ಶಾಲಾ ಪ್ರಾರಂಭೋತ್ಸವ : ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಾದ್ಯ ವೃಂದದೊಂದಿಗೆ ವಿದ್ಯಾರ್ಥಿಗಳಿಗೆ ಸ್ವಾಗತ 

JANANUDI.COM NETWORK

ಕೊರೋನಾ ದೆಸೆಯಿಂದ ಎರಡುವ ವರ್ಷ ಶಾಲೆಗಳು ಸರಿಯಾದ ರೀತಿಯಲ್ಲಿ ನಡಯದಿದ್ದು ಇದೀಗ ಎರಡು ವರ್ಷಗಳ ಬಳಿಕ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ  ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಾದ್ಯ ವೃಂದದೊಂದಿಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಶಾಲಾ ಸಭಾಂಗಣದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸಂಗೀತಾ ರವರು ವಿದ್ಯಾರ್ಥಿಗಳಿಗೆ ಪ್ರೇರಣೆಯ ನುಡಿಗಳನ್ನಾಡಿದರು.

ಶಾಲಾ ಆರಂಭೋತ್ಸವದ ಪ್ರಯುಕ್ತ ಶಾಲೆಗೆ ಪೈಟಿಂಗ್ ಮಾಡು ರಿಪೇರಿ ಮುತಾಂದವುಗಳನ್ನು ಆಡಳಿತ ಮಂಡಳಿ ಶಾಲಾ ಕಟ್ಟಡವನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ವಾತಾವರಣವನ್ನು ಕಲ್ಪಿಸಿದ್ದರು.