ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಂ ಐ ಟಿ ಮೂಡ್ಲಕಟ್ಟೆಯ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ

JANANUDI.COM NETWORK


ಕುಂದಾಪುರ,ಎ.23; ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತೆಯ ಕೇಂದ್ರ, ಕರ್ನಾಟಕ ಮತ್ತು ರಾಷ್ಟ್ರೀಯ ಸಾಫ್ಟ್ವೇರ್ & ಸರ್ವಿಸ್ ಕಂಪನಿಗಳ ಅಸೋಸಿಯೇಷನ್ ವತಿಯಿಂದ ನಡೆಸಲ್ಪಟ್ಟ ‘ಮಾರ್ಚ್ ಫಾರ್ ಸೆಕ್ಯೂರ್ ಕೋಡ್’  ಎಂಬ ಅತೀ ಬೇಗ ಕೋರ್ಸ್ ಮುಗಿಸುವ ಸ್ಪರ್ಧೆಯಲ್ಲಿ  ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದು ಅಗ್ರ ಹತ್ತು ವಿಜೇತರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಭಾರತ ಸರ್ಕಾರದ ನ್ಯಾಷನಲ್ ಕ್ರಿಟಿಕಲ್ ಇನ್ಫಾರ್ಮಶನ್ ಇನ್ಫ್ರಾಸ್ಟ್ರುಕ್ಚರ್ ಪ್ರೊಟೆಕ್ಷನ್ ಸೆಂಟರ್ ವತಿಯಿಂದ ನೀಡಾಲ್ಪಡುವ ಇಂಟರ್ನ್ಶಿಪ್ ಗೂ ಆಯ್ಕೆಯಾಗಿದ್ದಾರೆ. ಅಡ್ವಾನ್ಸಡ್ ಸ್ಕಿಲ್ ಡೆವಲಮೆಂಟ್ ತರಬೇತಿ ಕೇಂದ್ರವು ಈ ಕೋರ್ಸ್ ನ ಗ್ರ್ಯಾಂಡ್ ಫೈನಲ್ ನಡೆಸಿತ್ತು. ಮೂಡ್ಲಕಟ್ಟೆ ಎಂ ಐ ಟಿ  ಕಾಲೇಜು ಈ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೊದಲ ಹತ್ತು ವಿಜೇತರೊಳಗೆ ಸ್ಥಾನ ಪಡೆದವರಲ್ಲಿ ಉಡುಪಿ ಜಿಲ್ಲೆಯ ಏಕೈಕ ಕಾಲೇಜು ಆಗಿದೆ. 

827 ವಿದ್ಯಾರ್ಥಿಗಳಿಗೆ ನಡೆಸಿದ ಫೈನಲ್ ಸ್ಪರ್ಧೆಯಲ್ಲಿ ಆಗ್ರ ಹತ್ತು  ವಿಜೇತರೊಳಗೆ ಸ್ಥಾನ ಪಡೆಯೋದು ಹೆಮ್ಮೆಯ ವಿಷಯವಾಗಿದ್ದು, ಇಂತಹ ಮತ್ತಷ್ಟು ಸಾಧನೆ ಮಾಡಲಿ ಅಂತ ಶುಭಹಾರೈಸುತ್ತೇನೆ ಅಂತ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಸಿದ್ದಾರ್ಥ್ ಜೆ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ, ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಎಲ್ಲಾ ಡೀನ್, ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಎಲ್ಲಾ ಶುಭ ಹಾರೈಸಿದ್ದಾರೆ.