ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯ್ಸಸ್, ಹಾಗೂ ಎಸ್.ಸಿ.ಎಸ್. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಾಯ್ಸಸ್‍ನ ಪ್ರಮಾಣವಚನ


ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯ್ಸಸ್, ಹಾಗೂ ಎಸ್.ಸಿ.ಎಸ್. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಾಯ್ಸಸ್‍ನ ಪ್ರಮಾಣವಚನ ಸ್ವೀಕಾರ ಸಮಾರಂಭವು ತಾರೀಕು 14.02.2023ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಶೋಕನಗರದಲ್ಲಿರುವ ಕೆ.ಎ.ಎಂ.ಸಿ. ಕಟ್ಟಡದ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಸಿಸ್ಟರ್ ದೀಪಾ ಪಿಟರ್, ಪ್ರಾಂಶುಪಾಲರು, ಅಥೆನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್, ಮಂಗಳೂರು ಇವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಡಾ| ಅಭಿನಯ್ ಸೊರಕೆ, ಕಾರ್ಯದರ್ಶಿ, ಎಸ್.ಸಿ.ಎಸ್. ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ಸ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಮಾರಿ ದೀಪಾ ಇವರು ಬಂದ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ. ಡೆನ್ಸಿಲ್ ಡಿಸೋಜ, ಸಹಾಯಕ ಉಪನ್ಯಾಸಕ, ಇವರು ಈ ದಿನದ ಮಹತ್ವದ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಸಿಸ್ಟರ್ ದೀಪಾ ಪಿಟರ್, ಅವರು ವಿದ್ಯಾರ್ಥಿಗಳನ್ನು ಕುರಿತು ಈ ಉದಾತ್ತ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ರೋಗಿಗಳ ಆರೈಕೆಯಲ್ಲಿ ಸ್ಪರ್ಶದ ಮಹತ್ವ ಮತ್ತು ರೋಗಿಗಳ ಆರೈಕೆಯಲ್ಲಿ ಶುಶ್ರೂಷಕಿಯರ ಜವಾಬ್ದಾರಿಗಳನ್ನು ಒತ್ತಿ ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೊಲಿಟ ಎಸ್. ಎಮ್. ಡಿಸೋಜ, ಇವರು ಹೊಸ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ಕುಮಾರಿ ಪವೆಲಾ ಮೆಂಡೋನ್ಸ, ಸಹಾಯಕ ಉಪನ್ಯಾಸಕಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದಲ್ಲಿ ಎಸ್.ಸಿ.ಎಸ್. ಗೂಫ್ ಆಫ್ ಇನ್ಸ್ಟಿಟ್ಯೂಟಿನ ಆಡಳಿತಾಧಿಕಾರಿ ಶ್ರೀ.ಯು. ಕೆ. ಖಾಲಿದ್, ಉಪ ಆಡಳಿತಾಧಿಕಾರಿಗಳಾಗಿರುವ ಶ್ರೀ.ಸಾಜು, ಉಪಪ್ರಾಂಶುಪಾಲರು ಶ್ರೀ.ಅನಿಲ್ ಕುಮಾರ್, ಶ್ರೀಮತಿ ಪ್ರಮೀಳಾ ಎಚ್.ವಿ. ಮತ್ತು ಶ್ರೀಮತಿ ದಿವ್ಯ ಅವರು ಉಪಸ್ಥಿತರಿದ್ದರು. ಕು. ಮನೀಷಾ, ಸಹಾಯಕ ಉಪನ್ಯಾಸಕಿ, ಅವರು ವಂದನಾರ್ಪಣೆಗೈದರು. ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.