ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ:ಮೇ.28: ತಾಲ್ಲೂಕಿನ ತಾಡಿಗೋಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಮತಂಪಲ್ಲಿ ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮವನ್ನು ಇಂದು ಶುಕ್ರವಾರ ಸೀಲ್ ಡೌನ್ ಮಾಡಲಾಯಿತು.
ಲಾಡ್ ಡೌನ್ ಮಾಡುವ ಮುನ್ನ ಗ್ರಾಮದಲ್ಲಿನ ಕೋವಿಡ್ ರೋಗಿಗಳನ್ನು ಆಂಬ್ಯುಲೆನ್ಸ್‍ಲ್ಲಿ ಶ್ರೀನಿವಾಸಪುರದ ಕೋವಿಡ್ ಕೇಂದ್ರಕ್ಕೆ ಸೇರಿಸಲಾಯಿತು. ಅನಂತರ ಗ್ರಾಮಕ್ಕೆ ಬರುವ ಮುಖ್ಯೆ ರಸ್ತೆ ಸೆರಿದಂತೆ, ಉಳಿದ ಎಲ್ಲಾ ರಸ್ತೆಗಳನ್ನೂ ಮುಚ್ಚಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಕಾಶಿ ವಿಶ್ವನಾಥ, ಕೃಷ್ಣವೇಣಿ, ಗೋವಿಂದಪ್ಪ, ಸೀನಪ್ಪ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.