ಕುಂದಾಪುರ, ಡಿ.12; ಹಿರಿಯ ಶಿಕ್ಷಕಿ ಮಾಗ್ಗಿ ಟೀಚರ್ ಎಂದೇ ಖ್ಯಾತ ನಾಮರಾದ ಪ್ರಾರ್ಥಮಿಕ ಶಾಲೆಯ ಶಿಕ್ಷಕಿ ಮರಿಯ ಕ್ರಾಸ್ತ ಅಲ್ಪ ಕಾಲದ ಅಸೌಖ್ಯದಿಂದ ಡಿಸೆಂಬರ್ 11 ರಂದು ನಿಧನ ಹೊಂದಿದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಅವರು ಹೇರಿಕುದ್ರುವಿನ ಭಾಗವಾದ ಕಮಾಸ್ತಾನ ಕುದ್ರುವಿನ ದಿವಂಗತ ಎಡ್ವಿನ್ ಡಿಆಲ್ಮೇಡಾ ಅವರ ಪತ್ನಿಯಾಗಿದ್ದರು. ಅವರು ಹೊಸಾಡು, ತಲ್ಲೂರು, ಹೆಮ್ಮಾಡಿ, ಹಟ್ಟಿಯಂಗಡಿ ಮತ್ತು ಉಪ್ಪಿನಕುದ್ರುವಿನಲ್ಲಿ ಸುಧೀರ್ಘ ೨೪ ವರ್ಷ ಸೇವೆ ಮಾಡಿದ್ದರು, ಅವರು ಇನ್ನಿತರ ಕಡೆ ಶಿಕ್ಷಕಿಯಾಗಿ , 36 ವರ್ಷಕಿಂತಲು ಹೆಚ್ಚು ವರ್ಷ ಸೇವೆ ನೀಡಿದ್ದರು, ಅವರು ಕುಂದಾಪುರ ಹೋಲಿ ರೋಜರಿ ಇಗರ್ಜಿಯ ವ್ಯಾಪ್ತಿಗೆ ಒಳಪಟ್ಟ ಸಂತ ಅಂತೋನಿ ವಾಳಗೆ ಎರಡು ಅವಧಿಗೆ (೧೦ ವರ್ಷ) ಗುರಿಕಾರರಾಗಿ ಸೇವೆ ನೀಡಿದ್ದು, ಸಂತ ವಿನ್ಸೆಂಟ್ ಸಭೆಯಲ್ಲಿ ಹಲವು ವರ್ಷ ಸೇವೆ ನೀಡಿದ್ದರು. ಅವರು 2 ಪುತ್ರರು, 2 ಪುತ್ರಿಯರನ್ನು, ಬಂಧು ಬಳಗ ಮತ್ತು ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿ ವ್ರಂದದವರನ್ನು ಅಗಲಿದ್ದಾರೆ