ವಿದ್ಯಾರ್ಥಿ ಜನಸಮುದಾಯದಲ್ಲಿ ವೈಜ್ಞಾನಿಕ ಪ್ರಜ್ಞೆ ದಳಿಸಿ – ಡಿಡಿಪಿಐ ನಾಗೇಶ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಜನ ಸಮುದಾಯದಲ್ಲಿ ಮೌಡ್ಯಾಚರಣೆ ವಿರುದ್ಧ ಜನ ಜಾಗೃತಿ ಮೂಡಿಸುವ ಮೂಲಕ ಅವರಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವಂತೆ ಸಂಕಲ್ಪ ತೊಡಬೇಕೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು . ನಗರದ ಪತ್ರಕರ್ತರ ಭವನದಲ್ಲಿಂದು ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿ , ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪವಾಢ ಶಿಕ್ಷಕ ಡಾ.ಕೆ ಶ್ರೀನಿವಾಸ್‌ರವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು . ವಿಜ್ಞಾನ ಮತ್ತು ಗಣಿತ ವಿಷಯಗಳು ಕಠಿಣ ಎಂಬ ಭಾವನೆ ಹಲವು ವಿದ್ಯಾರ್ಥಿಗಳ ಮನಸ್ಸಿನಲ್ಲಿದೆ . ಈ ಭಾವನೆಯನ್ನು ಹೋಗಲಾಡಿಸಲು ಶಕ್ಷಕರು ಪ್ರಾಮಾಣಿಕವಾಗಿ ಸಂಧಿಸುತ್ತಿದ್ದು , ವಿಜ್ಞಾನ , ಸಂಶೋಧನೆ , ಪ್ರಯೋಗಗಳನ್ನು ಬಾಲ್ಯದಿಂದಲೇ ಮಾಡಿಸುವುದರಿಂದ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಾಧ್ಯ ಎಂದರು . ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ.ಬಸವರಾಜು ಮಾತನಾಡಿ ಜಗತ್ತು ನಿರಂತರ ಬದಲಾವಣೆಯಿಂದ ಕೂಡಿದೆ . ತಂತಜ್ಞಾನ ಕ್ಷೇತ್ರದಲ್ಲಿ ಅದರಲ್ಲೂ ಮಾಹಿತಿ ತಂತ್ರಜ್ಞಾನದ ಬದಲಾವಣೆ ಹೆಚ್ಚು ವೇಗದಿಂದ ಕೂಡಿದೆ . ಬದಲಾದ ಕಾಲಕ್ಕೆ ಅಗತ್ಯವಾದ ಶಿಕ್ಷಣ ನೀಬೇಕಾಗಿರುವುದು ನಾಗರೀಕ ಸಮಾಜದ ಕರ್ತವ್ಯ ಎಂದರು . ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಮಾತನಾಡಿ ಯಾವುದೇ ವಿಷಯವನ್ನು ವಿಶ್ಲೇಷಿಸದೆ , ಪರೀಕ್ಷಿಸದೆ , ಪ್ರಶ್ನಿಸದೆ ನಂಬಬೇಡಿ , ಸಂಪಾದಯದ ಹೆಸರಿನಲ್ಲಿ ಬಹಳಷ್ಟು ಜೀವ ವೈವಿಧ್ಯತೆ ಹಾಳು ಮಾಡಿರುವ ನಾವು ಕಾಗೆ ಗೂಬೆಯನ್ನು ಅಶುಭ ಎನ್ನುತ್ತೇವೆ . ಹಾವಿನ ರೋಷ ಹನ್ನೆರಡು ವರ್ಷ ಎನ್ನುವ ನಾವು ಹಾವಿನ ಆಯಸ್ಸು 9 ವರ್ಷ ಎಂಬುದನ್ನು ತಿಳಿದಿಲ್ಲ ಎಂದು ವಿಶ್ಲೇಷಿಸಿದರು .
ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಜ್ಞಾನ ಮೂರ್ತಿ ಮಾತನಾಡಿ ವಿದ್ಯೆ ವಿನಯತೆ ಜೊತೆ ಸಾಮಾನ್ಯ ಜ್ಞಾನ , ವೈಜ್ಞಾನಿಕ ನೆಲೆಗಟ್ಟು ಬೆಳೆಸುವುದು ಶಿಕ್ಷಕರ ಕರ್ತವ್ಯ ಆಗಬೇಕು . ಆಗ ಮಾತ್ರ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದರು . ಸಮಿತಿಗಳು ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್ . ಅಶೋಕ್ ಮಾತನಾಡಿ ಜಿಲ್ಲೆಯಾದ್ಯಂತ ಜ್ಞಾನ ವಿಜ್ಞಾನ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು , ಇದರ ಪ್ರಯೋಜವನ್ನು ಸದುಪಯೋಗಪಡಿಸಿಕೊಂಡು ಯುವ ವಿಜ್ಞಾನಿಗಳನ್ನು ಶಾಲೆಗಳಲ್ಲಿ ತಯಾರು ಮಾಡುವಂತೆ ಸಲಹೆ ನೀಡಿದರು . ಅಭಿನಂದನೆ ಸ್ವೀಕರಿಸಿದ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಕೆ.ಶ್ರೀನಿವಾಸ್ ಮಾತನಾಡಿ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ , ವೈಚಾರಿಕ ಮಹೋಭಾವನೆ ಮೂಡಿಸುವುದೇ ಪವಾಡ ರಹಸ್ಯ ಬಯಲು ಕಾರ್ಯಕ್ರಮವಾಗಿ ಈ ಕ್ಷೇತ್ರದಲ್ಲಿ ಡಾಕ್ಟರೇಟ್ ಮಟ್ಟಕ್ಕೆ ಗುರ್ತಿಸಿರುವ ವಿದ್ಯಾರ್ಥಿ , ಇಲಾಖೆ ಮತ್ತು ಸಾರ್ವಜನಿಕರಿಗೆ ಕೃತಜ್ಞತೆ ಅರ್ಪಿಸಿದರು . ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಜ್ಞಾನ , ವಿಜ್ಞಾನ , ತಂತ್ರಜ್ಞಾನವನ್ನು ಪತ್ತೆಹಚ್ಚಿ ಅವರಲ್ಲಿ ಮತ್ತಷ್ಟು ಜ್ಞಾನವನ್ನು ತುಂಬಲು ಶ್ರಮಿಸುತ್ತಿರುವ ಎಲ್ಲಾ ಹಂತದ ಶಿಕ್ಷಕರ ಸೇವೆ ಶ್ಲಾಘನೀಯವಾದುದ್ದು ಎಂದರು .
ಸಮಗ್ರ ಶಿಕ್ಷಣ ಜಿಲ್ಲಾ ಉಪಸಮನ್ವಯಾಧಿಕಾರಿ ಗಂಗರಾಮಯ್ಯ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಕಾರ್ಯದರ್ಶಿ ಬಿ.ಶ್ರೀನಿವಾಸ್ , ಸಂಘದ ಸಘಟನಾ ಕಾರ್ಯದರ್ಶಿ ಭಾಗ್ಯಲಕ್ಷ್ಮಮ್ಮ , ಖಜಾಂಚಿ ಹೆಚ್.ಆರ್.ನಾರಾಯಣಸ್ವಾಮಿ , ಸಂಘಟನಾ ಕಾರ್ಯದರ್ಶಿ ಚಾಮುಂಡೇಶ್ವರಿದೇವಿ , ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಜಗನ್ನಾಥ್ , ಸಂಚಾಲಕ ಡಾ.ಶರಣಪ್ಪ ಗಬ್ಯೂರ್ , ಉಪಾಧಕರಾದ ಸುಗುಣ , ಕೆ.ಎ.ಕಲಾವತಿ , ಕೋಶಾಧ್ಯಕ್ಷ ತಾಲ್ಲೂಕುಗಳು ಅಧ್ಯಕ್ಷ ಕಾರ್ಯದರ್ಶಿಗಳು , ಡಾ.ಎಸ್.ಸಿ.ವೆಂಕಟಕೃಷ್ಣಪ್ಪ ಹಾಗೂ ಜಿಲ್ಲೆಯ ಎಲ್ಲಾ ಮತ್ತಿತರರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ