ಕುಂದಾಪುರ, ಮಾ.21: ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ 22-23 ನೆ ಸಾಲಿನ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಇತ್ತಿಚೆಗೆ ಚರ್ಚ್ ಸಭಾ ಭವನದಲ್ಲಿ ನಡೆಯಿತು. ಕಳೆದ ಸಾಲಿನ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಅಧ್ಯಕ್ಷೆ ಪುನರಾಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷಾರಾಗಿ ಬರ್ನಾಡ್ ಡಿಕೋಸ್ತಾ, ನಿಯೋಜಿತ ಅಧ್ಯಕ್ಷರಾಗಿ ಪ್ರೇಮಾ ಡಿಕುನ್ಹಾ, ಕಾರ್ಯದರ್ಶಿಯಾಗಿ ವಾಲ್ಟರ್ ಜೆ ಡಿಸೋಜಾ, ಉಪಾಧ್ಯಕ್ಷರಾಗಿ ಡಾ. ಸೋನಿ ಡಿಕೋಸ್ತಾ, ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್, ಖಜಾಂಚಿಯಾಗಿ ಆಲ್ಡ್ರಿನ್ ಡಿಸೋಜಾ. ಸಹಾಯಕ ಖಜಾಂಚಿಯಾಗಿ ವಿಲ್ಸನ್ ಡಿ’ಆಲ್ಮೇಡಾ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ಜೂಲಿಯೆಟ್ ಪಾಯ್ಸ್, ರಾಜಕೀಯ ಸಂಚಾಲಕರಾಗಿ ಆಶಾ ಕರ್ವಾಲ್ಲೊ, ಸರ್ಕಾರ ಸೌಲಭ್ಯಗಳ ಸಂಚಾಲಕರಾಗಿ ವಿನೋದ್ ಕ್ರಾಸ್ಟೊ ಆಂತರಿಕ ಲೆಕ್ಕ ಪರಿಶೋಧಕರಾಗಿ ಜಾನ್ಸನ್ ಡಿ’ಆಲ್ಮೇಡಾ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ಮಾಜಿ ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷರುಗಳಾದ ಹೇರಿಕ್ ಗೊನ್ಸಾಲ್ವಿಸ್ ಚುನಾವಣಾ ಅಧಿಕಾರಿಯಾಗಿ ಮತ್ತು ವೀಕ್ಷಕರಾಗಿ ಪ್ರೆಸಿಲ್ಲಾ ಮಿನೆಜೆಸ್ ನಡೆಸಿಕೊಟ್ಟರು. ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವ|ಸ್ಟ್ಯಾನಿ ತಾವ್ರೊ ನೂತನ ಕಾರ್ಯಕಾರಿಸಮಿತಿಗೆ ಶುಭ ಕೋರಿದರು.