ಕುಂದಾಪುರ, ಜೂ.14: “ಇಂದು ಪ್ರಪಂಚದ ಆಗುಹೋಗುಗಳನ್ನು ಇಂದಿನ ವಿದ್ಯಾರ್ಥಿಗಳು ಬಹಳ ಬೇಗ ತಿಳಿದಿಕೊಳ್ಳುತ್ತಾರೆ, ಅದರಿಂದಾಗಿ ಅವರು ಕೇಳುವ ಪ್ರಶ್ನೆಗಳಿಗೆ ಶಿಕ್ಷಕರಿಗೆ ಸೂಕ್ತ ಉತ್ತರ ಕೊಡಲಾಗುವುದಿಲ್ಲ. ಆದರಿಂದ ಶಿಕ್ಷಕರು ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕು. ಪುಸ್ತಕಗಳನ್ನು, ಲೇಖನಗಳನ್ನು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು.” ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯದರ್ಶಿ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಜೂ.12 ರಂದು ಸಂತ ಮೇರಿಸ್ ಪದವಿ ಪೂ. ಕಾಲೇಜಿನ ಸಭಾಭವನದಲ್ಲಿ ಸಂತ ಮೇರಿಸ್ ವಿಧ್ಯಾ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಸಿಬಂದಿಯೊಂದಿಗೆ ಸಮಾಲೋಚನಾ ಸಭೆಯಲ್ಲಿ ತಿಳಿಸುತ್ತಾ “ಶಿಕ್ಷರು ಕಟ್ಟಕಡೆಯ ವಿದ್ಯಾರ್ಥಿ ಕಡೆಗೆ ಗಮಗ ಕೊಡಬೇಕು, ಈ ಕಟ್ಟಕಡೆಯ ವಿದ್ಯಾರ್ಥಿ ಕಡೆಗೆ ಗಮನ ಕೊಟ್ಟು ಅವನು ಉತ್ತಮ ಫಲಿತಾಂಶ ಪಡೆದು ಉತೀರ್ಣನಾಗಲು ಶ್ರಮ ಪಟ್ಟರೆ, ಬುದ್ದಿವಂತ ವಿದ್ಯಾರ್ಥಿಗಳೂ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆ ಮೂಲಕ ವಿದ್ಯಾಸಂಸ್ಥೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ, ಶಿಕ್ಷಕರು ವರ್ಷಕ್ಕೆ ಒಂದು ಸಲ ಉತ್ತಮ ಗುಣ ಮಟ್ಟದ ವಿದ್ಯಾ ಸಂಸ್ಥೆ ಇರುವ ಕಡೆ ಪ್ರವಾಸ ಮಾಡಿ ಅಲ್ಲಿನ ಗುಣಮಟ್ಟವನ್ನು ತಿಳಿದುಕೊಳ್ಳಬೇಕೆಂದು” ತಿಳಿಸಿದರು.
ಸಂತ ಮೇರಿಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಡಿಸೋಜಾ, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜರಿ ಆಂಗ್ಲ ಮಾದ್ಯಮ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪದವಿ ಪೂ.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್ ತಮ್ಮ ಸಂಸ್ಥೆಗಳ ವರದಿಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಸಂತ ಮೇರಿಸ್ ವಿದ್ಯಾ ಸಮೂಹ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಮತ್ತು ವಿಧ್ಯಾ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಸಿಂಬದ್ದಿ ಹಾಜರಿದ್ದರು.
ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ಸಾಗತಿಸಿ ನಿರೂಪಿಸಿದರು. ಶಿಕ್ಷಕ ಭಾಸ್ಕರ ಗಾಣಿಗ ವಂದಿಸಿದರು.