

ಶ್ರೀನಿವಾಸಪುರ : ಈ ಸಮಾಜದಲ್ಲಿ ತುಂಬಾ ಬಡ ಕುಟುಂಬಗಳು ಹೆಚ್ಚಾಗಿದ್ದು, ಅವರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಸಮತಾ ಸೈನಿಕ ದಳದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು ಶೇಕಡ 95 ರಷ್ಟು ನಿಮ್ಮ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ ಆಶ್ವಾಸನೆ ವ್ಯಕ್ತಪಡಿಸಿದರು. 5 ಬಾರಿ ಶಾಸಕರನ್ನಾಗಿ ಮಾಡಿದ್ದೀರಿ, ತಾಲೂಕಿನ ಅಭಿವೃದ್ಧಿಗಾಗಿ ಕೈಗಾರಿಕಾ ವಲಯವನ್ನು ಸ್ಥಾಪಿಸಿ, ಯುವ ಜನಾಂಗ ಹಾಗು ರೈತರ ಅಭಿವೃದ್ಧಿಗಾಗಿ ಹಗಲಿರಲು ಶ್ರಮಿಸುತ್ತಿದ್ದೇನೆ. ಮುಳಬಾಗಿಲು ಮತ್ತು ಲಕ್ಷ್ಮೀಪುರ ಕ್ರಾಸ್ ಬಳಿ ಕೈಗಾರಿಕಾ ವಲಯವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ವಿಧಾನ ಸಭಾ ಕಲಾಪದಲ್ಲಿ ತಾಲೂಕಿನಲ್ಲಿ ಕೈಗಾರಿಕಾ ವಲಯವನ್ನು ಕಡಾ ಖಂಡಿತವಾಗಿ ಸ್ಥಾಪಿಸಲು ಅನೇಕ ಚರ್ಚೆಗಳನ್ನು ಮಾಡಲಾಗಿದೆ.
ಒಂದು ಕೈಗಾರಿಕಾ ವಲಯಕ್ಕೆ ಅಂಬೇಡ್ಕರ್ ಹೆಸರಿಡಲು ಈ ಸಂಧರ್ಭದಲ್ಲಿ ನಿರ್ಧರಿಸಿದ್ದೇನೆ.
ಸಮಾತ ಸೈನಿಕ ದಳದ ರಾಷ್ಟೀಯ ಅಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಮಾತನಾಡಿ ಸಮಾತ ಸೈನಿಕ ದಳವು ಕೇವಲ ವೆಂಕಟಸ್ವಾಮಿ ರವರದ್ದು ಅಲ್ಲ, ಹೋಗಿ ಅಂಬೇಡ್ಕರ್ ರವರ ಸಂಘ ಆಗಬೇಕು ಎನ್ನುವದನ್ನ ರಾಜ್ಯದ್ಯಾಂತ , ದೇಶಾದ್ಯಾಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಉತ್ತರ ಹಾಗು ದಕ್ಷಣ ಭಾರತದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಮತಾ ಸೈನಿಕ ದಳಕ್ಕೆ 100 ವರ್ಷ ಆಗಿದೆ. ಶಿಸ್ತಿನ ಸಂಘವಾಗಿ ಸಮಾಜದಲ್ಲಿ ಹೊರಹೊಮ್ಮಿದೆ. ಸಂಘ ಕಟ್ಟುವುದು ಮುಖ್ಯವಲ್ಲ ಅದರಲ್ಲಿ ಮಾನವೀಯತೆ ಇರಬೇಕು ಎಂದರು.
ರಾಜ್ಯ ಪ್ರದಾನ ಕಾರ್ಯದರ್ಶಿ ಮುಳಬಾಗಿಲು ಕುಮಾರ್ , ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ರಾಷ್ಟೀಯ ಸಮತಾ ದಳದ ಸಮಿತಿ ಸದಸ್ಯ ವೈ.ಕೆ.ಶಶಿಕುಮಾರ್, ಜಿಲ್ಲಾ ಗೌರವಾಧ್ಯಕ್ಷ ಎಂ.ಪಾಪಣ್ಣ, ಕೋಲಾರ ಜಿಲ್ಲಾಧ್ಯಕ್ಷ ಗುಟ್ಟಹಳ್ಳಿ ಶ್ರೀನಿವಾಸ್, ರಾಜ್ಯ ಸಮಿತಿ ಸದಸ್ಯ ಅಶ್ವತಪ್ಪ, ಪ್ರದಾನ ಕಾರ್ಯದರ್ಶಿ ಎಂ.ಬ್ಯಾಟಪ್ಪ, ಜಿಲ್ಲಾ ಕಾರ್ಯದರ್ಶಿ ಚಲವಾದಿ ನಾಗರಾಜ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಈಶ್ವರಪ್ಪ, ತಾಲೂಕು ಪೆದ್ದಪಲ್ಲಿ ಈರಪ್ಪ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಜಿ.ಎಲ್.ವಿ.ಬಾಬು, ರಾಜ್ಯ ಮುಖಂಡರಾದ ಎಸ್.ನಾರಾಯಣಸ್ವಾಮಿ, ಮುಖಂಡರಾದ ಡಾ|| ಚಂದ್ರಕಳಾ, ಆಗ್ರಹಾರ ವೆಂಕಟೇಶ್, ಕೊಡುವನಹಳ್ಳಿ ಶ್ರೀನಿವಾಸ್, ಯುವ ಮುಖಂಡ ಪ್ರಸನ್ನಕುಮಾರ್, ರೋಣೂರು ಗಿರಿ , ತಾಡಿಗೋಳ್ ಮಂಜಣ್ಣ, ಕೃಷ್ಣಪ್ಪ , ಮುಳಬಾಗಿಲು ವೇಣು ಇದ್ದರು.
