ಮಹಿಳೆಯರಿಗೆ , ಶಾಲಾ ಬಾಲಕಿಯರಿಗೆ ಹಾಗೂ ಸಾರಿಗೆ ನಿಗಮಕ್ಕೆ ಶಕ್ತಿ ತಂದ ರಾಜ್ಯ ಸರ್ಕಾರದ ಮಹತ್ತರ ಯೋಜನೆ ಶಕ್ತಿ ಜಾರಿಯಾಗಿ ಇಂದಿಗೆ ಒಂದು ವರ್ಷ ತುಂಬಿದೆ.
ಕುಂದಾಪುರ ಕೆಎಸ್ಆರ್ಟಿಸಿ ಡಿಪೋ ದ ಅಧಿಕೃತ ಮಾಹಿತಿ ಈ ಕೆಳಗಿನಂತಿದೆ
01 ) 2022-23 ರ ಒಟ್ಟು ವಾರ್ಷಿಕ ಆದಾಯ 41.54 ಕೋಟಿ ರೂ ಆಗಿದ್ದು ಶಕ್ತಿ ಯೋಜನೆಯು ಜಾರಿಗೊಂಡ ನಂತರ 2023-24 ನೇ ಸಾಲಿನಲ್ಲಿ 60.35 ಕೋಟಿ ರೂ ಆಗಿರುತ್ತದೆ.ಶಕ್ತಿ ಯೋಜನೆ ಬಳಕೆಯಿಂದ ಆದಾಯದಲ್ಲಿ 18.82 ಕೋಟಿ ರೂಪಾಯಿಯಂತೆ ಶೇಕಡಾ 25% ರಷ್ಟು ಆದಾಯ ಹೆಚ್ಚುವರಿಯಾಗಿರುತ್ತದೆ.
02 ) 2022-23 ರ ವಾರ್ಷಿಕ 72.54 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು.ಶಕ್ತಿ ಯೋಜನೆ ಜಾರಿಗೊಂಡ ನಂತರ 2023-24 ರಲ್ಲಿ 105.60 ಪ್ರಯಾಣಿಕರು ಪ್ರಯಾಣಿಸಿದ್ದರು.ಆದರಲ್ಲೂ 67.75 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಗಮನ ಸೆಳೆಯುವಂತದ್ದು.ಶಕ್ತಿ ಯೋಜನೆಯಿಂದ ಶೇಕಡಾ 41.70 ರಂತೆ 31.09 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುತ್ತದೆ.
03 ) ಕೋವಿಡ್ ಪೂರ್ವದಲ್ಲಿ 33 ಸಾಮಾನ್ಯ ಸಾರಿಗೆಗಳು ಬೈಂದೂರು – ಕುಂದಾಪುರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು ಪ್ರಸ್ತುತ 38 ಸಂಪೂರ್ಣ ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಮಹಿಳೆಯರ ತಲಾ ಆದಾಯಕ್ಕೆ ಮತ್ತು ಉಳಿತಾಯಕ್ಕೆ ಸಹಕರಿಸುವ ಈ ಯೋಜನೆ ದುಡಿಯುವ ವರ್ಗದ ಮಹಿಳೆಯರಿಗೆ ಅನುಕೂಲವಾಗುವುದರ ಜೊತೆಗೆ ಧಾರ್ಮಿಕ ಕೇಂದ್ರ , ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳವಾಗಿದೆ.
ಹಿಂದಿನ ಸಾಲಿನಲ್ಲಿ ಡೀಸೆಲ್ ದರ ಕೇಂದ್ರ ಸರಕಾರ ಹೆಚ್ಚಿಸಿದರೂ ರಾಜ್ಯ ಸರಕಾರ ಶಕ್ತಿಯೇತರ ಟಿಕೆಟ್ ದರ ಏರಿಸದಿರುವುದು ಬಡಜನರ ಪರ ಸರಕಾರವಿರುವುದು ಸಂತಸ ತಂದಿದೆ.
ಇಷ್ಟೆಲ್ಲ ಅನುಕೂಲ ಪಡೆದೂ ನಿನ್ನೆ ದಿನ ತಾಲೂಕು ಕಚೇರಿಯ ಬಳಿ ನಡೆದ ಶಾಲಾ ಮಕ್ಕಳ ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳೀಯ ಬೈಂದೂರು ಶಾಸಕರು ಸರಕಾರದ ಜನಪ್ರಿಯ ಶಕ್ತಿ ಯೋಜನೆಯನ್ನು ಬಹಿರಂಗವಾಗಿ ಖಂಡಿಸಲು ಬಾಲಕಿಯರಿಗೆ ಪ್ರೇರಪಿಸಿದ್ದು ಸರಿಯಲ್ಲ .ಇದು ಬಿಜೆಪಿಯ ಮಹಿಳಾ ವಿರೋಧಿ ನೀತಿಯ ಭಾಗವಾಗಿದೆ.
ಸರ್ಕಾರ ಸಾರಿಗೆ ವಿಭಾಗದಲ್ಲಿ ನಡೆಸಿದ ಮಹಿಳಾ ಕ್ರಾಂತಿಗೆ ಸಹಕರಿಸಿದ ಕುಂದಾಪುರ ಡೀಪೊದ ಚಾಲಕರು , ನಿರ್ವಾಹಕರು ಮತ್ತು ಸಿಬ್ಬಂದಿಯರ ಸೇವೆ ಶ್ಲಾಘನೀಯವೆಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪತ್ರಿಕೆಗೆ ತಿಳಿಸಿದರು.