
.

ಕುಂದಾಪುರ ಸಂತ ಜೋಸೆಫರ ಶಾಲೆಗೆ ಅಪೋಸ್ತಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಶಿಕ್ಷಣ ಕಾರ್ಯದರ್ಶಿಗಳಾದ ಭಗಿನಿ ಅನ್ಸಿಲಾ ಭೇಟಿ ನೀಡಿದರು. ಶಾಲಾ ವಾದ್ಯ ವೃಂದದೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು.
ಉಭಯಶಾಲಾ ಶೈಕ್ಷಣಿಕ ವರದಿಯನ್ನು ವಿದ್ಯಾರ್ಥಿಗಳು ಕಿರು ಪ್ರಹಾಸನದ ಮೂಲಕ ನಿರೂಪಿಸಿದರು. ಶಿಕ್ಷಣ ಕಾರ್ಯದರ್ಶಿಗಳು ಮಾತನಾಡಿ ಅರ್ಥಪೂರ್ಣ ಹಾಗೂ ಉತ್ತಮ ಸಂದೇಶ ಪೂರ್ಣ ಮಾಹಿತಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಅಪಸ್ತೋಲಿಕ್ ಕಾರ್ಮೆಲ್ ಸಂಸ್ಥೆಯ ಶಿಕ್ಷಣ ಕಾರ್ಯದರ್ಶಿಗಳಾದ ಭಗಿನಿ ಅನ್ಸಿಲಾ ಹಾಗೂ ಕಾರ್ಯದರ್ಶಿಗಳಾದ ಭಗಿನಿ ಆರಾಧನಾ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಶ್ರೀಮತಿ ವೈಲೆಟ್ ಡಿಸೋಜ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಪ್ರೇಮಿಕಾ ಇವರು ವಂದಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಇವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಜಂಟಿ ಕಾರ್ಯದರ್ಶಿ ಸಿಸ್ಟರ್ ಆಶಾ ಹಾಗೂ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಸಂಗೀತ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





