ಕುಂದಾಪುರ, 8 ಜೂನ್ 2024 ನಗರದ ಸೈಂಟ್ ಮೇರಿಸ್ ಪ ಪೂ ಕಾಲೇಜಿನಲ್ಲಿ ದೀಪ ಬೆಳಗುವುದರ ಮೂಲಕ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮವನ್ನು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು, ವಿದ್ಯಾ ಸಂಸ್ಥೆಯ ಸಂಚಾಲಕರಾದ ಅ|ವಂ|ಪಾವ್ಲ್ ರೇಗೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು, ದೀಪವನ್ನು ಬೆಳಗಿಸಿ ಉದ್ಘಾಟಿಸಿ “ವಿದ್ಯಾರ್ಥಿಗಳಲ್ಲಿ ಗುರಿ ಇಲ್ಲದೇ ಇದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಉತ್ತಮ ಸಾಧನೆ ಮಾಡಿ. ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ. ಸಾಮಾಜಿಕ ಜಾಲ ತಾಣದಿಂದ ನೀವೆಲ್ಲ ದೂರವಿರಬೇಕು. ನಿಮಗೆಲ್ಲ ಉತ್ತಮ ಆರೋಗ್ಯ, ಬುದ್ಧಿಶಕ್ತಿಯನ್ನು ದೇವರು ನೀಡಲಿ, ಕಾಲೇಜಿನಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವನ್ನು ಹಾರೈಸುತ್ತೇನೆ’ ಎಂದು ಸಂದೇಶ ನೀಡಿದರು.
ಈ ಸಂಧರ್ಭದಲ್ಲಿ ರಸಾಯನ ಶಾಸ್ತ್ರದಲ್ಲಿ ಅನುಭವಿ, ಅಗಾಧ ಜ್ಞಾನ ಹೊಂದಿರುವ, ಸರಸ್ವತಿ ವಿದ್ಯಾಲಯ ಗಂಗೊಳ್ಳಿ ಇಲ್ಲಿಯ ನಿವೃತ್ತ ಪ್ರಾಂಶುಪಾಲರಾದ ಆರ್ ಏನ್ ರೇವಣ್ಕರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಥಮ ಹಾಗೂ ದ್ವೀತಿಯ ಪಿಯುಸಿಯಲ್ಲಿ ಕಲಿಯುತ್ತಿರುವ ಕೆಲವು ವಿದ್ಯಾರ್ಥಿಗಳಿಗೆ ಅವರ ಹಿಂದಿನ ವರ್ಷದ ಸಾಧನೆಗೆ ಶ್ಲಾಘಿಸಿ ಬಹುಮಾನ ವಿತರಿಸಿ ’ವಿದ್ಯಾರ್ಥಿಗಳೆ ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಒಂದು ನಿರ್ಧಿಷ್ಟ ಗುರಿ ಇರಬೇಕು. ನಿರಂತರ ಪ್ರಯತ್ನ ಹಾಗೂ ವ್ಯಾಸಂಗದ ಮೇಲೆ ಶ್ರದ್ಧೆ ಇರಲಿ. ಸಮಾಜದಲ್ಲಿ ಎಲ್ಲರ ಪ್ರೀತಿಪಾತ್ರರಾಗಬೇಕು ಎನ್ನುತ್ತಾ “ಬತ್ತದ ತೆನೆಯಂತೆ” ನಮ್ಮ ಜೀವನ ಇರಬೇಕು ಎಂದು ಉತ್ತಮ ಉದಾಹರಣೆ ನೀಡಿ, ವಿದ್ಯಾರ್ಥಿಗಳೇ ನೀವೆಲ್ಲರೂ “ಬೆಂಕಿಯ ಕಿಡಿ”ಯಾಗದೆ “ಬೆಳಕಿನ ಕುಡಿ”ಯಾಗಬೇಕು ಮೌಲ್ಯಯುತ ಮಾತುಗಳನ್ನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಷ್ಮಾ ಪೆರ್ನಾಂಡಿಸ್ ರವರು ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಪ್ರೀತಿ ಕ್ರಾಸ್ತಾರವರು ಅತ್ತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.ಕಾರ್ಯಕ್ರಮವು ವಿದ್ಯಾರ್ಥಿಗಳ ಸುಶ್ರಾವ್ಯ ಪ್ರಾರ್ಥನೆ ಹಾಗೂ ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಗಿ ವಿದ್ಯಾರ್ಥಿನಿ ರಿಯಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಜೋನಿಟಾ ಮೆಂಡೊನ್ಸಾ ಧನ್ಯವಾದ ಸಮರ್ಪಿಸಿದರು.