ಶ್ರೀನಿವಾಸಪುರ : ನಿಮ್ಮ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ ಗೌತಮ್ ರವರನ್ನ ಗೆಲ್ಲಿಸಿ. ನಾನು ನನ್ನ ಜೀವ ಇರುವವರೆಗೂ ರಾಜಕೀಯ ನಿವೃತ್ತಿ ಹೊಂದುವುದಿಲ್ಲ. ನೀವು ನಿಮ್ಮ ತಪ್ಪುತಿದ್ದಿಕೊಳ್ಳಲು ಇದು ಒಂದು ಅವಕಾಶ ಆದರಿಂದ ಗೌತಮ್ರವರನ್ನ ಗೆಲ್ಲಿಸಿ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಹೇಳಿದರು.
ತಾಲೂಕಿನ ರೋಣೂರು ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನಾ ಸಭೆಯಲ್ಲಿ ಮಾತನಾಡಿದರು.
ನಮ್ಮ ತಂದೆ ತಾಯಿ ವಿದ್ಯಾವಂತರಲ್ಲ. ನಾನು ಪ್ರತಿಫಲಕ್ಕೆ ಕೆಲಸ ಮಾಡಿದವನು ಅಲ್ಲ. ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ ಅಷ್ಟೆ. ನಮಗೆ ನೂರಾರು ಎಕರೆ ಭೂಮಿ ಇಲ್ಲ. ನಾನು ಕೆಲಸಕ್ಕೆ ಬಾರದ ಜಮೀನನ್ನು ಹಣ್ಣಕ್ಕೆ ಖರೀದಿಸಿ ೪೬ ರಾಜಕೀಯ ಜೀವನದಲ್ಲಿ ತೋಟವನ್ನು ನಿರ್ಮಿಸಿಕೊಂಡಿದ್ದೇನೆ ಅಷ್ಟೆ. . ಇದನ್ನ ಬಿಟ್ಟು ಚಿಂತಾಮಣಿ, ಹೈದರಾಬಾದ್ ಇತೆರೆ ಕಡೆಗಳಲ್ಲಿ ಆಸ್ತಿ ಮಾಡಿಲ್ಲ. ನಾನು ತೃಪ್ತಿಯಾಗಿದ್ದೇನೆ. ಕ್ಷೇತ್ರದ ಜನತೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾತ್ರಿ ೩ ಗಂಟೆಯಲ್ಲಿ ಪೋನ್ ಮಾಡಿದರೂ, ಮಕ್ಕಳಿಗೆ ಹಾಸ್ಟಲ್ ನಲ್ಲಿ ಸೀಟು ಕೋಡಿಸಲು, ಯಾವುದೇ ಗ್ರಾಮದಲ್ಲಿ ನೀರು ಇಲ್ಲವಾದರೆ ತಕ್ಷಣ ಕೊಳವೆ ಬಾವಿ ಕೊರಸಲಾಗುತ್ತಿತ್ತು. ಸಾಗುವಲಿ ಚೀಟಿಕೊಟ್ಟರು ಅದಕ್ಕೆ ಪೊಲೀಸ್ ಸ್ಟೇಷನ್ನಲ್ಲಿ ಗಲಾಟೆ ಇದ್ದರು ಸಹ ಅದನ್ನ ಪರಿಹರಿಸಿಕೊಡುತ್ತಿದೆ.
ನಾನು ಗೌರವದಿಂದ ಬದುಕುತ್ತಿದ್ದೇನೆ. ನನ್ನನ್ನು ಸೋಲಿಸಿದ್ದೀರಿ ನಿಜವಾಗಿ ಸೋತಿರುವುದು .
ವಿಧಾನಸಭಾಧ್ಯಕ್ಷನಾಗಿದ್ದಾಗ ೧೭ ವಿಧಾನ ಸಭಾ ಸದಸ್ಯರನ್ನು ಪಕ್ಷಕ್ಕೆ ದ್ರೋಹ ಬಗೆದ ಹಿನ್ನೆಲೆಯಲ್ಲಿ ಕಾನೂನು ರೀತ್ಯ ಅನರ್ಹಗೊಳಿಸಿದ್ದೆ. ಕಾಂಗ್ರೆಸ್ ಪಕ್ಷದಲ್ಲಿನ ಕೆಲ ಮುಖಂಡರು ನನ್ನನ್ನು ಸೋಲಿಸಿದರು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಿಎಲ್ಡಿ ಅಧ್ಯಕ್ಷ ದಿಂಬಾಲ್ ಅಶೋಕ್, ಜಿಲ್ಲಾ ಪಂಚಾಯತಿ ಮಾಜಿ ಮ್ಯಾಕಲ ನಾರಾಯಣಸ್ವಾಮಿ, ತಾ.ಪಂ ಕೆ.ಕೆ.ಮಂಜುನಾಥ್ ರೆಡ್ಡಿ, ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್, ಕೂರಿಗೇಪಲ್ಲಿ ಪಂಚಾಯತಿ ಮಾಜಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್ರೆಡ್ಡಿ, ಎಲ್.ವಿ.ನಾಗದೇನಹಳ್ಳಿ ಸೀತಾರಾಮ ರೆಡ್ಡಿ, ಗೋವಿಂದಪ್ಪ,ಯರ್ರ ಬಿರ್ರಿ ಗೋಪಾಲ್, ದ್ವಾರಸಂದ್ರ ಮುನಿವೆಂಕಟಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ ಇತರರು ಇದ್ದರು.