ಆಕ್ಷಿಜನ್ ಪೂರೈಕೆ ಬಗ್ಗೆ ಹೈಕೋರ್ಟ್ ಅದೇಶ ಪ್ರಶ್ನಿಸಿಸಿದ ಕೇಂದ್ರಕ್ಕೆ ಹಿನ್ನಡೆ, ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

JANANUDI.COM NETWORK

ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯಕ್ಕೆ ದೈನಂದಿನ  ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಹಂಚಿಕೆಯನ್ನು 965 ಮೆ. ಟನ್ ನಿಂದ 1200 ಮೆ. ಟನ್ ಗೆ ಹೆಚ್ಚಿಸುವಂತೆ ಕೇಂದ್ರಕ್ಕೆ ಆದೇಶಿಸಿದ್ದ , ಈ ಆದೇಶವನ್ನು ಪ್ರಶ್ನಿಸಿ ಕೇಂದ್ರವು  ಸುಪ್ರೀಂ ಕೋರ್ಟ್ನಲ್ಲಿ ಕೇಳಿತ್ತು. ಆದರೆ ಸುಪ್ರೀಂ ಕೊರ್ಟ್, ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

  ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರ ನ್ಯಾಯಪೀಠವು ಮೇ 5 ರ ಹೈಕೋರ್ಟ್ ಆದೇಶದ ಬಗ್ಗೆ ತನ್ನ ನಿರ್ಣಯವನ್ನು ನೀಡಿದೆ. ಅಲ್ಲದೆ ಹೈಕೋರ್ಟ್ ಉದ್ದೇಶಪೂರ್ವಕವಾಗಿ ಮತ್ತು ನ್ಯಾಯಯುತವಾಗಿ ಅಧಿಕಾರ ಚಲಾಯಿಸಿದೆ ಎಂದು ಅಭಿಪ್ರಾಯಪಟ್ಟಿತು.

   ದೇಶದಲ್ಲಿನ ಪ್ರತಿ ಹೈಕೋರ್ಟ್ ಸಹ ಆಮ್ಲಜನಕ ಹಂಚಿಕೆಗಾಗಿ ಆದೇಶಗಳನ್ನು ರವಾನಿಸಲು ಪ್ರಾರಂಭಿಸಿದರೆ, ಅದು ದೇಶದ ಆಮ್ಲಜನಕ ಸರಬರಾಜು ಜಾಲವನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎನ್ನುವ ಕೇಂದ್ರದ ವಾದವನ್ನು ಒಪ್ಪಿಕೊಳ್ಳಲು ಕೋರ್ಟ್ ನಿರಾಕರಿಸಿದ್ದು’  ಇದು ಕೇಂದ್ರ ಸರಕಾರಕ್ಕೆ ಮುಖ ಭಂಗವಾಗಿದೆ.