ಕುಂದಾಪುರ, ಡಿ.8: ಸ್ಥಳೀಯ ಹೆಸರುವಾಸಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಡಿ.7 ರಂದು ಶಾಲಾ ಮೈದಾನದಲ್ಲಿ ವಿಜ್ರಂಬಣೆಯಿಂದ ನಡೆಯಿತು. ಶಾಲ ವರದಿಯನ್ನು ಡಿಜೀಟಲ್ ಪರದೆಯ ಮೂಲಕ ಪ್ರಸ್ತೂತ ಪಡಿಸಲಾಯಿತು.
ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಹಳೆ ವಿದ್ಯಾರ್ಥಿ, ಕುಂದಾಪುರ ತಾಲೂಕಿನ ಆರೋಗ್ಯಾಧಿಕಾರಿಯಾದ ಡಾ.ಕೆ.ಪ್ರೇಮಾನಂದ ಅಗಮಿಸಿ “ಪ್ರಾರ್ಥಮಿಕ, ಪ್ರೌಢಶಾಲೆಗಳಲ್ಲಿ ಕಲಿಯುತ್ತೀರು ಸಮಯದ ಕ್ಷಣಗಳು ಮರೆಯಾಲರದಂತವು, ನಮಗೆ ಕಲಿಸಿದ ಪಾಠಗಳು ನೆನಪಿನಲ್ಲಿರುವುದು ಕಷ್ಟವಾದರೂ, ಬಾಲ್ಯದ ಆ ಕ್ಷಣಗಳು, ಪ್ರವಾಸ, ಸಾಂಸ್ಕ್ರತಿಕ ಕಾರ್ಯಕ್ರಮ, ಚಟುವಟಿಕೆ ಸ್ಮರಣೀಯವಾಗಿರುತ್ತೀವೆ. ಶಾಲೆಯಲ್ಲಿ ನೀಡುವ ಮಾರ್ಗದರ್ಶನ ಆವಾಗ ಅರ್ಥವಾಗದಿದ್ದರೂ, ಜೀವನದಲ್ಲಿ ಕ್ರಮೇಣ ಅವು ನಮಗೆ ಉಪಯುಕ್ತವಾಗುತ್ತವೆ. ನನಗೆ ಮತ್ತು ನನ್ನ ಒಡಹುಟ್ಟಿದವರಿಗೆಲ್ಲರಿಗೂ ವಿಧ್ಯೆ ಬುದ್ದಿ ನೀಡಿದ ಈ ಶಾಲೆ ಹೆಸರುವಾಸಿ ಶಾಲೆ. ನನ್ನ ಜೀವನದಲ್ಲಿ ಶಿಸ್ತು, ನೀತಿ, ನಿಯಮ ಕಲಿತ್ತದದ್ದು ಇದೇ ಶಾಲೆ” ಎಂದು ಅವರು ತಮಗೆ ಶಿಕ್ಷಣ ನೀಡಿದ ಶಾಲೆಯ ಶಿಕ್ಷಕರನ್ನು ನೆನೆಸಿಕೊಳ್ಳುತ್ತಾ “ಕನ್ನಡ ಶಾಲೆಯೆಂದು ಕೀಳಾಗಿ ಕಾಣುವ ಅಗತ್ಯವಿಲ್ಲಾ, ಕನ್ನಡ ಮಾದ್ಯಮದಲ್ಲಿ ಕಲಿತವರಿಗೆ ಇಂಜಿನಿಯರಿಂಗ್, ವೈದ್ಯ ಪದವಿಯ ಸೆರ್ಪಡೆಗೆ ಹೆಚ್ಚಿನ ಅನುಕೂಲವಿದೆಯೆಂದು ಅವರು ತಿಳಿಸಿದರು.
ಇನ್ನೊರ್ವ ಅತಿಥಿ ಶಾಲಾ ಹಳೆವಿದ್ಯಾರ್ಥಿನಿ, ಎಚ್.ಎಂ.ಎಂ. ಮತ್ತು ವಿ.ಕೆ.ಆರ್. ಅಂಗ್ಲಾ ಮಾದ್ಯವi ಶಾಲೆಯ ಪ್ರಾಂಶುಪಾಲರಾದ ಡಾ|ಚಿಂತನಾ ರಾಜೇಶ್ “ಎಲ್ಲರ ಜೀವನದಲ್ಲಿ ನಾವು ಕಲಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದಿನಗಳು ಅತ್ಯಂತ ಪ್ರಮುಖವಾಗಿರುತ್ತದೆ. ನನಗೆ ಬದ್ದತೆ, ನೀತಿ ಕಲಿಸಿಕೊಟ್ಟ ಶಾಲೆಯಿದು, ಸುಮರು 40-45 ವರ್ಷಗಳಿಂದ ಈ ಶಾಲೆಗಳು ನಿರಂತರ ತಮ್ಮ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಿದೆ ಎಂದು ಹೇಳಲು ಸಂತೋಷವಾಗುತ್ತದೆ. ಶಿಕ್ಷಕರು ಹೇಳಿಕೊಡುವ ನೀತಿ, ಬುದ್ದಿ ಮಾತು ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ನಮ್ಮ ಮಕ್ಕಳು ಒಳ್ಳೆಯವರಾಗಲು ತಾಯಂದಿರು ಕಾರಣವಾಗಬೇಕು, ಆದರಿಂದ ನಾವು ಉತ್ತಮ ತಾಯಂದಿರಾಗಬೇಕು” ಎಂದು ಅವರು ತಿಳಿಸಿದರು. ಮತ್ತೊರ್ವ ಅತಿಥಿ ಶಾಲಾ ಹಳೆ ವಿದ್ಯಾರ್ಥಿನಿ ಹಿಮಾಲಯನ್ ಬೈಕ್ ರೈಡರ್ ಸಾಧಕಿ, ಕಾಪೆರ್Çರೇಟರ್ ಟೈನರ್, ರಾಜ್ಯ ಮಟ್ಟದ ವಾಲಿಬಾಲ್ ಪಟು, ಸಾಹಸಿ ವಿಲ್ಮಾ ಕ್ರಾಸ್ಟೊ ಮಾತನಾಡಿ “ನಾನು ಈ ಶಾಲೆಯ ಹಳೆ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆಯನ್ನಿಸುತ್ತದೆ, ನಾನು ಶಾಲಾ ಜೀವನದಲ್ಲಿ ಎಂದು ವೇದಿಕೆ ಹತ್ತಲಿಲ್ಲಾ, , ಅಂದರೆ ನಾವು ಇಂದು ಏನು ಮಾಡಲೂ ಸಾಧ್ಯವಾಗದಿದ್ದರೂ, ಮುಂದಿನ ದಿನಗಳಲ್ಲಿ ಸಾಧಕಾರಾಗಬಹುದು, ಇದಕ್ಕೆ ನಮಗೆ ಸಣ್ಣವರಿರುವಾಗ ಶಾಲೆಯಲ್ಲಿ ಕಲಿಸಿದ ಶಿಕ್ಷಣ, ರೀತಿ ನೀತಿ ಶಿಕ್ಷಕರ ಉತ್ತೇಜನ ಕಾರಣವಾಗುತ್ತೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿ, ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಹಾಗೂ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಕನ್ನಡ ಮಾದ್ಯಮ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುತ್ತೀದೆ, ಇಂದಿನ ದಿವಸಗಳಲ್ಲಿ ಕನ್ನಡ ಅನುದಾನಿತ ಶಾಲೆಗಳಿಗೆ ಕಶ್ಟದ ಸಮಯ, ನಮಗೆ ನಮ್ಮ ಶಾಲೆಯ ಮುದ್ದು ಮಕ್ಕಳೇ ಆಸ್ತಿ, ಶಾಲೆಯ ಹಳೆ ವಿದ್ಯಾರ್ಥಿಗಳೆ ಸಂಪತ್ತು, ನಮ್ಮ ಶಾಲೆ ಗುಣ ಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ನಡತೆ, ಒಳ್ಳೆಯ ಸಂಸ್ಕಾರ, ಕಲಿಸಿಕೊಡುತ್ತೇವೆ, ಇಲ್ಲಿ ಕಲಿತರೆ ಮಕ್ಕಳು ಭಾರತದ ಮುಂದಿನ ಉತ್ತಮ ಪ್ರಜೆಳಾಗುವ ಭರವಶೆ ನಮ್ಮದಾಗಿದೆಯೆಂದು” ಸಂದೇಶ ನೀಡಿದರು.
ವಿಲ್ಮಾ ಕ್ರಾಸ್ಟೊ ಮತ್ತು ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಇವರುಗಳನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಟ ಪಾಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮ ಶಿಕ್ಷಕಿ ಜ್ಯೋತಿ ಡಿಸಿಲ್ವಾ ಮತ್ತು ಸುಶೀಲಾ ಖಾರ್ವಿ ನಡೆಸಿಕೊಟ್ಟರು. ತರಗತಿ ಒಂದರಿಂದ ಹತ್ತನೇ ತರಗತಿಯ ವರೆಗಿನ ಮಕ್ಕಳು ನ್ರತ್ಯ, ಕುಣಿತ, ನಾಟಕ ಹೀಗೆ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು. ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಫಾ|ಸ್ಟ್ಯಾನಿ ತಾವ್ರೊ, ಪುರಸಭಾ ಸದಸ್ಯ ಪ್ರಭಾಕರ, ಅಶೋಕ್ ನಾೈಕ್ ಸಮನ್ವಯ ಅಧಿಕಾರಿ ಕುಂದಾಪುರ, ಸುನೀತಾ ಬಾಂಜ್, ಸಮೂಹ ಸಂಪನ್ಮೂಲ ವ್ಯಕ್ತಿ ವಡೇರಹೋಬಳಿ ಕ್ಲಸ್ಟರ್, ಹಳೆ ವಿದ್ಯಾರ್ಥಿ ಪ್ರವೀಣ್ ಕುಮಾರ್ ಟಿ. ಇವರು ಭಾಗವಹಿಸಿದ್ದರು. ಸಂಜೆಯ ಕಾರ್ಯಕ್ರಮದಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಾಲಾ ಮುಖಂಡರಾದ ಮನ್ವಿತಾ ಬಿ. ಮತ್ತು ವೈಷ್ಣವಿ ಉಪಸ್ಥಿತರಿದ್ದರು.
ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು, ಸಂತ ಮೇರಿಸ್ ಹಿ. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ಮತ್ತು ಶಿಕ್ಷಕಿ ಸ್ಮಿತಾ ಡಿಸೋಜಾ ನಿರೂಪಿಸಿದರು.