JANANUDI.COMNETWORK
ಕೋವಿಡ್ 2ನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರದ ಲಾಕ್‍ಡೌನ್ ನಿರ್ಧಾರ ಒಳ್ಳೆಯದು. ಆದರೆ, ಆಕ್ಸಿಜನ್, ಲಸಿಕೆ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತ್ಯಮ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇಂದು ಗೋಕಾಕ್‍ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಗೋಕಾಕ್ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಇಂದು ಶನಿವಾರ ಸತೀಶ ಜಾರಕಿಹೊಳಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿದರು. ವೈದ್ಯರ ಜೊತೆ ಸಮಾಲೋಚನೆ ಮಾಡಿದ ಸತೀಶ ಜಾರಕಿಹೊಳಿ ’ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು. ಬಹಳಷ್ಟು ಸೂಕ್ಷ್ಮತೆ, ಜಾಗ್ರತಿ ಮಾಡಬೇಕಾಗುತ್ತದೆ.
ಸೋಂಕಿತರ ಚಿಕಿತ್ಸೆಗಾಗಿ ಬೇಕಾದ ವಿಶೇಷ ಸೌಲಭ್ಯ ಒದಗಿಸಿ. ಇಂಥ ಸಂದಿಗ್ದ ಸ್ಥಿತಿಯಲ್ಲಿ ಸೋಂಕಿತರಿಗೆ ಬೆಡ್, ಚಿಕಿತ್ಸೆ ಸೇರಿದಂತೆ ಯಾವುದೇ ಸಮಸ್ಯೆ ಆಗದಂತೆ ತೀವ್ರ ನಿಗಾ ವಹಿಸಬೇಕಿದೆ. ಸೋಂಕಿತರ ಬಗ್ಗೆ ವಿಶೇಷ ಕಾಳಜಿ ತೋರಿ ಧೈರ್ಯ ತುಂಬುವ ಕಾರ್ಯವಾಗಬೇಕು. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಂಡು ಕಾರ್ಯನಿರ್ವಹಿಸ ಬೇಕು’ ಎಂದು ಅವರು ಸೂಚನೆ ನೀಡಿದರು