ಕುಂದಾಪುರ, ದಿನಾಂಕ 13-07-2024 ರಂದು ಸಂತ ಜೋಸೆಫರ ಪ್ರೌಢಶಾಲೆ ಕುಂದಾಪುರ ಇಲ್ಲಿ ರಕ್ಷಕ ಶಿಕ್ಷಕರ ಮಹಾಸಭೆ ನಡೆಯಿತು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ನೆರೆದಿರುವ ಎಲ್ಲರಿಗೂ ಶುಭ ಹಾರೈಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಇವರು ಶೈಕ್ಷಣಿಕ ಸಾಲಿನ ವರದಿ ವಾಚಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಯುತ ಅಶೋಕ್ ನಾಯ್ಕ್ ಸಮೂಹ ಸಂಪನ್ಮೂಲ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಇವರು ಮಾತನಾಡುತ್ತಾ ಪ್ರತಿ ಮಗು ತನ್ನ ಭಾವನೆಗಳನ್ನು ಹೆತ್ತವರೊಡನೆ ಹಂಚಿಕೊಳ್ಳಲು ಬಯಸುತ್ತದೆ ಆದ್ದರಿಂದ ಪೋಷಕರು ಮಕ್ಕಳೊಡನೆ ಕಾಲ ಕಳೆಯಲು ಸಮಯವನ್ನು ಮೀಸಲಿಟ್ಟರೆ ಅವರ ವಿಕಾಸಕ್ಕೆ ಸಹಕರಿಯಾಗುತ್ತದೆ. ಒಳ್ಳೆಯ ಸಲಹೆ ನೀಡುವವರು ಉತ್ತಮ ಸ್ನೇಹಿತರು. ಮೊಬೈಲ್ ಬಳಕೆ ಮಕ್ಕಳ ಕಲಿಕೆಗೆ ಪೂರಕವಾಗಿರಬೇಕು.ಮಕ್ಕಳು ತಮಗೆ ಒದಗಿ ಬರುವ ಅವಕಾಶ ಸನ್ನಿವೇಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದರು. ಶಾಲಾ ಹಿರಿಯ ಶಿಕ್ಷಕರಾದ ಮೈಕಲ್ ಸರ್ ಇವರು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸರಸ್ವತಿ ಇವರು ವಂದಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ಇವರು ನಿರೂಪಿಸಿದವರು. ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.