ಶಂಕರನಾರಯಣ ಯಡಮೊಗೆ ಕೊಲೆ: ಆರೋಪಿ ಪಂಚಾಯತ್ ಅಧ್ಯಕ್ಷ ಪ್ರಾಣೇಶ ಪೊಲೀಸರ ವಶ

JANANUDI.COM NETWORK

ಶಂಕರನಾರಯಣ,ಜೂ.6: ಲಾಕ್ ಡೌನ್ ಮಾಡಿದ ಗ್ರಾಮಕ್ಕೆ ಗ್ರಾಮದ ಉದಯ ಗಾಣಿಗ ಯಾವುದೇ ಅಗತ್ಯ ವಸ್ತುಗಳನ್ನು ನೀಡದೆ ಗ್ರಾಮಕ್ಕೆ ಬೇಲಿ ಹಾಕಿರುವುದನ್ನು ವಿರೋಧಿಸಿದ್ದನು, ಈ ವ್ಯಕ್ತಿಯ ವ್ಯಕ್ತಿಯ ಕೊಲೆಯಾದ  ಘಟನೆ ಶನಿವಾರ ರಾತ್ರಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ, ಶಂಕರನಾರಯಣದ ಯಡಮೊಗೆಯಲ್ಲಿ ನಡೆದಿದ್ದು ಆರೋಪಿ ಗ್ರಾಮ‌ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಎಂದು ಪರಿಗಣಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ‌.

  ಎರಡು ದಿನಗಳ ಹಿಂದೆ ಗ್ರಾಮ ಪಂಚಾಯತ್ ಲಾಕ್ಡೌನ್ ಬಗ್ಗೆ ಸ್ಟೇಟಸ್ ಹಾಕಿದ್ದ ಉದಯ ಗಾಣಿಗ ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ, ಕೊರೋನಾ ಪೀಡಿತ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಆಮೇಲೆ ಪ್ರಚಾರ ತಗೊಳ್ಳಿ. ಸರಕಾರದ ಸಹಾಯ ಧನವನ್ನು ನುಂಗಬೇಡಿ ಎಂದು ಸ್ಟೇಟಸ್ ಹಾಕಿದ್ದರು ಎನ್ನಲಾಗಿದೆ.

 ಶನಿವಾರ ಸಂಜೆ ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗ (45) ರ ಮೇಲೆ ಗ್ರಾಮ‌ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಕಾರು ಢಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾರೆ. ನಂತರ ಕಾರು ಬಿಟ್ಟು ಓಡಿ ಪರಾರಿಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ನಡೆಯ ಬಗ್ಗೆ ಯಾವಾಗಲೂ ವಿರೋಧಿಸುತ್ತಿದ್ದ ಉದಯ ಗಾಣಿಗನನ್ನು ಪ್ರಾಣೇಶ್ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ..ಸಾರ್ವಜನಿಕರು 108 ಅಂಬ್ಯುಲೆನ್ಸ್ ಮೂಲಕ ಕರೆದೊಯ್ಯುವ ಮಾರ್ಗ ಮಧ್ಯೆ ಉದಯ ಗಾಣಿಗ ಸಾವು ಸಂಭವಿಸಿದೆಂದು ತಿಳಿದು ಬಂದಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಈ ಸಂಬಂಧ ಉಳ್ಳೂರು – 74 ರ ಗ್ರಾಮ ಪಂಚಾಯತ್ ಸದಸ್ಯರ ಮನೆಯಲ್ಲಿ ಪ್ರಾಣೇಶ ಯಡಿಯಾಳ್ ತಡ ರಾತ್ರೆ 3 ಗಂಟೆಗೆ ಬಂದಿಸಿದ್ದಾರೆ