ಕುಂದಾಪುರ, ಮೇ. 26: ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಈ ಸಾಲಿನಲ್ಲಿ ಉತ್ತಮ ಫಲಿತಾಂಶ ದೊರಕಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯಿಂದ ಮೇ 25 ರಂದು ಸಂಭ್ರಾಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂತ ಮೆರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ 100 ಶೇಕಡ ಫಲಿತಾಂಶ, ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಪ್ರೌಢಶಾಲೆಗೆ ನಿರಂತರ 7 ನೇ ಭಾರಿ 100 ಶೇಕಡ ಫಲಿತಾಂಶ, ಸಂತ ಮೇರಿಸ್ ಪಿಯು ಕಾಲೇಜಿಗೆ 96.6 ಶೇಕಡ ಫಲಿತಾಂಶ ಬಂದಿದ್ದು, ಸಂತ ಮೇರಿಸ್ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿಯೂ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕನ್ನಡ ಮಾಧ್ಯಮ ಶಾಲೆಯಾದರೂ ಬೇಕಾದಷ್ಟು ಮಕ್ಕಳು ಇವರಿಗೆ ಲಭಿಸಿದಕ್ಕೆ ಶಿಕ್ಷಕ, ಶಿಕ್ಷಕೇತರ ಸಿಬಂದಿ ಮತ್ತು ಶಾಲಾ ಆಡಳಿತ ಮಂಡಳಿಯ ಸಲಹಸಮಿತಿ ಸದಸ್ಯರೊಂದಿಗೆ ಸಂತ ಮೇರಿಸ್ ಪಿಯು ಕಾಲೇಜಿನ ಸಬಾಂಗಣದಲ್ಲಿ ಸಂಭ್ರಾಮಾಚರಣೆ ನೆಡಸಲಾಯಿತು.
“ಈ ಸಂದರ್ಭದಲ್ಲಿ ನಮ್ಮ ಶಾಲೆಗಳಿಗೆ ಉತ್ತಮ ಫಲಿತಾಂಶ ದೊರಕಿದೆ, ಇದರಲ್ಲಿ, ಶಾಲಾ ಮುಖ್ಯಸ್ಥರ, ಶಿಕ್ಷಕರ ಪಾತ್ರ ಮಹತ್ವದು, ಈ ಯಶಸಿನಲ್ಲಿ ಶಿಕ್ಷಕೇತರ ಸಿಬಂದಿಯ ಪಾತ್ರವೂ ಇದೆ, ಅಡುಗೆಯವರ, ಚಾಲಕರ ಪಾತ್ರವೂ ಇದೆ. ಎಲ್ಲಾ ಸಂದರ್ಭದಲ್ಲಿ ನಾವು ಶಿಕ್ಷಕರು ತಮ್ಮನ್ನು ತಾವೇ ಉತ್ತಮ ಶಿಕ್ಷಕರು ಎಂದು ಮನದಟ್ಟು ಮಾಡಿಕೊಳ್ಳಬೇಕು, ಇನ್ನು ಮುಂದೆ ಕೂಡ ನೀವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ನಿಮ್ಮ ಕರ್ತಯ್ಯ ಪಾಲಿಸಬೇಕು, ಕೇವಲ ಅಂಕ ಗಳಿಸುವುದು ಮಾತ್ರವಲ್ಲ, ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎನ್ನುತ್ತಾ, ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಫಲಿತಾಂಶ ದೊರಕಿದ್ದರಿಂದ ಇಂದು ನಾವು ಸಂಭ್ರಮಿಸೋಣ’ ಎಂದು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕ, ಶಿಕ್ಷಕೇತರ ಸಿಬಂದಿ ಮತ್ತು ಶಾಲಾ ಆಡಳಿತ ಮಂಡಳಿಯ ಸಲಹಸಮಿತಿ ಸದಸ್ಯರ ಪರವಾಗಿ ಸ್ವಲ್ಪ ದಿವಸಗಳ ನಂತರ ಕೋಟ ಚರ್ಚಿಗೆ ವರ್ಗಾವಣೆಗೊಂಡು ನಿರ್ಗಮಿಸಲಿರುವ ಸದ್ಯ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಮತ್ತು ಉಡುಪಿ ಧರ್ಮಪ್ರಾಂತ್ಯದ ಅನುಗ್ರಹ ಕೇಂದ್ರಕ್ಕೆ ‘ಯಾಜಕ ಗುರು ದೀಕ್ಷೆ ಅಹ್ವಾನ’ ಕೇಂದ್ರದ ನಿರ್ದೇಶಕರಾಗಿ ಮತ್ತು ಬಾಲಯೇಸುವಿನ ಪಂಗಡದ ನಿರ್ದೇಶಕರಾಗಿ ತೆರಳುವ ಸದ್ಯ ರೋಜರಿ ಚರ್ಚಿನ ಸಹಾಯಕ ಧರ್ಮಗುರುಗಳಾಗಿರುವ ವಂ|ಅಶ್ವಿನ್ ಆರಾನ್ನ ಇವರನ್ನು ಬಿಳ್ಕೊಡುಗೆಯಾಗಿ ಫಲ ಪುಷ್ಪ ಶಾಲು ಹೊದೆಸಿ ಸನ್ಮಾನಿಸಲಾಯಿತು.
ಪೂಜ್ಯ ಫಾ| ಸ್ಟ್ಯಾನಿ ತಾವ್ರೊ ಇವರು ನನಗೆ ಬೀಳ್ಕೊಡೆಗೆಕ್ಕಿಂತ ಶಾಲೆಯ ಅಭಿವ್ರದ್ದಿಯೆ ಮುಖ್ಯ ಕಾರ್ಯಕ್ರಮ, ನಿಮ್ಮ ಪ್ರೀತಿಗಾಗಿ ನಾನು ತಲೆಬಾಗಿಸುತೇನೆ ಎಂದು ಹೇಳಿದರು. ಪೂಜ್ಯ ಅಶ್ವಿನ್ ಆರಾನ್ನ ಮಾತನಾಡಿ ನಾನು ಕಿಂಚಿತ್ತು ಈ ಶಾಲೆಗಳಲ್ಲಿ ತೊಡಗಿಸಿಕೊಂಡಿದ್ದರೆ, ನಮ್ಮ ಪೂಜ್ಯ ಫಾ| ಸ್ಟ್ಯಾನಿ ಇವರ ಪ್ರೇರಣೆ ಎಂದು ತಿಳಿಸಿ, ಸನ್ಮಾನಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಶಿಕ್ಷಕ ಚಂದಶೇಖರ ಬೀಜಾಡಿ ಮತ್ತು ಉಪನ್ಯಾಸಕ ನಾಗರಾಜ ಶೆಟ್ಟಿ ಸನ್ಮಾನಿತರ ಪರಿಚಯವನ್ನು ನೀಡಿದರು. ವೇದಿಕೆಯಲ್ಲಿ ರೋಜರಿ ಮಾತಾ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, ಸಂತಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯಾಪಾಧ್ಯಾಯಿನಿ ಡೋರಾ ಲುವಿಸ್, ಸಂತ ಮೇರಿಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯಾಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ ಉಪಸ್ಥಿತರಿದ್ದರು.
ಶಿಕ್ಷಕ ಪ್ರಶಾಂತ್ ರೇಬೆರೊ ಸ್ವಾಗತಿಸಿದರು, ಶಿಕ್ಷಕ ಭಾಸ್ಕರ ಗಾಣಿಗ ಧನ್ಯವಾದಗಳನ್ನು ಅರ್ಪಿಸಿದರು. ಶಿಕ್ಷಕ ಚಂದಶೇಖರ ಬೀಜಾಡಿ ನಿರೂಪಿಸಿದರು. ಸಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.