

ಕುಂದಾಪುರ, ಮೇ.26: ಸಂತ ಮೇರಿಸ್ ಕನ್ನಡ ಮಧ್ಯಮ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಮತ್ತು ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯ ಶಿಕ್ಷಕ ಭಾಸ್ಕರ ಗಾಣಿಗ ನಿವೃತ್ತಿಯ ಅಂಚಿನಲ್ಲಿರುವ ಇವರಿಗೆ ಶಾಲಾ ಆಡಳಿತ ಮಂಡಳಿಯ ಪರವಾಗಿ ಸಂತ ಮೇರಿಸ್ ಪಿಯು ಕಾಲೇಜಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಳ್ಕೊಡುಗೆಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಜಂಟಿ ಕಾರ್ಯದರ್ಶಿ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಅತಿಥಿಗಳ ಜೊತೆ ಇಬ್ಬರನ್ನು ಫಲ ಪುಷ್ಪ ನೀಡಿ, ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಿದರು. ಇವರು ನೀಡಿದ ಸೇವೆಯನ್ನು ಅವರು ಶ್ಲಾಘಿಸಿದರು. ಶಿಕ್ಷಕ ಭಾಸ್ಕರ ಗಾಣಿಗರವರು ವಿವಿಧೆಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕುಂದಾಪುರ ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯಲ್ಲಿ ಬಹಳ ವರ್ಷ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವ ಜೊತೆ ಶಾಲೆಯಲ್ಲಿ ಎನ್.ಸಿ.ಸಿ. ತರಬೇತಿದಾರಾಗಿಯೂ, ಸೇವೆ ಸಲ್ಲಿಸುತಿದ್ದರು. ಅವರು ಒಟ್ಟು 38 ವರ್ಷ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಕಿ ಡೋರಾ ಸುವಾರಿಸ್ ಇವರು ಅನೇಕ ಕಡೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಬಹಳ ವರ್ಷಗಳಿಂದ ಕುಂದಾಪುರ ಸಂತ ಮೇರಿಸ್ ಕನ್ನಡ ಮಾಧ್ಯಮ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತಿದ್ದಾರೆ, ಇವರು ವಿದ್ಯಾರ್ಥಿಗಳ ಆಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದು, ಇವರು ಅತ್ಯತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ ಇವರೂ ಕೂಡ 38 ವರ್ಷಗಳ ಸುಧೀರ್ಘ ಸೇವೆ ನೀಡಿದವರಾಗಿದ್ದಾರೆ.
ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯ ನಿವøತ್ತ ಮುಖ್ಯೋಪಾಧ್ಯಾಯರಾದ ಎಲ್.ಜೆ.ಫೆರ್ನಾಂಡಿಸ್ ಶುಭ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ರೋಜರಿ ಮಾತಾ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಶಾಲೆಯ ಮುಖ್ಯಾಪಾಧ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, , ಸಂತ ಮೇರಿಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯಾಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ, ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ 5 ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು, ಶಿಕ್ಷೇತರ ಸಿಂಬಂದಿ ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಯ ಸಲಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.













