ಕುಂದಾಪುರ. ಜುಲೈ 30. ವಯೋ ನಿವೃತ್ತಿ ಗೊಂಡ ಶಿಕ್ಷಕಿ ಆನ್ನಿ ಸಿ. ಕ್ರಾಸ್ತಾ ಇವರಿಗೆ ಬೀಳ್ಕೊಡುಗೆ ಸಮಾರಂಭ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ಅತಿ ವoದನಿಯ ಫಾದರ್ ಪೌಲ್ ರೇಗೊ ಅವರು ವಿವಿಧೆಡೆ 38 ವರ್ಷಗಳ ಸುಧೀರ್ಘ ಸೇವೆ, ಇಲ್ಲಿ 9 ವರ್ಷಗಳ ಕಾಲ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಏಳಿಗೆಗಾಗಿ ದುಡಿದ ಶಿಕ್ಷಕಿಯನ್ನು ಅಭಿನಂದಿಸಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಶಿಕ್ಷಕಿ ಆನ್ನಿ ಸಿ. ಕ್ರಾಸ್ತಾ ಬಗ್ಗೆ ಶಿಕ್ಷಕಿ ಜ್ಯೋತಿ ಡಿಸಿಲ್ವ ರವರು ತಮ್ಮ ಅನಿಸಿಕೆಗಳನ್ನು ಹoಚಿಕೊಂಡರು. ಶಿಕ್ಷಕಿ ಗೀತಾ ನೊರೊನ್ನರವರು ಸನ್ಮಾನ ಪತ್ರ ವಾಚಿಸಿದರು.ವೇದಿಕೆಯಲ್ಲಿ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನ ಪ್ರಾoಶುಪಾಲೆ ರೇಷ್ಮಾ ಫೆರ್ನಾಂಡಿಸ್, ಸೈಂಟ್ ಮೇರೀಸ್ ಹೈಸ್ಕೂಲ್ ಮು.ಶಿ. ಅಸುಂಪ್ತ ಲೋಬೊ. ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಮು. ಶಿಕ್ಷಕಿ ಸಿ. ತೆರೆಜಾ ಶಾಂತಿ, ರೋಜರಿ ಕಿಂಡರ್ ಗಾರ್ಡನ್ ಮುಖ್ಯ ಶಿಕ್ಷಕಿ ಶೈಲಾ ಲೂವಿಸ್ ಹಾಗೂ ಆನ್ನಿ ಕ್ರಾಸ್ತಾ ಆವರ ಪತಿ ಎಂ.ಸಿ.ಸಿ. ಬ್ಯಾಂಕ್ ನ ನಿರ್ದೇಶಕರಾದ ಎಲ್ರೊಯ್
ಕಿರಣ್ ಕ್ರಾಸ್ತಾ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಾಂತಿ ರಾಣಿ ಸ್ವಾಗತಿಸಿದರು. ಶಿಕ್ಷಕಿ ಪ್ರೀತಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ರೀಮತಿ ರವರು ವಂದಿಸಿದರು.