ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪಂಗಡದ ಕುಂದುಕೊರತೆ ಸಭೆ

JANANUDI.COM NETWORK

ಕುಂದಾಪುರ ಪೋಲಿಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪಂಗಡಗಳ ಕುಂದು ಕೊರತೆಗಳ ಸಭೆ ಕುಂದಾಪುರದ ರಕ್ತೇಶರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸಭೆಯ ಅದ್ಯಕ್ಷತೆಯನ್ನು ಕ್ರೈಂ ವಿಭಾಗದ ಠಾಣಾಧಿಕಾರಿ ರಮೇಶ್ ಪವರ್ ವಹಿಸಿದ್ದರು ಎ ಎಸ್ ಐ ಆನಂದ ರವರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ದಲಿತ ಮುಖಂಡ ಉದಯ್ ಕುಮಾರ್ ತಲ್ಲೂರು ಅವರು ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಬಾಗಿಲಿನಲ್ಲಿ ದಲಿತರು ಸರಕಾರಿ ಜಾಗದಲ್ಲಿ ಮನೆಕಟ್ಟಿಕೊಂಡಿದ್ದ ಆ ಸ್ಥಳದಲ್ಲಿ ಸಂಬಂಧ ಪಡದ ಭೂ ಮಾಲಿಕರು ಪರಿಶಿಷ್ಟ ಜಾತಿಯವರುಗಳಿಗೆ ವಿನ ಕಾರಣ ತೊಂದರೆ ಕೊಡುತ್ತಿದ್ದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.ಅಲ್ಲದೆ ಡಿ ಸಿ ಮೀಟಿಂಗ್, ಎಸ್ಪಿ ಮೀಟಿಂಗ್ ಕೂಡಲೆ ಕರೆಯುವಂತೆ ಮನವಿಮಾಡಿದರು.
ಇನ್ನೂ ದಲಿತ ಮುಖಂಡ ವಿಜಯ್ ಕೆ ಎಸ್ ಮಾತಾಡಿ ಆದರ್ಶ ಬಳಿ ಆಚೆ ಇಚೆ ರಸ್ತೆ ದಾಟಲು ತುಂಬಾ ಸಮಸ್ಯೆ ಸಂತೆಯ ಸಮಯದಲ್ಲಂತು ಬಾರಿ ಸಮಸ್ಯೆ ಅಲ್ಲಿ ಒಬ್ಬರು ಪೋಲಿಸರನ್ನ ನೇಮಿಸ ಬೇಕೆಂದು ಆಗ್ರಹಿಸಿದರು.
ದಲಿತ ಮುಖಂಡ ಚಂದ್ರಮ ತಲ್ಲೂರು ಮಾತಾಡಿ ಉಪ್ಪಿನಕುದ್ರುವಿನಲ್ಲಿ ಹಿಂದೆ ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ಮನೆ ಕಳೆದುಕೊಂಡ ಪರಿಶಿಷ್ಟ ಜಾತಿ ಮಹಿಳೆ ಮನೆ ಸಂಪೂರ್ಣ ಹಾನಿ ಆಗಿದ್ದು ಅದನ್ನ ಭಾಗಶಃ ಅಂತ ದಾಖಲು ಮಾಡಿಕೊಂಡ ಬಗ್ಗೆ ಪ್ರಸ್ತಾಪಿಸಿ ತಹಾಶಿಲ್ದಾರ ಸ್ವತಃ ಬೇಟಿ ನೀಡಿ ಕೂಡಲೆ ಪರಿಹಾರ ನೀಡಲು ಸಭೆಯಲ್ಲಿ ಆಗ್ರಹಿಸಿ ಕಂದಾಯ ಇಲಾಖೆಯ ಗಮನಕ್ಕೆ ತರುವಂತೆ ನಿರ್ಣಹಿಸಿದರು.
ಇನ್ನೂ ಡಿ ವೈ ಎಸ್ ಪಿ ಅದ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಕುಂದು ಕೊರತೆ ಸಭೆ ಕರೆಯಿರಿ ಮನವಿ ಮಾಡಿದರು.
ದಲಿತ ಮುಖಂಡ ಪ್ರಭಾಕರ್ ಅಂಬೇಡ್ಕರ್ ಭವನವನ್ನು ಶುಚಿತ್ವ ಕಂಡುಕೊಳ್ಳ ಬೇಕಿದೆ ಎಂದರು. ಇನ್ನೂ ಮುಖಂಡ ಕೃಷ್ಣ ಮೂರ್ತಿ ಮಂಗಲ ಪಾಂಡ್ಯ ದಲ್ಲಿ ನಮ್ಮವರ ಮನೆಗಳಿಗೆ ಗಟಾರದ ಕೊಳಚೆ ನೀರು ನುಗ್ಗುತ್ತದೆ ಅದನ್ನ ಸಂಬಂಧ ಪಟ್ಟ ಇಲಾಖೆಗೆ ಗಮನಕ್ಕೆ ತಂದು ಪರಿಹರಿಸಿ ಎಂದು ಮನವಿಮಾಡಿದರು.
ಹಾಗೆ ಸುರೇಶ್ ಬಾಬು ಮಾತಾಡಿ ಅಂಬೇಡ್ಕರ್ ನಗರದ ಬಳಿ ಇರುವ ಸ್ಮಶಾನ ಒತ್ತುವರಿ ಆಗಿದೆ ಅಂತ ದೂರು ನೀಡಿದರು ಪೊಲೀಸ್ ಅದನ್ನ ಸರಿಯಾಗಿ ಪರಿಗಣಸದೆ ಎ ಎಸ್ ಐ ಅಶೋಕ ರವರು ಕಡೆಗೆಣಿಸಿದ್ದಾರೆ ಎಂದು ದೂರಿತ್ತರು.ಇನ್ನೂ ಇನ್ನೂ ಹಳೆ ಬಸ್ ನಿಲ್ದಾಣ ಆಟೊ ಚಾಲಕ ಹಿಮಕರ ನನ್ನ ಆಟೋ ಇಡಲು ಮೂವರು ತೊಂದರೆ ಕೊಡುತ್ತಾರೆ ಎಂದು ದೂರಿತ್ತರು.ಇನ್ನೂ ಸಭೆಯಲ್ಲಿ ಕುಂದಾಪುರದ ಕುಂದಾಪುರ ಮಿರರ್ ಎನ್ನುವ ಪತ್ರಿಕೆ ಮುದ್ರಣಕ್ಕೆ ಪರವಾನಿಗೆ ಪಡೆದು ಫೇಸ್ ಬುಕ್ ಫೇಜ್ ಮಾಡಿ ಸೋಶಿಯಲ್ ಮೀಡಿಯಾದ ಹೆಸರಲ್ಲಿ ಕಾನೂನು ದುರ್ಬಳಕೆ ಮಾಡಿಕೊಂಡು ಸುದ್ದಿ ಬಿತ್ತರಿಸುತ್ತಿದೆ ಎಂದು ಮುಖಂಡರು ಅರೋಪಿಸಿ ಕೊಡಲೆ ಕ್ರಮಕ್ಕೆ ಆಗ್ರಹಿಸಿದರು.ಸಭೆಯಲ್ಲಿ ಸ್ಪಂದನಾ ರಾಜೇಶ್,ನಟರಾಜ್ ,ಮೋಹನ್ ಪಾರ್ತಿಕಟ್ಟೆ, ಹಾಗೂ ಮಹಿಳೆಯರು ಉಪಸ್ಥಿತಿರಿದ್ದರು.