ಕಲ್ಯಾಣಪುರ, 11: ಮೌಂಟ್ ರೋಸರಿ ಚರ್ಚಿನ ಕ್ಯಾಥೋಲಿಕ್ ಸಭಾ, ಧರ್ಮ ಕೇಂದ್ರದ ಆರೋಗ್ಯ ಆಯೋಗ, ‘ಸ್ತ್ರೀ ಸಂಘಟನೆ’ ಮತ್ತು ‘ಲಯನ್ಸ್ ಕ್ಲಬ್ ಕಲ್ಯಾಣಪುರ – ಸ್ವರ್ಣ’ ಇವುಗಳ ಸಹಯೋಗದೊಂದಿಗೆ ಕಲ್ಯಾಣಪುರದ ಸುತ್ತಮುತ್ತಲಿನ ಜನರಿಗೆ ಎರಡು ದಿನಗಳ (10ನೇ ಮತ್ತು 11ನೇ ಆಗಸ್ಟ್, 2023) ಉಚಿತ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಯಿತು.
ಧರ್ಮಗುರುಗಳಾದ ವಂ|ರೋಕ್ ಡಿಸೋಜ ಅವರು ವಿವಿಧ ಸಂಘಟಕರ ಪ್ರತಿನಿಧಿಗಳೊಂದಿಗೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ “ಇಂತಹ ನಿಯಮಿತ ಪರೀಕ್ಷೆಗಳ ಅಗತ್ಯವನ್ನು ಒತ್ತಿಹೇಳುತ್ತಾ, ತಜ್ಞ ವೈದ್ಯಕೀಯ ತಂಡಕ್ಕೆ ಚರ್ಚಿನ ವಿವಿಧ ಸಂಘಟನೆಗಳಿಗೆ ಮತ್ತು ಲಯನ್ಸ್ ಕ್ಲಬ್, ಕಲ್ಯಾಣಪುರ – ಸ್ವರ್ಣ ಇವರ ಸಾಮಾಜಿಕ ಕಾಳಜಿಗಾಗಿ ವಿಶೇಷವಾಗಿ ಆರೋಗ್ಯ ರಕ್ಷಣೆಗಾಗಿ ಮಾಡುವ ಸೇವೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಶಿಬಿರವು ಇನ್ನೂ ಒಂದು ದಿನ ಅಂದರೆ ನಾಳೆ ಮುಂದುವರಿಯುವುದರಿಂದ ನೆರೆಹೊರೆಯವರಿಗೆ ಈ ವಿಚಾರವನ್ನು ಬಾಯಿಗೆಯಿಂದ ಬಾಯಿಗೆ ಪ್ರಚಾರ ಮಾಡಬೇಕೆಂದು ಕಾರ್ಯಕ್ರಮಕ್ಕೆ ಭಾಗವಹಿಸಿದವರಿಗೆ ಅವರು ತಿಳಿಸಿದರು.
ಕ್ಯಾಥೋಲಿಕ್ ಸಬಾ ಮೌಂಟ್ ರೋಸರಿ ಚರ್ಚಿನ ಅಧ್ಯಕ್ಶೆಯಾದ ಶ್ರೀಮತಿ ರೋಸಿ ಕ್ವಾಡ್ರಸ್ ಪ್ರಸ್ತಾವಿಕ ಮಾತುಗಳನ್ನಾದಿ ಸ್ವಾಗತಿಸಿದರು.
’ಮೂಳೆ ಸಾಂದ್ರತೆ ಪರೀಕ್ಷೆ ಅಥವಾ DEXA ಸ್ಕ್ಯಾನ್ ಮೂಳೆಯು ಆಸ್ಟಿಯೊಪೊರೋಸಿಸ್ನಿಂದ ಬಳಲುತ್ತಿದೆಯೇ ಎಂಬುದನ್ನು ನಿರ್ಧರಿಸುತ್ತದೆ, ಹೆಚ್ಚು ದುರ್ಬಲವಾಗಿರುವ ಮತ್ತು ಮುರಿಯುವ ಸಾಧ್ಯತೆಯಿರುವ ಮೂಳೆಗಳಿಂದ ಗುಣಲಕ್ಷಣಗಳನ್ನು ಹೊಂದಿರುವ ಅಸ್ವಸ್ಥತೆ, ಕ್ಯಾಲ್ಸಿಯಂ ಕೊರತೆ ಇತ್ಯಾದಿ. ಸಾಮಾನ್ಯವಾಗಿ ಬೆನ್ನುಮೂಳೆ, ಸೊಂಟ ಮತ್ತು ಮುಂದೋಳುಗಳು – ಖನಿಜ ಅಂಶವನ್ನು ಆರಂಭದಲ್ಲಿ ಪರೀಕ್ಷಿಸಲಾಗುತ್ತದೆ ಮತ್ತು ಟಿ – ಸ್ಕೋರ್ ಮತ್ತು Z ಸ್ಕೋರ್ ಅನ್ನು ಪಡೆಯುತ್ತದೆ. ಎಂದು ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಅಂದ್ರಾದೆ ಹೇಳಿದರು. ಕಾರ್ಯಗಾರದಲ್ಲಿ ಮೂಳೆ ತಪಾಸಣೆಯನ್ನು ‘ಮೆಸಸ್ ಒರ್ಗಾಯ್ನಿಕ್ ಪೈ.ಲಿ.’ ಸಂಸ್ಥೆಯ ಉಮೇಶ್ ಕಡೂರ್ ಮಠ್, ಸಂದೇಶ್ ಶೆಟ್ಟಿ ಮತ್ತು ಮಧುಕೇಶ್ವರ್ ನೆಡೆಸಿಕೊಟ್ಟರು.
ಮಧ್ಯಾಹ್ನ 1.00 ಗಂಟೆಯವರೆಗೆ ಅನೇಕ ಜನರು ಈ ಶಿಬಿರದ ಪ್ರಯೋಜನ ಪಡೆದರು. ಆಸ್ಪತ್ರೆಯಲ್ಲಿ ಹೆಚ್ಚಿನ ರೋಗನಿರ್ಣಯ, ತನಿಖೆ ಮತ್ತು ತಪಾಸಣೆಗಾಗಿ ಔಷಧಿಗಳನ್ನು ಶಿಫಾರಸು ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಾಲನ ಮಂಡಳಿ ಉಪಾಧ್ಯಕ್ಷ ಶ್ರೀ ಲೂಕ್ ಡಿಸೋಜಾ, ಆರೋಗ್ಯ ಆಯೋಗದ ಸಂಚಾಲಕ ಶ್ರೀ ಲೂಯಿಸ್ ಡಿಸೋಜಾ, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಲವೀನಾ ಡಿಸೋಜಾ ಮತ್ತು ಇತರರು ಉಪಸ್ಥಿತರಿದ್ದರು.
Santhekatte: Free bone density test camp in collaboration with various organizations at Mount Rosary Church
Kalyanpur, 11: A two-day (10th and 11th August, 2023) free bone density testing camp was organized for people around Kalyanpur in collaboration with Catholic Sabha of Mount Rosary Church, Dharma Kendra Health Commission, ‘Stri Sangathan’ and ‘Lions Club Kalyanpur – Swarna’.
Reverend Vam Rok D’Souja inaugurated the camp by lighting a lamp along with representatives of various organizers and “underscoring the need for such regular check-ups, thanked the expert medical team, various organizations of the church and Lions Club, Kalyanpur – Swarna for their social care especially for health care. He told the participants of the program that as the camp will continue for one more day i.e. tomorrow, they should spread the word of mouth to the neighbors.
Mrs. Rosie Quadras, president of Catholic Sabah Mount Rosary Church welcomed the introductory remarks.
A bone density test or DEXA scan can determine if a bone is suffering from osteoporosis, a disorder characterized by bones that are more fragile and prone to breaking, calcium deficiency, etc. Mineral content is tested initially and a T-score and Z-score are obtained – usually the spine, hips and forearms. said resource person Prakash Andrade. The workshop was organized by Umesh Kadur Math, Sandesh Shetty and Madhukeshwar of ‘Mess Organic Pvt Ltd’.
. Many people took advantage of this camp till 1.00 pm. Medicines were prescribed for further diagnosis, investigation and check-up in the hospital. The program was attended by the Vice President of the Parenting Board, Mr. Luke D’Souza, the Convener of the Health Commission, Mr. Louis D’Souza, the President of the Women’s Organization, Mrs. Lavina D’Souza.