ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಮಣ್ಣು ರಕ್ಷಿಸಿ” ಜಾಗೃತಿ ಕಾರ್ಯಕ್ರಮ

ಕುಂದಾಪುರ: ಸೆಪ್ಟೆಂಬರ್ 20ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಮಣ್ಣು ರಕ್ಷಿಸಿ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಲ್ಕತ್ತಾ ದ ಸಾಹಿಲ್ ಝಾ ಮಾತನಾಡಿ, ಮಣ್ಣು
ನಮ್ಮ ಪರಿಸರದ ಮತ್ತು ಬದುಕಿಗೆ ಅವಿಭಾಜ್ಯ ಅಂಗವಾಗಿದೆ. ಸುಸ್ಥಿರ ಕೃಷಿ ಮತ್ತು ಪರಿಸರಕ್ಕಾಗಿ ಮಣ್ಣನ್ನು ಉಳಿಸಬೇಕಾಗಿದೆ. ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಸುಮಾರು ಸಾವಿರಾರು ಕಿಲೋಮೀಟರ್ ದೂರ ಸೈಕಲ್ ನಲ್ಲಿ ದೇಶಾದ್ಯಂತ ಸಂಚರಿಸುತ್ತಿದ್ದೇನೆ. “ಮಣ್ಣು ಕುರಿತು ಮಾತಾಡಿ, ಮಣ್ಣು ಕುರಿತು ಹಾಡಿ ಮಣ್ಣನ್ನೇ ಉಸಿರಾಗಿಸಿ, ಮಣ್ಣಿನಿಂದಲೇ ಬಾಳಿ” ನಾವೆಲ್ಲ ಜೊತೆಯಾಗಿ ಸೇರಿ ಮಣ್ಣಿನ ಪ್ರಾಮುಖ್ಯತೆಯನ್ನು ತಿಳಿಸಿ ಮಣ್ಣನ್ನು ರಕ್ಷಿಸೋಣ. ನೀವು ಸಹ ವಿವಿಧ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಮಣ್ಣಿನ ರಕ್ಷಣೆಯಲ್ಲಿ ಭಾಗಿಯಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಕುಂದಾಪುರ ಘಟಕದ ಜಯಕರ ಶೆಟ್ಟಿ ಕಾಲೇಜಿನ ಮಧ್ಯಾಹ್ನದ ಊಟಕ್ಕೆ 25,000 ರೂಪಾಯಿಗಳನ್ನು ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ವೆಂಕಟೇಶ್ ಬುದ್ಯಾ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಸತ್ಯನಾರಾಯಣ ಉಪಸ್ಥಿತರಿದ್ದರು.
ಉಪನ್ಯಾಸಕಿ
ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ವಿದ್ಯಾಧರ ವಂದಿಸಿದರು.