ಮುಳಬಾಗಿಲು.ಏ.30, ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣವನ್ನು ಪರಿಗಣಿಸಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಆರೋಪಿ ಕಾಮಾಂದಕ ಪ್ರಜ್ವಲ್ ರೇವಣ್ಣ ವಿರುದ್ದ ಕಠಿಣ ಶಿಕ್ಷೆ ವಿದಿಸುವ ಜೊತೆಗೆ ಪೆನ್ಡ್ರೈವ್ ಗಳನ್ನು ಹಂಚಿಕೆ ಮಾಡಿದರವರ ವಿರುದ್ದ ಕ್ರಮ ಜರುಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಪತ್ರಿಕಾ ಹೇಳಿಕೆ ಮುಖಾಂತರ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಒತ್ತಾಯಿಸಿದರು.
ನಗರದ ಹೊರವಲಯದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ಮಹಿಳಾ ಘಟಕದ ಸಭೆಯಲ್ಲಿ ಮಾತನಾಡಿದ ರವರು ಪ್ರತಿದಿನ ಪ್ರತಿ ಕ್ಷಣ ಒಂದು ವರ್ಷದ ಮಗುವಿನಿಂದ 80 ವರ್ಷದ ಮುದುಕಿಯ ಮೇಲೆ ಒಂದಲ್ಲಾ ಒಂದು ಲೈಂಗಿಕ ದೌರ್ಜನ್ಯ ವರದಕ್ಷಿಣೆ ಕಿರುಕುಳ, ಪ್ರೀತಿ ಪ್ರೇಮದ ಕೊಲೆ, ಮರ್ಯಾದೆ ಹತ್ಯೆಗಳು ನಡೆಯುತ್ತಿದ್ದರೂ ಸರ್ಕಾರ ಪ್ರಕರಣಗಳನ್ನು ಗಂಬೀರವಾಗಿ ಏಕೆ ಪರಿಗಣಿಸುತ್ತಿಲ್ಲ? ಇನ್ನೇಷ್ಟು ಹೆಣ್ಣುಮಕ್ಕಳ ಬಲಿಬೇಕು ಸರ್ಕಾರಕ್ಕೆ ಕಾಮಾಂದಕರಿಗೆ ಶಿಕ್ಷೆ ಆಗಲು ಕಾನೂನು ರಚನೆ ಮಾಡಲು ಮೌನವೇಕೆ ಎಂದು ಪ್ರಶ್ನೆ ಮಾಡಿದರು.
ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿಜಿ ಹೇಳಿದಂತೆ ಮದ್ಯ ರಾತ್ರಿ ಹೆಣ್ಣುಮಕ್ಕಳು ಒಬ್ಬಟ್ಟಿಯಾಗಿ ನಿರ್ಬೀತಿಯಿಂದ ಓಡಾಡಿದರೆ ಮಾತ್ರ ನಿಜವಾದ ಸ್ವಾತಂತ್ರ್ಯ ಎಂಬುದು ಅವರ ಸಾವಿನಲ್ಲಿಯೇ ಮಣ್ಣಾಗಿದೆ. ಜೊತೆಗೆ ಬಾಬಾ ಸಾಹೇಬ್ ಆಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿರುವ ನಾವು ಮಾನವೀಯತೆ ಮರೆತಿದ್ದೀರಿಯೇ? ಹೆಣ್ಣುಮಕ್ಕಳೆಂದರೆ ಶ್ರೀಮಂತರಿಗೆ ಬೋಗದ ವಸ್ತುವಾಗಿದೆಯೇ ಎಂದು ಸಭೆಯಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನೆನೆದು ಕಣ್ಣೀರು ಹಾಕಿದರು.
ಇಡೀ ಪ್ರಪಂಚದಲ್ಲಿಯೇ ಅತಿ ದೊಡ್ಡ ಲೈಂಗಿಕ ಹಗರಣವೆಂದರೆ ಪ್ರತಿಷ್ಠಿತ ಕುಟುಂಬದಲ್ಲಿ ಜನಸಿ ಪ್ರಜಾಪ್ರಭುತ್ವದಲ್ಲಿ ಪ್ರಜಾ ನಾಯಕನಾಗಿರುವ ಕಾಮಾಂದಕ ಕಿಡಿಗೇಡಿ ಹೆಣ್ಣುಮಕ್ಕಳನ್ನು ಕಾಲ ಕಸದಂತೆ ಕಂಡಿರುವ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆ ಹೆಣ್ಣುಮಕ್ಕಳ ಬೆತ್ತಲೆ ದೇಹವನ್ನು ಮೋಬೈಲ್ನಲ್ಲಿ ಚೀತ್ರೀಕರಣ ಮಾಡಿ ವಿಕೃತಿ ಮೆರೆದಿರುವ ಪ್ರಜ್ವಲ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆ ಮುಂದೆ ನೋಡುತ್ತಿರುವ ಉದ್ದೇಶವಾದರೂ ಏನೂ? ಬಡ ಮಕ್ಕಳಿಗೆ ನ್ಯಾಯ ಕೊಡಿಸಲು ಹಿಂದೇಟು ಹಾಕಿ ಪ್ರಭಾವಿ ರಾಜಕಾರಣಿಯ ಕುಟುಂಬವನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದರು.
ರೈತ ಮಹಿಳೆ ಶೈಲಜ ಮಾತನಾಡಿ ಪ್ರಜೆಗಳಿಂದ ಆಯ್ಕೆ ಆಗಿ ಪ್ರಜಾ ಸೇವಕರಾಗಿ ಆ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕಾದ ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿರುವ ಹಾಸನದ ಪ್ರಜ್ವಲ್ ರೇವಣ್ಣ ಬಡ ಹೆಣ್ಣುಮಕ್ಕಳನ್ನು ಹೆದರಿಸಿ ಬೆದರಿಸಿ ತನ್ನ ಕಾಮ ತೀಟೆ ತೀರಿಸಿಕೊಳ್ಳಲು ಬಡವರೇನೂ ಮೈ ಮಾರಿಕೊಳ್ಳುವವರೇ? ನಿಮ್ಮ ಪ್ರತಿಷ್ಠಿತ ಕುಟುಂಬಗಳ ಹೆಣ್ಣು ಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ನಡೆದರೆ ಕಾನೂನು ರಚನೆ ಮಾಡಿ ನ್ಯಾಯ ಪಡೆದುಕೊಳ್ಳುವ ರಾಜಕಾರಣಿಗಳೇ ವಿಕೃತ ಕಾಮಿ ಉಮೇಶ್ರೆಡ್ಡಿಯನ್ನು ಮೀರಿಸುವ ಆಯೋಗ್ಯ ಪ್ರಜ್ವಲ್ ರೇವಣ್ಣ ವಿರುದ್ದ 24 ಗಂಟೆಯಲ್ಲಿ ಕಾನೂನು ಕ್ರಮ ಕೈಗೊಳ್ಳದೆ ಎಲ್ಲಾ ಸಾಕ್ಷಾದಾರಗಳಿದ್ದರೂ ಪ್ರಕರಣವನ್ನು ಎಸ್.ಐ.ಟಿ ತನಿಖೆ ಎಂದು ಆರೋಪಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದೀರಾ ಎಂದು ಸರ್ಕಾರವನ್ನು ತರಟೆಗೆ ತೆಗೆದುಕೊಂಡರು.
48 ಗಂಟೆಯಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿ ವಿಡಿಯೋ ಚಿತ್ರೀಕರಣ ಮಾಡಿರುವ ಕಾಮಾಂದಕ ಪ್ರಜ್ವಲ್ ರೇವಣ್ಣ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಈ ಪ್ರಕಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಆರೋಪಿಗೆ ಸಾರ್ವಜನಿಕವಾಗಿ ಗಲ್ಲುಶಿಕ್ಷೆ ವಿದಿಸುವ ಮುಖಾಂತರ ಮುಂದಿನ ದಿನಗಳಲ್ಲಿ ಸಾವೇ ಗತಿ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನೆ ಮಾಡಬೇಕೆಂದು ಒತ್ತಾಯ ಮಾಡುವ ಜೊತೆಗೆ ಪ್ರಕರಣವನ್ನು ತಿರುಚಿ ಆರೋಪಿಯನ್ನು ರಕ್ಷಣೆ ಮಾಡಲು ಮುಂದಾದರೆ ಸರ್ಕಾರದ ವಿರುದ್ದ ಲಕ್ಷಾಂತರ ಮಹಿಳೆಯರೊಂದಿಗೆ ಪೊರಕೆ ಚಳುವಳಿ ಮಾಡುವ ಎಚ್ಚರಿಕೆಯನ್ನು ಸಭೆಯಲ್ಲಿ ಸರ್ಕಾರಗಳಿಗೆ ನೀಡಿದರು.
ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಮಂಗಸಂದ್ರ ತಿಮ್ಮಣ್ಣ, ಸುಪ್ರೀಂ ಚಲ, ಶೈಲಜ, ರಾಧ, ನಾಗರತ್ನ, ಸುಧಾ, ಚೌಡಮ್ಮ, ಶೋಭ, ವಿನಿತ್ಗೌಡ, ಅಪ್ಪೋಜಿರಾವ,, ತೆರ್ನಹಳ್ಳಿ ಆಂಜಿನಪ್ಪ ಯಲ್ಲಪ್ಪ ಮುಂತಾದವರಿದ್ದರು.