ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಇಂದಿನ ಪುಣ್ಯಕ್ಷೇತ್ರದ ಚಟುವಟಿಕೆಗಳು ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದವು. ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ಬಿನ್ನಹಗಳನ್ನು ಸಲ್ಲಿಸಲು ಅತ್ತೂರಿನ ಪುಣ್ಯಸ್ಥಳಕ್ಕೆ ಆಗಮಿಸಿದರು. ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು, ಮತ್ತು ನಾಟಕದ ಪ್ರದರ್ಶನ ದಿನದ ಮುಖ್ಯ ವಿಧಿ ಆಚರಣೆಗಳಾಗಿದ್ದವು. ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೆಳಕು ಮತ್ತು ಅಲಂಕಾರಗಳಿಂದ ಆಕರ್ಷಕವಾಗಿ ಸಿಂಗಾರಗೊಂಡಿದ್ದವು. ಸರ್ವಧರ್ಮ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಇಂದಿನ ಧಾರ್ಮಿಕ ವಿಧಿಗಳಲ್ಲಿ ವಿಭಿನ್ನ ಧರ್ಮಗಳ ಜನರು ಭಾಗವಹಿಸಿದರು. ಭಕ್ತರು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಿ, ತಮ್ಮ ಬಿನ್ನಹಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದರು.
ಈ ವರ್ಷದ ಮಹೋತ್ಸವದ ವಿಷಯ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” (ರೋಮಾ 5:5) ಆಗಿದ್ದು, ಇಂದು ಮೂರು ಬಲಿಪೂಜೆಗಳು ನಡೆದವು. ಪ್ರಮುಖ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಶ್ರೇಷ್ಟ ಗುರು ಅ/ವಂ/ ಮೊನ್ಸಿಜ್ಞೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅರ್ಪಿಸಿದರು. ಪ್ರಭುವಿನಲ್ಲಿ ಭರವಸೆ ಇರಿಸಿ ಕ್ರೈಸ್ತ ಬದುಕನ್ನು ಆಶಾದಾಯಕವಾಗಿ ಬದುಕಬೇಕು. ಕ್ರಿಸ್ತನಲ್ಲಿ ಒಂದಾಗಿ ಭರವಸೆಯ ಯಾತ್ರಾರ್ಥಿಗಳಾಗಿ ನಮ್ಮ ಹೆಜ್ಜೆಯನ್ನಿಡುತ್ತಾ ಸಾಗಬೇಕೆಂದು ಬೋಧಿಸಿದರು. ನಸುಕಿನಿಂದಲೇ ವಿವಿಧ ಸ್ಥಳಗಳಿಂದ ಭಕ್ತರು ಧಾವಿಸಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಾಯಂಕಾಲ ಸಂತ ಲಾರೆನ್ಸ್ ಅವರ ಜೀವನ ಆಧಾರಿತ “ಲಾರೆನ್ಸ್ ಮಹಾತ್ಮೆ” ಯಕ್ಷಗಾನ ಅತಿಥಿ ಪಂಗಡದಿಂದ ಪ್ರದರ್ಶಿಸಲಾಯಿತು. ಕಾಂಗ್ರೆಸ್ ಮುಖಂಡರು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಆಗಮಿಸಿ ವಾರ್ಷೀಕ ಮಹೋತ್ಸವಕ್ಕೆ ಶುಭಕೋರಿದರು.
ಪುಷ್ಕರಣಿಗೆ ಭೇಟಿ, ಮೊಂಬತ್ತಿ ಬೆಳಗುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಬಲಿಪೂಜೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪತೀರ್ಥದಲ್ಲಿ ಭಾಗವಹಿಸಲು ಭಕ್ತಸಾಗರ ಮುಗಿಬಿದ್ದಿತ್ತು. ನಸುಕಿನಿಂದ ರಾತ್ರಿ ವರೆಗೆ ಪುಣ್ಯಕ್ಷೇತ್ರ ಭಕ್ತರ ಪುಣ್ಯದಾಯಕ ಸ್ಥಳವಾಗಿ ಪರಿವರ್ತಿತಗೊಂಡಿತ್ತು.
ನಾಳೆ ಮಂಗಳವಾರ, 10 ಬಲಿಪೂಜೆಗಳನ್ನು ಆಚರಿಸಲಾಗುತ್ತದೆ ಮತ್ತು ಈ ಬಲಿಪೂಜೆಗಳ ಸಮಯದಲ್ಲಿ ಭಕ್ತರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುವುದು. ಮೊದಲ ಬಲಿಪೂಜೆಯ ಕೊನೆಯಲ್ಲಿ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಂ.ಸ್ವಾಮಿ. ವಲೇರಿಯನ್ ಫೆನಾರ್ಂಡಿಸ್ ಅವರ ‘ಶಿಲುಬೆಯ ಹಾದಿ’ ಪುಸ್ತಕ ಮತ್ತು ಜಾರ್ಜ್ ಕ್ಯಾಸ್ತೆಲಿನೊ ಅವರ ‘ಕಾರ್ಯೆ ಸೊಭಾಣ್’ ಎಂಬ ಪ್ರಮುಖ ಸಮಾರಂಭಗಳ ಕುರಿತಾದ ಪುಸ್ತಕ ಬಿಡುಗಡೆ ಮಾಡಿದರು.
Second Day of the Feast at Attur St. Lawrence Basilica
Today marked the second day of the feast of St. Lawrence at the Basilica of Attur. There were three masses celebrated during the day. The first mass, at 10:00 AM, was presided over by Msgr. Very Rev. Fr. Ferdinand Gonsalves, the Vicar General of the Diocese of Udupi. The second mass, held at noon, was celebrated by Fr. Rupesh Madtha, editor of Rakno magazine, and the final mass of the day was led by Fr. Lawrence D’Souza from the Diocese of Shimoga.
Special prayers were offered for the sick and suffering during all the masses. These prayers included anointing their foreheads and the laying on of hands.
Later in the evening, a Tulu Yakshagana based on the life of St. Lawrence was performed by the Athithi troupe. Renowned Tulu artist Aravind Bolar participated in the Yakshagana, captivating the audience with his performance. Rev. Fr. Alban D’Souza, the Rector of the Shrine, expressed his gratitude to everyone for their wholehearted cooperation.
Thousands of devotees visited the shrine, with many walking miles as a vow to St. Lawrence. They participated in devotions by lighting candles, praying before the miraculous statue, and visiting the nearby pond. Approximately 200 volunteers rendered valuable services at various counters, while police personnel ensured law and order. More than 20 priests were available throughout the day to administer the sacrament of confession, allowing the faithful to partake in this spiritual blessing.
Two books were released after the first mass. Fr. Valerian Fernandes authored a book on the Way of the Cross, and George Castelino released the 14th edition of Karye Sobhann, a guide to leading ceremonies.
Looking ahead to tomorrow, ten masses are scheduled. The main mass will be celebrated in Kannada at 5:30 PM and will be presided over by Very Rev. Dr. Lawrence Mukkuzhy, the Bishop of Belthangady. The last mass of the day is scheduled for 10:00 PM.