ಕುಂದಾಪುರ, ನ.12; ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕುಟುಂಬ ಆಯೋಗದ ಮುಂದಾಳತ್ವದಲ್ಲಿ ಕುಂದಾಪುರದಲ್ಲಿ ಹಿರಿಯ ನಾಗರಿಕರ ದಿನ ಹಾಗೂ ಹಿರಿಯ ನಾಗರಿಕರ ಸಂಘದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಮೊದಲಿಗೆ ಚರ್ಚಿನ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನವನ್ನು ಹಿರಿಯ ನಾಗರಿಕರ ಜೊತೆ ಅರ್ಪಿಸಿ ‘ಹಿರಿಯ ನಾಗರಿಕರು ನಮ್ಮ ಆಸ್ತಿ, ಇಂದು ನಿಮ್ಮ ಮಕ್ಕಳು ಉತ್ತಮ ಮಟ್ಟಕ್ಕೆ ಬೆಳೆದಿದ್ದರೆ, ನೀವು ತೋರಿಸಿದ ದಾರಿಯಾಗಿದೆ. ನಿಮಗೆ ವಿಶ್ವಾಸವು ದೇವರಲ್ಲಿ ಅಚಲವಾಗಿದೆ, ಇಂದು ದೇವಸ್ಥಾನಕ್ಕೆ ಭಕ್ತಿಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿದ್ದರೆ ಅವರು ಹಿರಿಯರು. ನಿಮ್ಮಿಂದ ನಿಮ್ಮ ಮಕ್ಕಳು ಉಂಟಾಗಿದ್ದಾರೆ, ನೀವು ಇರದಿದ್ದರೆ ನಿಮ್ಮ ಮಕ್ಕಳು ಎಲ್ಲಿರುತಿದ್ದರು? ನೀವು ಸಮಾಜದ ಅಲಂಕಾರ, ಚೆಂದ. ಉತ್ತಮ ಕೌಟುಂಬಿಕ ಜೀವನ ಸಾರಿದವರು ನೀವು, ಉತ್ತಮ ಸಂಸ್ಕಾರ, ಹಿಂದಿನವರ ಸಂಸ್ಕಾರವನ್ನು ಬೆಳೆಸಿದವರು ನೀವು, ನಿಮ್ಮಂತಹ ಹಿರಿಯರಿಗೆ ನಮ್ಮ ಯುವ ಸಮುದಾಯ ಒಳ್ಳೆಯ ರೀತಿಯಲ್ಲು ನಡೆಸಿಕೊಳ್ಳುವುದು ಅವರ ಕರ್ತವ್ಯವಾಗಿದೆ’ ಎಂದು ಸಂದೇಶ ಸಾರಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಆರೋಜ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ‘ಹಿರಿಯರಾದ ನೀವು ಸಮಾಜದ ಗೌರವಾನಿತರು, ನಿಮ್ಮ ಬಿಳಿಕೂದಲು ಅತ್ಯಮುಲ್ಯ ಇದು ನಾನು ಹೇಳುವುದಲ್ಲ, ನಮ್ಮ ಪೋಫ್ ಸ್ವಾಮಿಯವರೇ ಹೇಳುತ್ತಾರೆ, ನಿಮ್ಮ ಕಶ್ಟಗಳೆಲ್ಲವೂ ನಮಗೆ ತಿಳಿದಿದೆ, ನಿಮಗೆ ಮಕ್ಕಳ ಪ್ರೀತಿ ಬೇಕು, ಇಂದು ಒಳ್ಳೆಯ ಹುದ್ದೆಗಳೆಲ್ಲಿ ಇದ್ದರೂ, ಎಷ್ಟೋ ಹಿರಿಯವರು ಪೇಯಿಂಗ್ ಗೆಸ್ಟ್ ಗಳಲ್ಲಿ ಇದ್ದಾರೆ, ಹಬ್ಬ ಹರಿದಿನ ಬಂದರೆ ಅವರಿಗೆ ಶುಭಾಷಯ ಕೋರಲು ಕೂಡ ಬರುವುದಿಲ್ಲಾ, ಅವರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ,ನಮ್ಮಲ್ಲಿ ಹಿರಿಯರನ್ನು ನೋಡಿಕೊಳ್ಳುವ ಪೇಯಿಂಗ್ ಗೆಸ್ಟ್ಗಳು ಹೆಚ್ಚುತ್ತಿವೆ, ಅದು ಕಡಿಮೆಯಾಗಬೇಕು, ನಮ್ಮ ಹಿರಿಯವರು, ನಮ್ಮೊಡನೆಯೇ ಇರಬೇಕು, ಅವರು ಕಿರಿ ಕಿರಿ ಅನ್ನಿಸಬಹುದು, ಅವರಿಗೆ ವಯಸ್ಸಾಗಿದೆ ಕೆಲವೊಂದು ಸಲಹ ಅದು ವಯೋಸಹಜ ಸಮಸ್ಯೆಯಾಗಿರುತ್ತೆ. ಹಿರಿಯರು ಕೂಡ ಮಕ್ಕಳಲ್ಲಿ ಅಸಹನೇ ತೊರಿಸಬಾರದು, ಆದಷ್ಟು ನಾವು ಸಹನೆಯಿಂದ ಇರಬೇಕು’ ಹೀಗೆ ಹಲವಾರು ಸಮಸ್ಯೆಗಳನ್ನು ಮುಂದಿಡುತ್ತಾ’ ಅವರು ಹಿರಿಯ ನಾಗರಿಕ ಸಂಘಕ್ಕೆ ಚಾಲನೆ ನೀಡಿದರು. ಹಿರಿಯ ನಾಗರಿಕರ ಸಂಘಕ್ಕೆ ಕುಟುಂಬ ಆಯೋಗದ ಸಂಚಾಲಕಿ ಪ್ರಧಾನಾದರೆ, ಅಧ್ಯಕ್ಷರಾಗಿ ವಿನ್ಸೆಂಟ್ ಡಿಸೋಜಾ, ಕಾರ್ಯದರ್ಶಿಯಾಗಿ ಫಿಲೋಮಿನಾ ಡಿಆಲ್ಮೇಡಾ ಆಯ್ಕೆಯಾದರು.
ಸುಮಾರು 70 ಮಂದಿ 65 ವರ್ಷ ಮೆಲ್ಪಟ್ಟವರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಕುಂದಾಪುರ ಚರ್ಚಿನ ಕುಟುಂಬ ಆಯೋಗದ ಸಂಯೋಜಕಿ ಜೂಲಿಯಾನ ಮಿನೇಜೆಸ್ ಸ್ವಾಗತಿಸಿದರು, ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ,ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಆಯೋಗದ ಸದಸ್ಯರಾದ ವೈಲೆಟ್ ಡಿ ಸೋಜಾ, ಸೆಲೆಸ್ಟಿನ್ ಡಿ ಸೋಜಾ, ರಾಬರ್ಟ್ ಶಾಲೆಟ್ ಡಿ ಸೋಜಾ, ಪ್ರೀತಿ ಕರ್ವಾಲ್ಲೊ, ಎಡಿಟಾ ಡಿಸೋಜಾ, ರೋಶನಿ ಡಿ ಸಿಲ್ವಾ, ಶಾಲೆಟ್ ಬರೆಟ್ಟೊ, ಹೆಲೆನ್ ಡಿಸೋಜಾ, ಮೆಲ್ವಿನ್ ಫೆನಾರ್ಂಡಿಸ್ ಉಪಸ್ಥಿತರಿದ್ದರು. ಶೋಭಾ ವಾಜ್ ಅತಿಥಿಗಳನ್ನು ಪರಿಚಯಿಸಿದರು. ಡಿಫೆÇಡಿಲ್ ಕ್ರಾಸ್ತಾ, ಮೇಬಲ್ ಪುಟಾರ್ಡೊ ಕಿರು ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಜೆರಾಲ್ಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು, ಜ್ಯೋತಿ ಕ್ರಾಸ್ತಾ ವಂದಿಸಿದರು.