JANANUDI.COM NETWORK
ಕೊರೊನಾ ವೈರಸ್ ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್ ಕಪ್ರ್ಯೂ ಜಾರಿ ಮಾಡಲಾಗಿದ್ದು ವಿಶೇಷವಾಗಿ ಬೆಂಗಳೂರಲ್ಲಿ ಶಾಲೆಗಳನ್ನು ಎರಡು ವಾರಗಳ ಕಾಲ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಮಂಗಳವಾರ ತಜ್ಞರ ಜೊತೆಗಿನ ಸಭೆ ಬಳಿಕ ಅಶೋಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದೇ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್ ಕಫ್ರ್ಯೂ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
9 ಮತ್ತು 10ನೇ ತರಗತಿ ಹೊರತುಪಡಿಸಿ ಇನ್ನುಳಿದ 1ರಿಂದ 8ನೇ ತರಗತಿ ನಾಳೆಯಿಂದಲೇ(ಬುಧವಾರ) ಬಂದ್ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿನ್ನೆಯ ಸಿಎಂ ಸಭೆಯ ಬಳಿಕ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್ ಅವರು, ಸಿಎಂ ನೇತೃತ್ವದಲ್ಲಿ ಕೋವಿಡ್ ನಿಯಂತಣ ಸಲುವಾಗಿ ಮಾಡಿದ ಸಭೆಯ ತಜ್ಞರು ಸಭೆಯಲ್ಲಿ ಮತ್ತು ಅಧಿಕಾರಿ ವರ್ಗದವರು ಭಾಗವಹಿಸಿದ್ದರು.
ಸಿಎಂ ಬೊಮ್ಮಾಯಿಯವರು ನಾವು ಯಾವುದೇ ನಿರ್ಧಾರ ಕೈಗೊಂಡರು ಕೂಡ, ವಿಶ್ವ ಆರೋಗ್ಯ ಸಂಸ್ಥೆ. ಕೇಂದ್ರ ಸರ್ಕಾರ, ಹಾಗೂ ನೆರೆಯ ರಾಜ್ಯಗಳು ಕೋವಿಡ್ ಕೇಸ್ ಗಳ ಹೆಚ್ಚಳ ಆಗಿರುವ ಬಗ್ಗೆ ಅನೇಕ ತೀರ್ಮಾನಗಳನ್ನು ಕೈಗೊಂಡಿವೆ.. ಓಮಿಕ್ರಾನ್ ಕೋವಿಡ್ ಗಿಂತ 5 ಪಟ್ಟು ಜಾಸ್ತಿಯಾಗುತ್ತಿದೆ ಎಂದು ತಜ್ಞರು ವರದಿ ಕೊಟ್ಟಿದ್ದು. ಇವತ್ತು ಬೆಂಗಳೂರಿನಲ್ಲಿ 2048 ಕೇಸ್ ಆಗಿದೆ. ಓಮಿಕ್ರಾನ್ 147 ಕೇಸ್ ಪತ್ತೆಯಾಗಿದೆಯೆಂದು ಅವರು ತಿಳಿಸಿದರು.
ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ದ್ವಿಗುಣ ಆಗ್ತಾ ಇದೆ.ಇದು ಹಲವು ಸಾವಿರಗಳು ಆಗೋ ಸಾಧ್ಯತೆ ಇದೆ. ಇದರಿಂದಾಗಿ ವಿಶೇಷವಾಗಿ ಬೆಂಗಳೂರಿಗೆ ವಿಶೇಷ ನಿಯಮ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮ ಜಾರಿಗೆ ತರೋ ತೀರ್ಮಾನವನ್ನು ಸಿಎಂ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಶೇ.3ರಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಕೂಡ ಹೆಚ್ಚಿದೆ. 20 ರಿಂದ 50 ವರ್ಷದವರಿಗೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಈ ಎಲ್ಲಾ ದೃಷ್ಟಿಯಿಂದ ಬೆಂಗಳೂರಿನಲ್ಲಿ 10 -12ನೇ ತರಗತಿ ಹೊರತು ಪಡಿಸಿ, 2 ವಾರ ಆಫ್ ಲೈನ್ ತರಗತಿ ಮಾಡಲು ನಿರ್ಧರಿಸಲಾಗಿದೆ. ನಾಳೆ ರಾತ್ರಿ 10 ಗಂಟೆಯಿಂದ ಕೋವಿಡ್ ರೂಲ್ಸ್ ಜಾರಿಯಲ್ಲಿ ಬರಲಿದೆ. 10 ಮತ್ತು 12ನೇ ತರಗತಿಗಳು ಮಾತ್ರ ತೆರೆದಿರಲು ನಿರ್ಧರಿಸಲಾಗಿದೆ. ಆನ್ ಲೈನ್ ತರಗತಿಗಳಲ್ಲಿ ಶೈಕ್ಷಣಿಕ ಚಟುವಟಿಕೆ ಮುಂದುವರೆಯಲಿದೆ. ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ಕಪ್ರ್ಯೂ ತೀರ್ಮಾನಕೈಗೊಳ್ಳಲಾಗಿದೆ. ನೈಟ್ ಕಪ್ರ್ಯೂ ಮತ್ತೆ ಎರಡುವಾರ ವಿಸ್ತರಿಸಲಾಗಿದೆ ಎಂದರು.
ಸರ್ಕಾರಿ ಕಚೇರಿ, ಮಾಲ್ ಗಳಲ್ಲಿ ಭಾರತ ಸರ್ಕಾರದ ಮಾರ್ಗಸೂಚಿ ಪಾಲಿಸಲು ನಿರ್ಧರಿಸಲಾಗಿದೆ. ಮಾಲ್, ಚಿತ್ರಮಂದಿರ, ಪಬ್, ಬಾರ್ ಎಲ್ಲಾ ಸಾರ್ವಜನಿಕ ಸ್ಥಳಗಲ್ಲಿ ಶೇ.50ರ ಮಿತಿ ಜಾರಿಗೊಳಿಸಲಾಗಿದೆ. ಮದುವೆ ಹೊರಾಂಗಣಕ್ಕೆ 200 ಜನರ, ಒಳಾಂಗಣದಲ್ಲಿ 100 ಜನರಿಗೆ ಮಿತಿ ಏರಲಾಗಿದೆ. ಕೋವಿಡ್ ಸಂಪೂರ್ಣ ಡೋಸ್ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಿಂದ ಬರೋರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ವೀಕೆಂಡ್ ವಿಷೇತೆಗಳು
ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ವರೆಗೆ ವಾರಾಂತ್ಯ ಕಫ್ರ್ಯೂ
ವೀಕೆಂಡ್ ಕಫ್ರ್ಯೂ. ಅವಧಿಯಲ್ಲಿ ಅಗತ್ಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್
ಚಿತ್ರ ಮಂದಿರ ಬಾರ್, ಪಬ್ಬ್ ಗಳಲ್ಲಿ ಶೇ. 50 ರ ನಿಯಮ
ವಿದೇಶದಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್
2 ವಾರಗಳ ಕಾಲ ರಾತ್ರಿ ಕಫ್ರ್ಯೂ ಮುಂದುವರಿಕೆ
ಮದುವೆಗೆ ಹೊರಾಂಗಣದಲ್ಲಿ 200 ಮಂದಿ, ಒಳಾಂಗಣದಲ್ಲಿದ್ 100 ಮಂದಿಯ ಮಿತಿ
ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ 50 ಜನರಿಗೆ ಮಾತ್ರ ಅವಕಾಶ
ಹೊರ ರಾಜ್ಯದಿಂದ ಬಂದವರಿಗೆ ಆರ್ ಟಿ ಪಿ ಸಿ ಆರ್ ಪರೀಕ್ಷೆ ಕಡ್ಡಾಯ
ತತಕ್ಷಣ ದಿಂದಲೇ ಎಲ್ಲ ಪ್ರತಿಭಟನೆ, ಸಭೆ, ರಾಜಕೀಯ, ಧಾರ್ಮಿಕ, ಸಾಂಸ್ಕøತಿಕ
ಕಾರ್ಯಕ್ರಮಗಳಿಗೆ ನಿರ್ಬಂಧ
ಮಸೀದಿ, ಚಚ್ರ್ಗಳಲ್ಲಿ ದೈನಂದಿನ ಪೂಜೆ, ಪ್ರಾರ್ಥನೆಗೆ ಅವಕಾಶವಿದೆ. ಆದರೆ ಪ್ರವೇಶ 50 ಜನರಿಗೆ ಮಾತ್ರ.
ಯಾವಾಗ ಜಾರಿ
ಬುಧವಾರರಾತ್ರಿ 10 ಗಂಟೆಯಿಂದಲೇ ಈ ನಿಯಮಗಳು ಜಾರಿಯಾಗಲಿವೆ. ಹೊರ ರಾಜ್ಯಗಳಿಂದ ಆರ್ ಟಿ ಪಿ ಸಿ ಆರ್ ವರದಿ ಕಡ್ಡಾಯ ವಿದೇಶಿ ಪ್ರವಾಸಿಗರಿಗೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಕಡ್ಡಾಯ, ಪಾಸಿಟಿವ್ ಪತ್ತೆಯಾದರೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ.