ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ 3 : ಇತ್ತೀಚಿಗೆ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯ ವಂದನಾ ಎಂಬ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು 16 ದಿನಗಳಾದರೂ ಪೊಲೀಸ್ ಇಲಾಖೆ ಬಂದಿಸುವಲ್ಲಿ ವಿಫಲರಾಗಿದ್ದಾರೆ. ಮೇ 5ನೇ ದಿನಾಂಕದೊಂದು ತಮ್ಮ ಕಚೇರಿಗೆ ಬಂದು ಆರೋಪಿಗಳನ್ನು ಬಂದಿಸುವಂತೆ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಕ್ರಮಕೈಗೊಂಡಿಲ್ಲವೆಂದು ಸಮುದಾಯ ಮುಖಂಡರು ಆರೋಪಿಸಿದರು.
ಮಂಗಳವಾರ ವಂದನಾ ಹುಟ್ಟುರಾದ ಶೆಟ್ಟಿಹಳ್ಳಿ ಗ್ರಾಮದಿಂದ ತಾಲೂಕು ಕಚೇರಿಯವರಗೆ ಪಾದಯಾತ್ರೆ ಮಾಡಿ ತಮಗೆ ಇನ್ನೂಮ್ಮೆ ಮನವಿ ಸಲ್ಲಿಸುತ್ತಿದ್ದೇವೆ. ಆರೋಪಿಗಳನ್ನು ಬಂದಿಸಿ ಹಲ್ಲೆಗೊಳಗಾದವರಿಗೆ ನ್ಯಾಯಕೊಡಿ ಎಂದು ಸಮುದಾಯದ ಮುಖಂಡರು ತಹಸೀಲ್ದಾರ್ರವರಿಗೆ ಮನವಿ ಪತ್ರವನ್ನು ನೀಡಿದರು.
ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಬ್ರಹ್ಮಾನಂದ ಸ್ವಾಮಿ, ಈ ಸಮಯದಲ್ಲಿ ವಾಲ್ಮೀಕಿ ಪ್ರಜಾಸೇನೆ ರಾಜ್ಯಾಧ್ಯಕ್ಷ ಎಂ.ಕೆ.ವೇಣುಗೋಪಾಲ್ , ವಾಲ್ಮೀಕಿ ಅಂಬೇಡ್ಕರ್ ಪ್ರಜಾಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ.ಮಹೇಶ್, ಜಿಲ್ಲಾಧ್ಯಕ್ಷ ನವೀನ್, ವಾಲ್ಮೀಕಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ನರಸಿಂಹಯ್ಯ, ವಾಲ್ಮೀಕಿ ಜಿಲ್ಲಾಧ್ಯಕ್ಷ ಹರೀಶ್ ನಾಯಕ್, ತಾಲೂಕು ಅಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ವೆಂಕಟರಮಣ, ರಾಜು, ಸಂಪತ್ತುಕುಮಾರ್, ಆನಂದ್, ಶ್ಯಾಮ್ನಾಯಕ್, ಶ್ರೀರಾಮ್ನಾಯಕ್ ಇತರರು ಇದ್ದರು.
ಆರೋಪಿಗಳ ಮೇಲೆ ಎಫ್ಐಆರ್ ಆಗಿದೆ . ಆರೋಪಿಯನ್ನು ಬಂದಿಸುವ ವ್ಯವಸ್ಥೆ ಮಾಡಲಾಗುವುದು. ಡಿವೈಎಸ್ಪಿ ರವರ ಮೂಲಕ ಎಸಿ ಕಮಿಟಿ ಕರೆಸುತ್ತೇವೆ. ಎಸ್ಸಿ ,ಎಸ್ಟಿ ಕಮಿಟಿಗೆ ತಹಸೀಲ್ದಾರ್ ಅಧ್ಯಕ್ಷ ಆಗಿರುತ್ತಾರೆ. ಆ ಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ . ಹಲ್ಲೆಗೊಳಗಾದವರಿಗೆ ಸಮಾಜಕಲ್ಯಾಣ ಇಲಾಖೆಯಿಂದ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು .