ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ : ರಮೇಶ್ ಕುಮಾರ್

ಶ್ರೀನಿವಾಸಪುರ: ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದು ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸೂಟು ಬೂಟು ಹಾಕಿಕೊಂಡು ಬಂದು ಮತ ಕೇಳುತ್ತಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇರುವುದಿಲ್ಲ. ಎಂದೂ ನಿಮ್ಮ ಕಷ್ಟಕ್ಕೆ ಸ್ಪಂದಿಸಿದವರು ಅವರಲ್ಲ ಎಂದು ಹೇಳಿದರು.
ಸಂವಿಧಾನ ಸಮಾಜದ ಭಾವ ಬೆಸೆದಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯಾದ ಸಂವಿಧಾನ ಶಾಂತಿಯುತ ಸಹಬಾಳ್ವೆಗೆ ಅನುವು ಮಾಡಿಕೊಟ್ಟಿದೆ. ಹಾಗಾಗಿ ನಾನು ಅಂಬೇಡ್ಕರ್ ಸಿದ್ಧಾತದಲ್ಲಿ ನಂಬಿಕೆಯುಳ್ಳವನು. ಅವರ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಪಕ್ಷಪಾತ ಮಾಡಿಲ್ಲ. ಸರ್ಕಾರದ ಸೌಲಭ್ಯ ಪಕ್ಷಾತೀತವಾಗಿ ನೀಡಿದ್ದೇನೆ ಎಂದು ಹೇಳಿದರು.
ವಿಶೇಷ ಕಾಳಜಿ ವಹಿಸಿ ಕ್ಷೇತ್ರಕ್ಕೆ 23 ಸಾವಿರ ಮನೆ ತಂದಿದ್ದೇನೆ. ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿ ಅಂತರ್ಜಲ ವೃದ್ಧಿಸುವಂತೆ ಮಾಡಿದ್ದೇನೆ. ಕರೆ ಸುತ್ತಲಿನ ಗ್ರಾಮಗಳ ರೈತರು ಬೆಳೆ ಬೆಳೆದು ಜೀವನ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಂತೋಷವಾಗಿದೆ. ಹಾಗಾಗಿ ನನಗೂ ಸಂತೋವಾಗಿದೆ. ಅರಿಕೆರೆ ನಾಗನಾಥೇಶ್ವರ ದೇವಾಲಯ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು. ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಬೇಕಾದರೆ ಖಂಡಿತವಾಗಿಯೂ ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್, ಮುಖಂಡರಾದ ಎಸ್.ವಿ.ಸುಧಾಕರ್, ಎನ್.ಜಿ.ಬ್ಯಾಟಪ್ಪ, ರಮೇಶ್, ಲಕ್ಷ್ಮಿದೇವಮ್ಮ, ಹರಿಕೃಷ್ಣ, ಜಗದೀಶ್, ಅಶೋಕ್, ಅಶೋಕ್, ಆನಂದ್, ಎಸ್.ವಿ.ವಿವೇಕ್ ಇದ್ದರು.
7