ವರದಿ : ಮಝರ್, ಕುಂದಾಪುರ

ಕುಂದಾಪುರ : ಉದ್ಯಮಿ ಸಲಾವುದ್ದೀನ್ ಆದಿಲ್ (77) ಅವರು ಕುಂದಾಪುರ ಖಾರ್ವಿ ಕೇರಿಯಲ್ಲಿರುವ ತನ್ನ ಭಾವ ಎ. ಕೆ. ಅಬ್ದುಲ್ ಖಾದರ್ ಯೂಸುಫ್ ಅವರ ಮನೆಯಲ್ಲಿ ದಿ. 07.07.2022ರ ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಶಿರ್ವ ಮೂಲದವರಾದ ಇವರು ದುಬೈನಲ್ಲಿ ಉದ್ಯಮ ಹೊಂದಿದ್ದು ಇತ್ತೀಚೆಗಷ್ಟೇ ಸ್ವದೇಶಕ್ಕೆ ಆಗಮಿಸಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.