ಆತ್ಮ ವಿಶ್ವಾಸ ಗೆಲುವಿನ ಸಂಕೇತ ;ರಾಮಕೃಷ್ಣ ಮಿಷನ್ ಜೋನಲ್ ಅಧಿಕಾರಿ ಕಿರಣ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ:. ಆತ್ಮ ವಿಶ್ವಾಸ ಗೆಲುವಿನ ಸಂಕೇತ ಎಂದು ರಾಮಕೃಷ್ಣ ಮಿಷನ್ ಜೋನಲ್ ಅಧಿಕಾರಿ ಕಿರಣ್ ಕುಮಾರ್ ಹೇಳಿದರು.
ಪಟ್ಟಣ ಗಂಗೋತ್ರಿ ಕಾಲೇಜಿನ ಸಭಾಂಗಣದಲ್ಲಿ ರಾಮಕೃಷ್ಣ ಮಿಷನ್ ಹಾಗೂ ಸ್ಥಳೀಯ ಕಾಲೇಜಿನ ವತಿಯಿಂದ ಧಾನ್ಯದ ಮಹತ್ವ ಕುರಿತು ಏರ್ಪಡಿಸಿದ್ದ
ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದವಸ ಧಾನ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಜೀವ ರಕ್ಷಕ ಧಾನ್ಯಗಳ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಹೇಳಿದರು.
ಕೃಷಿ ಉಳಿದರೆ ಮಾತ್ರ ಜನರಿಗೆ ಆಹಾರ ದೊರೆಯುತ್ತದೆ. ಅದರಲ್ಲೂ ಜೀವನಕ್ಕೆ ಅಗತ್ಯವಾದ ಆಹಾರ ಧಾನ್ಯಗಳು ರೈತರ ಶ್ರಮದ ಫಲ. ಆದ್ದರಿಂದ ಪ್ರತಿಯೊಬ್ಬರು ಕೃಷಿಕ ಸಮುದಾಯವನ್ನು ಗೌರವ ಭಾವನೆಯಿಂದ ನೋಡಬೇಕು. ಧಾನ್ಯ ಬೆಳೆಯುವುದೂ ಸಹ ಒಂದು ¨ಗೆಯ ಧ್ಯಾನ. ರೈತನ ಶ್ರದ್ಧೆಯಿಂದ ಮಾತ್ರ ಆಹಾರೋತ್ಪಾದನೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಕಾರ್ಯದರ್ಶಿ ಎಸ್.ಸಿ.ಅಮರನಾಥ್, ಅಧ್ಯಕ್ಷ ಮುರಳಿನಾಥ್, ಅರುಣ ಅಮರನಾಥ್, ಸುಜಾತ ಮುರಳಿ, ಪ್ರಾಂಶುಪಾಲ ಸುಬ್ರಮಣಿ, ಉಪನ್ಯಾಸಕರಾದ ಅಶೋಕ್ ರೆಡ್ಡಿ, ನಾಗರಾಜ್ ಇದ್ದರು