

ಶ್ರೀನಿವಾಸಪುರ: ಪಟ್ಟಣದ ಚಿಂತಾಮಣಿ ವೃತ್ತದಲ್ಲಿ ಮಂಗಳವಾರ ರಾತ್ರಿ ಎಸ್ಬಿಐ ಎಟಿಎಂ ಒಡೆದು ರೂ.11 ಲಕ್ಷ ಹಣ ದೋಚಲಾಗಿದೆ.
ಎಟಿಎಂನಲ್ಲಿ ಅಳವಾಡಿಸಲಾಗಿದ್ದ ಸಿಸಿ ಕ್ಯಾಮೆರಾಗೆ ಕಪ್ಪು ಪೈಟ್ ಬಳಿದು, ವೆಲ್ಡಿಗ್ ಕಟ್ಟರ್ನಿಂದ ಎಟಿಎಂ ಯಂತ್ರ ಕತ್ತರಿಸಿ ಹಣ ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.