಿಗಳ ಚಿಲಿ-ಪಿಲಿ ಕಾಣುವುದರ ಜೊತೆಗೆ ಈ ಬಾಗದ ರೈತರ ಬದುಕು ಅಸನಾಗುತ್ತದೆ.
ಸರ್ಕಾರ ಇದಕ್ಕಾಗಿಯೇ ಅಮೃತ ಸರೋವರ ನಾಮಕರಣದಲ್ಲಿ ಸುಮಾರು 39 ಲಕ್ಷ ರೂ ವೆಚ್ಚದಲ್ಲಿ ನರೇಗಾ ಯೋಜನೆಯಡಿ ಈ ಕಾಮಗಾರಿ ನಡೆಯುತ್ತಿದ್ದು ತಾಲ್ಲೂಕಿನಲ್ಲಿ ಇದೇರೀತಿ 12 ಕೆರೆಗಳು ಹಲವು ಪಂಚಾಯಿತಿಯ ಹಳ್ಳಿಗಳಲ್ಲಿ ನಡೆಯುತ್ತದೆ ಸಾರ್ವಜನಿಕರು ಸಹಕರಿಸಿ ಕೆರೆ, ರಾಜಕಾಲುವೆಗಳು ಸಂರಕ್ಷಿಸಿಕೊಂಡು ಒಂದುಕೆರೆಯಿಂದ ಮತ್ತೊಂದು ಕೆರೆಗೆ ಕೋಡಿ ಹರಿದು ಹೋಗುವ ನೀರನ್ನು ಸÀಂರಕ್ಷಿಸಿಕೊಳ್ಳಲು ಸಾರ್ವಜನಿಕರು ಹೊತ್ತು ನೀಡಬೇಕು ಅಧಿಕಾರಿಗಳು ಕಾಲಕಾಲಕ್ಕೆ ಕಾಮಗಾರಿಯನ್ನು ವೀಕ್ಷಿಸಿ ಗುಣಮಟ್ಟ ಕಾಪಾಡುವುದರ ಜೊತೆಗೆ ನಿಗದಿತಕಾಲಾವದಿಯಲ್ಲಿ ಕೆಲಸವನ್ನು ಪೂರ್ಣ ಮಾಡಬೇಕೆಂದು ತಿಳಿಸಿ ಕೆರೆಯ ಬೌತಿಕ ಚಿತ್ರಣವನ್ನು ಕಂಡು ಅಭಿನಂದಿಸಿದರು.
ಈ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಓ ಉಕೇಶ್ ಕುಮಾರ್, ಯೋಜನಾ ನಿರ್ದೆಶಕಿ ಶೃತಿ, ಸಹಾಯಕ ಯೋಜನಾ ನಿರ್ದೇಶಕ ಕೃಷ್ಣಪ್ಪ, ಇಓ ಆನಂದ್, ನರೇಗಾ ಎ.ಡಿ ರಾಮಪ್ಪ, ಗ್ರಾಮ ಪಂಚಾಯಿತಿ ಅದ್ಯಕ್ಷ ಶ್ರೀನಿವಾಸ್, ಪಿಡಿಓ ಮೆಹರ್ ತಾಜ್, ನರೇಗಾ ಇಂಜನೀಯರ್ ರುದ್ರಪ್ಪ, ತಾಂತ್ರಿಕ ಇಂಜನೀಯರ್ ರಾಜು, ಸ್ಥಳಿಯರು ಹಾಜರಿದ್ದರು.