ಕೋಲಾರ,ಏ.26: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಡಬ್ಯೂ.ಎಪ್.ಐ ಮುಖ್ಯಸ್ಥ ಮತ್ತು ಬಿ.ಜೆ.ಪಿ ಸಂಸದ ಬ್ರೀಜ್ ಭೂಷನ್ ಶರಣ್ ಸಿಂಗ್ ವಿರುದ್ದ ಕಾನೂನು ಕ್ರಮ ಕೈಗೊಂಡು ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳನ್ನು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ರವರು ದಿನದ 24 ಗಂಟೆ ಎರಡು ವರ್ಷದ ಹಸುಗೂಸಿನಿಂದ 80 ವರ್ಷದ ವೃದ್ದೆ ಮಹಿಳೆಯವವರೆಗೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಚಾರ, ವರದಕ್ಷಿಣೆ ಕಿರುಕುಳ ಹೀಗೆ ಒಂದಲ್ಲಾ ಒಂದು ಪ್ರಕರಣ ನಡೆಯುತ್ತಿರುವಾಗ ಮಹಿಳೆಯರಿಗೆ ರಕ್ಷಣೆ ಕೊಡಬೇಕು ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಇಡಬೇಕೆಂದು ಸಾರ್ವಜನಿಕ ಭಾಷಣಗಳಲ್ಲಿ ಉದ್ದಅಗಲ ಮಾತನಾಡುವ ದೇಶದ ಮಾನ್ಯ ಪ್ರಧಾನ ಮಂತ್ರಿಗಳೇ ಮಹಿಳೆಯರಿಗೆ ರಕ್ಷಣೆ ಇದೆಯೇ? ಎಂಬುಂದು ನಿಮ್ಮ ಅನಿಸಿಕೆಯೇ ಅಥವಾ ಮಹಿಳೆಯರನ್ನು ಪುರಾತನ ಕಾಲದಂತೆ ಮನೆಯ 4 ಗೋಡೆಗಳ ಮದ್ಯೆ ಕೂಡಿ ಹಾಕುವ ಹುನ್ನಾರವೇ ಎಂದು ಪ್ರಶ್ನೆ ಮಾಡಿದರು.
3 ತಿಂಗಳಿಂದ ಮಹಿಳಾ ಕುಸ್ತಿಪಟುಗಳು ಶರಣ್ಸಿಂಗ್ ವಿರುದ್ದ ಆರೋಪಗಳ ಸುರಿಮಳೆಯೇ ಸುರಿಸಿ ಹೆಣ್ಣಾಗಿ ಹುಟ್ಟಿರುವ ನಮಗೆ ಈ ಶಿಕ್ಷೆ ಬೇಕೇ ಹೆಣ್ಣು ಸಂಸಾರಕ್ಕೆ ಮಾತ್ರ ಸೀಮಿತವಾಗಬೇಕೇ ಎಂದು ಏನಾದರೂ ಸಾಧನೆ ಮಾಡಿ ಜನ್ಮ ಕೊಟ್ಟ ತಂದೆ ತಾಯಿಗೆ ದೇಶಕ್ಕೆ ಕೀರ್ತಿ ತರುವ ಛಲ ಇರುವ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿಯುತ್ತಿರುವ ಕಾಮುಕ ಸಂಸದರ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ತಮ್ಮ ಪಕ್ಷದ ಸಂಸದರೆಂದು ಅವರನ್ನು ರಕ್ಷಣೆ ಮಾಡಲು ಹೋರಟಿದ್ದೀರೆಯೇ ದೇಶದ ಹೆಣ್ಣೂ ಮಕ್ಕಳ ಮೇಲೆ ನಿಮಗೆ ಗೌರವ ಇದ್ದರೆ ಕೂಡಲೇ ಕುಸ್ತಿಪಟುಗಳಿಗೆ ಮಾನಸಿಕ ಹಿಂಸೆ ಲೈಂಗಿಕ ದೌರ್ಜನ್ಯ ನೀಡುತ್ತಿರುವ ಸಂಸದರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಿ ಇವರ ವಿರುದ್ದ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ದೇಶದ ಗೌರವ ಕೀರ್ತಿ ಹೊರಟಿರುವ ಮಹಿಳಾ ಕುಸ್ತಿಪಟುಗಳಿಗೆ ರಕ್ಷಣೆ ನೀಡಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳನ್ನು ಒತ್ತಾಯ ಮಾಡಿದರು.