ಸಾಕಿನಾಕ ಅತ್ಯಾಚಾರ: 33 ತಾಸುಗಳ ಜೀವನ್ಮರಣ ಹೋರಾಟ ಬಳಿಕವೂ ಸಂತ್ರಸ್ತೆ ಉಳಿಯಲಿಲ್ಲ

JANANUDI.COM NETWORK

ಮುಂಬೈ: ಮಹಿಳೆಯನ್ನು ಅತ್ಯಾಚಾರ ನಡೆಸಿ, ಖಾಸಗಿ ಅಂಗಕ್ಕೆ ಕಬ್ಬಿಣದ ರಾಡ್ ತುರುಕಿ ಚಿತ್ರ ಹಿಂಸೆ ನೀಡಿದ್ದ ಪ್ರಕರಣದ ಸಂತ್ರಸ್ತೆ, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಸುಮಾರು 33ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಸಂತ್ರಸ್ತೆ, ಕಾಮುಕ ರಕ್ಕಸರ ಮಾನವೀಯತ ಕ್ರತ್ಯದಿಂದ ಬಾಳಿ ಬದುಕಬೇಕಾಗಿದ್ದವಳು, ಹೆಣವಾಗಿ ಈ ಪ್ರಪಂಚಕ್ಕೆ ವಿದಾಯ ಹೇಳಿದ್ದಾಳೆ. ಮುಂಬೈಯ ಸಾಕಿನಾಕಾ ಏರಿಯಾದಲ್ಲಿ ನಿಂತಿದ್ದ ಟೆಂಪೋದ ಮೇಲೆ 34 ವರ್ಷ ವಯಸ್ಸಿನ ಮಹಿಳೆಯ ಮೇಲೆ ಕಾಮುಕರು ಅತ್ಯಾಚಾರ ಎಸಗಿ, ಅಷ್ಟು ತ್ರಪ್ತವಾಗದೆ, ಅವಳ ಗುಪ್ತಾಂಗಕ್ಕೆ ರಾಡ್ ನುಗ್ಗಿಸಿ, ತಾವು ಮನುಷ್ಯರಲ್ಲ ರಾಕ್ಷಸರು ಎಂದು ಸಾಬಿತು ಮಾಡಿದ್ದರು. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಜಾವದೊಳಗೆ ಈ ಘಟನೆ ನಡೆದಿತ್ತು.
ಸಂತ್ರಸ್ತ ಮಹಿಳೆಯನ್ನು ರಕ್ಷಿಸಲು ವೈದ್ಯರು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಒಂದು ಸರ್ಜರಿಯನ್ನು ನಡೆಸಿದರೂ ಆಕೆ ಚೇತರಿಸಿಕೊಂಡಿರಲಿಲ್ಲ. ಕಾಮುಕ ರಕ್ಕಸರು ಎಷ್ಟೊಂದು ವಿಕ್ರತಿ ಮೆರೆದಿದ್ದರೆಂದರೆ, ಆಸ್ಪತ್ರೆಗೆ ಸೇರಿಸುವಾಗ ಅವಳಿಗೆ ಪ್ರಜ್ಞೆ ಇರಲಿಲ್ಲ, ಕೊನೆಗೆ ಪ್ರಜ್ಞೆ ಬರದೆಯೆ ಜೀವನ್ಮರಣ ಹೋರಾಟ ಮುಗಿಸಿದಳು. ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಹೇಯಕರ ಘಟನೆ ನಡೆದು ಕೆಲವೇ ಹೊತ್ತಿನಲ್ಲಿ ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಸ್ತುತ ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಇನ್ನೂ ಈ ಘಟನೆ ಸಂಬಂಧ ಇಡೀ ದೇಶದಲ್ಲೇ ಆಕ್ರೋಶ ವ್ಯಕ್ತವಾಗಿದೆ. ನಿರ್ಭಯ ಪ್ರಕರಣದ ನಂತರ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗ ಬಹುದು ಎಂದು ಎಣಿಸಿದ ನಾಗರಿರಿಗೆ, ದೇಶಲ್ಲೆಡೆ ಅತ್ಯಾಚಾರ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಜಾಸ್ತಿಯಾಗಿದ್ದು, ದೇಶದೆಲ್ಲಡೆ ಅರಾಜಕತೆ ಹುಟ್ಟಿದೆ.