

ಕುಂದಾಪುರ: ದಿನಾಂಕ 14-2-22 ರಂದು ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ “ಜನತಾ ಅವಿಷ್ಕಾರ್ 2022” ಎಂಬ ಕಾರ್ಯಕ್ರಮದಲ್ಲಿ ಕುಂದಾಪುರ ಹಾಗೂ ಬೈಂದೂರು ವಲಯದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ಸ್ಫರ್ಧೆ ಹಮ್ಮಿಕೊಂಡಿದ್ದು, ಇದರಲ್ಲಿ ಕುಂದಾಪುರ ಸಂತ ಮೇರಿಸ್ ಪ್ರೌಢ ಶಾಲೆಯ ನಾಲ್ಕು ವಿದ್ಯಾರ್ಥಿಗಳ ಒಂದು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಇವರಿಗೆ ಸಂತ ಮೇರಿಸ್ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಸ್ಮಿತಾ ಡಿಸೋಜಾ ಇವರ ಮಾರ್ಗದರ್ಶನ ನೀಡಿದ್ದರು.

