29 ಅಕ್ತೋಬರ್ (ಮಂಗ್ಳುರ್): ಆಶಾವಾದಿ ಪ್ರಕಾಶನಾನ್ ಸಾಂ ಜುಜೆ ಸೆಮಿನರಿಚ್ಯಾ ಸಭಾಸಾಲಾಂತ್ ’ಕೊಂಕಣಿ ರಂಗ್ಮಂಚ್ ಆನಿ ನಾಟಕಾಂಚೆರ್’ ಮಾಂಡುನ್ ಹಾಡ್ಲ್ಲೆಂ ಆದೇಸಾಚೆಂ ಪರಿಸಂವಾದ್ ಕಾರ್ಯೆಂ 29 ಅಕ್ತೋಬರ್ ತಾರಿಕೆರ್ (ಆಯ್ತಾರಾ) ಸಕಾಳಿಂ 10 ಥಾವ್ನ್ 1 ಪರ್ಯಾಂತ್ ಚಲ್ಲೆಂ. ಆಶಾವಾದಿ ಪ್ರಕಾಶನಾನ್ ಮಾ ದೊ ರೊನಾಲ್ಡ್ ಸೆರಾವೊಚ್ಯಾ ’ದಾನಿಯೆಲ್ ಆನಿ ಎಸ್ತೆರ್ ರಾಣಿ’ ನಾಂವಾಚಿಂ ದೋನ್ ಲಿಪಿಂನಿ ಪರ್ಗಟ್ಲೆಲಿಂ ದೋನ್ ನಾಟಕಾಂಚಿಂ ಪುಸ್ತಕಾಂ ತಶೆಂಚ್ ಪಯ್ಣಾರಿ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲಾಚೆಂ ಉಗ್ತಾವಣ್ ಕಾರ್ಯೆಂ ಚಲವ್ನ್ ವ್ಹೆಲೆಂ.
ಸಕಾಳಿಂ ಧಾ ವೊರಾಂಚೆರ್ ದಿವೊ ಪೆಟವ್ನ್ ಮಾನೆಸ್ತಿಣ್ ಮೀನಾ ರೆಬಿಂಬಸಾಚ್ಯಾ(ಕೊಂಕಣಿ ಮೈನಾ) ಹಾತಿಂ ಕಾರ್ಯಾಚೆಂ ಉಗ್ತಾವಣ್ ಕೆಲೆಂ. ಮುಖೆಲ್ ಸಯ್ರೊ ಜಾವ್ನ್ ಸಾಹಿತ್ಯ್ ಅಕಾಡೆಮಿಚೊ ಸಂಚಾಲಕ್ ಮಾನೆಸ್ತ್ ಮೆಲ್ವಿನ್ ರೊಡ್ರಿಗಸ್, ತಶೆಂಚ್ ಸಯ್ರಿಂ ಜಾವ್ನ್ ಮಾನೆಸ್ತಿಣ್ ಮಾರಿಯೆಟ್ ರಾಸ್ಕಿನ್ಹಾ, ಮಾನೆಸ್ತಿಣ್ ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ ತಶೆಂಚ್ ನಾಟಕಾಂ ಬರವ್ಪಿ ಮಾ ದೊ ರೊನಾಲ್ಡ್ ಸೆರಾವೊ ವೆದಿಚೆರ್ ಆಸ್ಲಿಂ. ಸೂತ್ರ್ ಸಂಚಾಲನ್ ಕೆಲ್ಲ್ಯಾ ಮಾನೆಸ್ತ್ ಅರುಣ್ ಅಜೆಕಾರಾನ್ ಪರಿಸಂವಾದಾಚ್ಯಾ ಮಹತ್ವಾವಿಶಿಂ ಸಾಂಗುನ್, ವೆದಿಚೆರ್ ಆಸ್ಲ್ಲ್ಯಾ ಮಾನ್ ಮನ್ಶಾಂಚಿ ಒಳೊಕ್ ಕರ್ತಚ್, ಮಾ ದೊ ರೊನಾಲ್ಡ್ ಸೆರಾವೊನ್ ಯೆವ್ಕಾರಾಚೆಂ ಉಲವ್ಪ್ ಕರ್ತಚ್ ಬಾಯ್ ನಿಯೊನಾ ಡಿಸೋಜಾನ್ ಸರ್ವ್ ಮಾನ್ ಸಯ್ರ್ಯಾಂಕ್ ಕೊಂಕಣಿ ಪುಸ್ತಕಾಂ ದಿವುನ್ ಸ್ವಾಗತ್ ಕೆಲೊ. ಮಾರಿಯೆಟ್ ರಾಸ್ಕಿನ್ಹಾ ಆನಿ ಮೆಲ್ವಿನ್ ರೊಡ್ರಿಗಸಾನ್ ಅಪ್ಲ್ಯಾ ಉಲವ್ಪಾಂತ್ ಕೊಂಕಣಿ ನಾಟಕಾಂಚ್ಯಾ ಸುರ್ವಿಲ್ಯಾ ದಿಸಾಂಚಿ ಮೊಟ್ವಿ ಯಾದ್ ಕರುನ್ ಸುರ್ವಿಲ್ಯಾ ನಾಟಕಿಸ್ತಾಂನಿ ನಾಟಕ್ ಶೆತಾಕ್ ದಿಲ್ಲ್ಯಾ ಅಮೊಲಿಕ್ ದೇಣ್ಗೆಚಿ ಮಾಹೆತ್ ದಿಲಿ.
ಪರಿಸಂವಾದ್ ಕಾರ್ಯಾಚೆಂ ಸಂಚಾಲನ್ ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವನ್ ಚಯ್ಲೆಂ, ಮಾನೆಸ್ತ್ ಜೋನ್ ಎಮ್ ಪೆರ್ಮನ್ನೂರ್ ಹಾಣೆ ಕೊಂಕಣಿ ನಾಟಕಾಂಚ್ಯಾ ಶೆಂಬೊರ್ ಆನಿ ಧಾ ವರ್ಸಾಂಚ್ಯಾ ಇತಿಹಾಸಾಚೆರ್ ಘಾಲ್ಲಿ ಸುಕ್ಣ್ಯಾನದರ್ ಭೋವ್ ಅಪುರ್ಭಾಯೆನ್ ಸಾದರ್ ಕೆಲಿ, ಮಾನೆಸ್ತ್ ಅರುಣ್ ರೊಡ್ರಿಗಸಾನ್ ಕೊಂಕಣಿ ನಾಟಕಾಂನಿ ಜಾಲ್ಲ್ಯಾ ವೆಗ್-ವೆಗಳ್ಯಾ ರಿತಿಚ್ಯಾ ಪ್ರಯೋಗಾಂಚೆರ್ ಭೋವ್ ಅಪುರ್ಭಾಯೆಚಿ ಮಾಹೆತ್ ದಿಲಿ. ಮಾನೆಸ್ತ್ ರಿಚಾರ್ಡ್ ಮೋರಸಾನ್ ಗಲ್ಫಾಂತ್ ಕೊಂಕಣಿ ನಾಟಕಾಂ ವಿಶ್ಯಾಚೆರ್ ಅಪ್ಲೆಂ ಉಲವ್ಪ್ ಕರ್ತಚ್ ಮಾ ದೊ ರೊನಾಲ್ಡ್ ಸೆರಾವೊನ್ ಕೊಂಕಣಿ ಧಾರ್ಮಿಕ್ ನಾಟಕಾಂಚಿ ಗರ್ಜ್ ಮ್ಹಳ್ಳ್ಯಾ ವಿಶ್ಯಾಚೆರ್ ಅಪ್ಲೆಂ ಉಲವ್ಪ್ ಕೆಲೆಂ. ಕನ್ಸೆಪ್ಟಾ ಫೆರ್ನಾಂಡಿಸಾನ್ ಕಾಂಯ್ ಪನ್ನಾಸಾಂ ವಯ್ರ್ ವರ್ಸಾಂಚೊ ಇತಿಹಾಸ್ ಆಸ್ಚ್ಯಾ ರೇಡಿಯೊ ನಾಟಕಾಂಚ್ಯಾ ಇತಿಹಾಸಾವಿಶಿಂ ಉಲಯ್ಲಿ.
ಪುಸ್ತಕ್ ಉಗ್ತಾವಣ್ ಕಾರ್ಯಾಚೆಂ ಸೂತ್ರ್ ಸಂಚಾಲನ್ ಕೆಲ್ಲ್ಯಾ ಬಾಯ್ ಅನಿತಾ ಮಿನೇಜಸಾನ್ ಪುಸ್ತಕಾಂಚಿ ಮೊಟ್ವಿ ಝಳಕ್ ದಿವುನ್ ಮಾನ್ ಸಯ್ರ್ಯಾಂಕ್; ಮಾ ಬಾ ರುಪೇಶ್ ಮಾಡ್ತಾ, ದೊ ಪೂರ್ಣಾನಂದ ಚಾರಿ, ಮಾನೆಸ್ತ್ ಅವಿಲ್ ರಾಸ್ಕಿನ್ಹಾ, ಮಾನೆಸ್ತ್ ಹೇಮಾಚಾರ್ಯಾ ಆನಿ ಮಾ ದೊ ರೊನಾಲ್ಡ್ ಸೆರಾವೊ ಹಾಂಕಾಂ ವೆದಿಕ್ ಆಪವ್ನ್ ತಾಂಚಿ ಮೊಟ್ವಿ ಒಳೊಕ್ ಕರುನ್ ದಿಲಿ. ಮಾ ದೊ ರೊನಾಲ್ಡ್ ಸೆರಾವೊಚ್ಯಾ ದೋನ್ ನಾಟಕಾಂಚಿಂ ದೋನ್ ಲಿಪಿಂತ್ಲಿಂ ಪುಸ್ತಕಾಂ, ಆಶಾವಾದಿ ಪ್ರಕಾಶನಾಚಿಂ 53ವೆಂ (ಕನ್ನಡ್ ಲಿಪಿ) ತಶೆಂಚ್ 54ವೆಂ (ನಾಗರಿ ಲಿಪಿ) ’ದಾನಿಯೆಲ್ ಆನಿ ಎಸ್ತೆರ್ ರಾಣಿ’ ಪುಸ್ತಕಾಂಚಿ ಒಳೊಕ್ ಕರುನ್ ದಿಲ್ಲ್ಯಾ ಮಾ ಬಾ ರುಪೇಶ್ ಮಾಡ್ತಾನ್ ತಶೆಂಚ್ ದೊ ಪೂರ್ಣಾನಂದ ಚಾರಿನ್ ಉಗ್ತಾವಣ್ ಕೆಲಿಂ. ತ್ಯೇ ಉಪ್ರಾಂತ್ ಮಾನೆಸ್ತ್ ಲಾರೆನ್ಸ್ ವಿನೋದ್ ಬಾರ್ಬೋಜಾನ್ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲಾಚಿ ಒಳೊಕ್ ಕರುನ್ ಜಾತಚ್ ಮಾನೆಸ್ತ್ ಆವಿಲ್ ರಾಸ್ಕಿನ್ಹಾ, ಹೇಮಾಚಾರ್ಯಾ ಆನಿ ದೊ ಪೂರ್ಣಾನಂದ ಚಾರಿನ್ ಡಿಜಿಟಲ್ ಸಾಹಿತಿಕ್ ಜರ್ನಲಾಚೆಂ ಉಗ್ತಾವಣ್ ಕೆಲೆಂ.
ಮುಖೆಲ್ ಸಯ್ರ್ಯಾಂನಿ; ಆವಿಲ್ ರಾಸ್ಕಿನ್ಹಾ, ಹೇಮಾಚಾರ್ಯ, ದೊ ಪೂರ್ಣಾನಂದ ಚಾರಿ ಹಾಣಿಂ ಅಪ್ಲೆ ಸಂಧೇಶ್ ದಿತಚ್ ಹೇಮಾಚಾರ್ಯಾನ್ ಮಾನ್ ಪ್ರತಿ ದಿವುನ್ ಸಮೆಸ್ತಾಂಚೊ ಮಾನ್ ಕೆಲೊ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟಯ್ಲೆ. ಜೆಸ್ಸಿ ಲೋಬೊ ಅಜೆಕಾರ್ ಹಿಣೆಂ ಸಗ್ಳ್ಯಾ ಕಾರ್ಯಾಚೆಂ ಡಿಜಿಟಲ್ ಸೂತ್ರ್ ಸಂಚಾಲನ್ ಕೆಲೆಂ. ನಾಮ್ನೆಚೆ ಕೊಂಕಣಿ ಬರವ್ಪಿ, ನಾಟಕಿಸ್ತ್; ಎಡ್ಡಿ ಸಿಕೇರಾ, ರಿಚ್ಚಿ ಪಿರೇರ್, ಕ್ಲೀಟಾ ನೊರೊನ್ಹಾ, ಎಮ್. ಪ್ಯಾಟ್ರಿಕ್, ಶಾಲಿನಿ ವಾಳೆನ್ಸಿಯಾ, ಜ್ಯೂಲಿಯೆಟ್ ಮೊರಾಸ್, ಎಚ್. ಆರ್. ಆಳ್ವ, ಜೆಮ್ಮಾ ಪಡೀಲ್, ವಿಶ್ವಾಸ್ ರೆಬಿಂಬಸ್, ಡೇವಿಡ್ ಡಿಸೋಜ ವಾಮಂಜೂರ್, ಪಿಂಟೊ ವಾಮಂಜೂರ್, ಅಲೆಕ್ಸ್ ಮಿರಾಂದಾ, ಕ್ಯಾಥರೀನ್ ರೊಡ್ರಿಗಸ್ ಕಟ್ಪಾಡಿ, ಮಾ ಬಾ ಐವನ್ ಮಿಯಾರ್, ಮಾ ಬಾ ನವೀನ್, ಮಾಚ್ಚಾ ಮಿಲಾರ್, ಜೆ.ಎಫ್. ಡಿಸೋಜ್ ಅತ್ತಾವರ್ ಆನಿ ಹೆರಾಂ ಹ್ಯಾ ಕಾರ್ಯಾಂತ್ ಹಾಜರ್ ಆಸ್ಲಿಂ
ಕೊಂಕಣಿ ನಾಟಕದ ಪರಿಸಂವಾದ ಮತ್ತು ಕೊಂಕಣಿ ಪುಸ್ತಕ ಉದ್ಘಾಟನಾ ಕಾರ್ಯಕ್ರಮ
ಮಂಗಳೂರು: ಆಶಾವಾದಿ ಪ್ರಕಾಶನ್ ಸಂಸ್ಥೆ ವತಿಯಿಂದ 29 ಅಕ್ತೋಬರ್ ರವಿವಾರದಂದು ಸೈಂಟ್ ಜೋಸೆಪ್ ಸೆಮಿನಾರ್ ಸಭಾಂಗಣಾದಲ್ಲಿ ’ಕೊಂಕಣಿ ರಂಗವೇದಿಕೆ ಮತ್ತು ನಾಟಕ’ದ ಪರಿಸಂವಾದ ಕಾರ್ಯಕ್ರಮ ಹಾಗೂ ಆಶಾವಾದಿ ಪ್ರಕಾಶನ್ ಸಂಸ್ಥೆಯಿಂದ ಎರಡು ಭಾಷೆಗಳಲ್ಲಿ ಪ್ರಸ್ತುತ ಪಡಿಸಿದ ಫಾದರ್ ರೊನಾಲ್ಡ್ ಸೆರಾವೊ ಅವರ ’ದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕ ಮತ್ತು ಪ್ರಸಿದ್ಧ ಕೊಂಕಣಿ ಲೇಖಕರಾದ ವಲ್ಲಿ ಕ್ವಾಡ್ರಸ್ ಅಜೆಕಾರ್ ಅವರ ʼಪಯ್ಣಾರಿ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲ್ʼ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕೊಂಕಣಿ ಮೈನಾ ಬಿರುದಿನ ಮೀನಾ ರೆಬಿಂಬಸ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತ್ಯ ಅಕಾಡೆಮಿ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್, ಮಾರಿಯೆಟ್ ರಾಸ್ಕಿನ್ಹಾ, ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ ಹಾಗೂ ಫಾದರ್ ರೊನಾಲ್ಡ್ ಸೆರಾವೊ ಅವರು ವೇದಿಕೆಯಲ್ಲಿ ಉಪಸ್ಥಿತಿಯಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಅರುಣ್ ಡಿʼಸೋಜಾ ಅಜೆಕಾರ್ ಅವರು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಗು ನಿಯೊನಾ ಡಿಸೋಜಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಕೊಂಕಣಿ ಪುಸ್ತಕಗಳನ್ನು ನೀಡುವುದರ ಮೂಲಕ ಸ್ವಾಗತಿಸಿದರು.
ಪರಿಸಂವಾದ ಕಾರ್ಯಾಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೋನ್ ಎಮ್ ಪೆರ್ಮನ್ನೂರ್, ಅರುಣ್ ರಾಜ್ ರೊಡ್ರಿಗಸ್, ರಿಚಾರ್ಡ್ ಮೋರಸ್, ಫಾದರ್ ರೊನಾಲ್ಡ್ ಸೆರಾವೊ ಅವರು ಅತ್ಯುತ್ತಮ ವಿಷಯಗಳನ್ನು ಪ್ರಸ್ತುತ ಪಡಿಸಿದರು. ಪರಿಸಂವಾದ ಕಾರ್ಯಾಕ್ರಮವನ್ನು ನಿರ್ವಹಿಸಿದ ಕನ್ಸೆಪ್ಟಾ ಫೆರ್ನಾಂಡಿಸ್ ಅವರು ರೇಡಿಯೊ ನಾಟಕಾದ ಇತಿಹಾಸ ಇದರ ಬಗ್ಗೆ ವಿವರಿಸಿದರು.
ನಂತರ ನಡೆದ ಪುಸ್ತಕ ಉದ್ಘಾಟನೆ ಕಾರ್ಯಕ್ರಮದಲ್ಲಿ ʼರಾಕ್ಣೊʼ ಕೊಂಕಣಿ ವಾರ ಪತ್ರಿಕೆಯ ಸಂಪಾದಕರಾದ ಫಾದರ್ ರುಪೇಶ್ ಮಾಡ್ತಾ, ಪ್ರಸಿದ್ಧ ಲೇಖಕರು ಮತ್ತು ಕವಿಗಳಾದ ಡಾ| ಪೂರ್ಣಾನಂದ ಚಾರಿ, ಖ್ಯಾತ ಲೇಖಕ ಅವಿಲ್ ರಾಸ್ಕಿನ್ಹಾ, ಪ್ರಸಿದ್ಧ ಬರಹಗಾರರಾದ ಹೇಮಾಚಾರ್ಯಾ ಹಾಗೂ ಫಾದರ್ ರೊನಾಲ್ಡ್ ಸೆರಾವೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಶಾವಾದಿ ಪ್ರಕಾಶನ್ ಸಂಸ್ಥೆಯ 53ನೇ(ಕನ್ನಡ್ ಲಿಪಿ) ಹಾಗೂ 54ನೇ (ನಾಗರಿ ಲಿಪಿ) ʼದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕದ ಪರಿಚಯವನ್ನು ತಮ್ಮ ಅದ್ಭುತ ಮಾತುಗಳಲ್ಲಿ ಮಾಡಿಕೊಟ್ಟ ಫಾದರ್ ರೂಪೇಶ್ ಮಾಡ್ತಾ ಹಾಗೂ ಪ್ರಸಿದ್ಧ ಲೇಖಕರು ಮತ್ತು ಕವಿಗಳಾದ ಡಾ| ಪೂರ್ಣಾನಂದ ಚಾರಿ ಇವರು ʼದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕವನ್ನು ಉದ್ಘಾಟಿಸಿದರು. ಲಾರೆನ್ಸ್ ವಿನೋದ್ ಬಾರ್ಬೋಜ್ ಅವರು ಕೊಂಕಣಿ ಲೇಖಕರಾದ ವಲ್ಲಿ ಕ್ವಾಡ್ರಸ್ ಅಜೆಕಾರ್ ಇವರ ʼಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲ್ʼ ಬಗ್ಗೆ ತಮ್ಮ ಮಾತುಗಳಲ್ಲಿ ವರ್ಣಿಸಿದರು. ಇದರ ಉದ್ಘಾಟನೆಯನ್ನು ಲೇಖಕರಾದ ಆವಿಲ್ ರಾಸ್ಕಿನ್ಹಾ, ಬರಹಗಾರರಾದ ಹೇಮಾಚಾರ್ಯಾ ಹಾಗೂ ಡಾ| ಪೂರ್ಣಾನಂದ ಚಾರಿ ಅವರು ನಡೆಸಿದರು. ಅನಿತಾ ಮೀನೆಜಸ್ ಅಜೆಕಾರ್ ಅವರು ಪುಸ್ತಕ ಉದ್ಘಾಟನೆ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದ ಉಸ್ತುವಾರಿಯಾದ ವಲ್ಲಿ ಕ್ವಾಡ್ರಸ್ ಅಜೆಕಾರ್ ಅವರು ಧನ್ಯವಾದಗೈದು, ಜೆಸ್ಸಿ ಲೋಬೊ ಅಜೆಕಾರ್ ಅವರು ಕಾರ್ಯಕ್ರಮದ ಡಿಜಿಟಲ್ ಸೂತ್ರ ಸಂಚಾಲನೆಗೈದರು. ಕಾರ್ಯಕ್ರಮದಲ್ಲಿ ಹೆಸರಾಂತ ಬರಹಗಾರರು ಹಾಗೂ ನಾಟಕ ಕಲಾವಿದರಾದ ಎಡ್ಡಿ ಸಿಕ್ವೇರಾ, ರಿಚ್ಚಿ ಪಿರೇರಾ, ಕ್ಲೀಟಾ ನೊರೊನ್ಹಾ, ಎಮ್. ಪ್ಯಾಟ್ರಿಕ್, ಶಾಲಿನಿ ವಾಲೆನ್ಸಿಯಾ, ಜ್ಯೂಲಿಯೆಟ್ ಮೊರಾಸ್, ಎಚ್.ಆರ್. ಆಳ್ವ, ಜೆಮ್ಮಾ ಪಡೀಲ್, ವಿಶ್ವಾಸ್ ರೆಬಿಂಬಸ್, ಡೇವಿಡ್ ಡಿಸೋಜ ವಾಮಂಜೂರ್, ಪಿಂಟೊ ವಾಮಂಜೂರ್, ಅಲೆಕ್ಸ್ ಮಿರಾಂದಾ, ಕ್ಯಾಥರೀನ್ ರೊಡ್ರಿಗಸ್ ಕಟ್ಪಾಡಿ, ಫಾದರ್ ಐವನ್ ಮಿಯಾರ್, ಫಾದರ್ ನವೀನ್, ಮಾಚ್ಚಾ ಮಿಲಾಗ್ರಿಸ್, ಜೆ.ಎಫ್. ಡಿಸೋಜ್ ಅತ್ತಾವರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.