ಕೋಲಾರ:- ಜಿಲ್ಲೆಯ ಆರು ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ಯಶಸ್ವಿಯಾಗಿ ನಡೆದಿದ್ದು, ಇಂದಿನ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ 845 ಮಂದಿ ಹೆಸರು ನೋಂದಾಯಿಸಿದ್ದು, 730 ಮಂದಿ ಹಾಜರಾಗುವ ಮೂಲಕ 115 ಮಂದಿ ಗೈರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಪಿಯುಸಿ ಪರೀಕ್ಷೆ-2 ಕ್ಕೆ ಪ್ರತಿತಾಲ್ಲೂಕಿಗೆ ಒಂದರಂತೆ ಆರು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಾಗಿಲ್ಲ ಮತ್ತು ಎಲ್ಲೂ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.
ಕೇಂದ್ರವಾರು ಹಾಜರಾತಿ ವಿವರ
ಕೋಲಾರದ ಸರ್ಕಾರಿ ಬಾಲಕರ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕನ್ನಡ ಭಾಷೆಗೆ 138 ಮಂದಿ ನೋಂದಾಯಿಸಿದ್ದು, 101 ಮಂದಿ ಹಾಜರಾಗಿದ್ದಾರೆ ಮತ್ತು 37 ಮಂದಿ ಗೈರಾಗಿದ್ದಾರೆ. ಶ್ರೀನಿವಾಪುರ ಬಾಲಕರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 84 ಮಂದಿ ನೋಂದಾಯಿಸಿದ್ದು, 77 ಮಂದಿ ಪರೀಕ್ಷೆಗೆ ಹಾಜರಾಗಿ 7 ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 100 ಮಂದಿ ಹೆಸರು ನೋಂದಾಯಿಸಿದ್ದು, 92 ಮಂದಿ ಹಾಜರಾಗಿ 8 ಮಂದಿ ಗೈರಾಗಿದ್ದಾರೆ. ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 137 ಮಂದಿ ನೋಂದಾಯಿಸಿದ್ದು, 109 ಮಂದಿ ಹಾಜರಾಗಿ 28 ಮಂದಿ ಗೈರಾಗಿದ್ದಾರೆ.
ಬಂಗಾರಪೇಟೆ ಬಾಲಕಿಯರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 130 ಮಂದಿ ಹೆಸರು ನೋಂದಾಯಿಸಿದ್ದು, 116 ಮಂದಿ ಹಾಜರಾಗಿದ್ದಾರೆ ಮತ್ತು 14 ಮಂದಿ ಗೈರಾಗಿದ್ದಾರೆ. ಕೆಜಿಎಫ್ ಉರಿಗಾಂ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ 256 ಮಂದಿ ಹೆಸರು ನೋಂದಾಯಿಸಿದ್ದು, 235 ಮಂದಿ ಹಾಜರಾಗಿದ್ದಾರೆ ಮತ್ತು 21 ಮಂದಿ ಗೈರಾಗಿದ್ದಾರೆ ಎಂದು ಪಿಯು ಡಿಡಿ ರಾಮಚಂದ್ರಪ್ಪ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿಸಿ ಕ್ಯಾಮರಾ ಅಳವಡಿಸಿದ್ದು ವೆಬ್ ಕಾಸ್ಟಿಂಗ್ ಮಾಡಲಾಗಿದೆ.