JANANUDI.COM NETWORK

ಕುಂದಾಪುರ, ಮಾ.3: ಪ್ರಧಾನ ಮಂತ್ರಿ ಭಾರತೀಯ ಜನ ಔಷದಿ ಕೇಂದ್ರದ ವತಿಯಿಂದ ನಿನ್ನೆ ದಿನ ಮಾರ್ಚ್ 2 ರಂದು 5 ಕಡೆಗಳಲ್ಲಿ “ಸುವಿದ ಪದ ಕ್ರಾಂತಿ” ಕಾರ್ಯಕ್ರಮವನ್ನು ಆಚರಿಸಲಾಯಿತು. ಬೆಳಿಗ್ಗೆ 9-30 ಕ್ಕೆ ಆಯೂಷ್ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ 50 ಪ್ಯಾಡಗಳನ್ನು ನೀಡಲಾಯಿತು.
11-00 ಗಂಟೆಗೆ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರಿಗೆ 440 ಪ್ಯಾಡನ್ನು ನೀಡಲಾಯಿತು.
2-30 ಕ್ಕೆ ಸಂತ ಮೇರಿಸ್ ಹೈಸ್ಕೂಲು ಇಲ್ಲಿನ ವಿದ್ಯಾರ್ಥನಿಯರಿಗೆ 80 ಪ್ಯಾಡನ್ನು ನೀಡಲಾಯಿತು.

3 ಗಂಟೆಗೆ ಹೋಲಿ ರೋಜರಿ ಇಂಗ್ಲಿಷ್ ಮಿಡಿಯಮ್ ಶಾಲೆಗೆ 173 ಪ್ಯಾಡನ್ನು ನೀಡಲಾಯಿತು.
4-30 ಕ್ಕೆ ಸಂತ ಮೇರಿಸ್ ಪಿ.ಯು.ಕಾಲೇಜಿನ ವಿದ್ಯಾರ್ಥನಿಯರಿಗೆ 89 ಪ್ಯಾಡನ್ನು ನೀಡಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳನ್ನು ರೆಡ್ ಕ್ರಾಸ ಸಭಾಪತಿ ಎಸ್. ಜಯಕರ ಶೆಟ್ಟ ಉದ್ಗಾಟಿಸಿದರು. ರೆಡ್ ಕ್ರಾಸ್ ಕಾರ್ಯದರ್ಷಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಡಾ. ಸೋನಿ, ಎ. ಮುತ್ತಯ್ಯ ಶೆಟ್ಟಿ ಮತ್ತು ಗಣೇಶ ಆಚಾರ್ಯ ಅಲ್ಲದೇ ಆಯಾ ಶಾಲಾ ಮತ್ತು ಕಾಲೇಜು ಪ್ರಾಂಶುಪಾಲರು ಉಪಸ್ತಿತರಿದ್ದರು.