ಸಂತ ಜೋಸೆಫ್ ಪ್ರೌಢ ಶಾಲೆ ಕುಂದಾಪುರ: ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಕುಂದಾಪುರ: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜು. 27 ರಂದು ನಡೆಯಿತು. ರೋಟರಿ ಕ್ಲಬ್ ರಿವರ್ ಸೈಡ್ ಕುಂದಾಪುರ ಇದರ ಅಧ್ಯಕ್ಷರಾಗಿರುವ ಕೆ .ಎಸ್ ಮಂಜುನಾಥ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಹೆತ್ತವರು ನಗು ಮೊಗದಿಂದ ಸ್ವಾಗತಿಸಬೇಕು .ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ಸಿದ್ಧಗೊಳಿಸಿಕೊಂಡು ಅದರ ಅನ್ವಯ ಅಭ್ಯಾಸ ಮಾಡಿದರೆ ಯಶಸ್ಸು ದೊರೆಯುತ್ತದೆ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳನ್ನು ಅಣಿಗೊಳಿಸಬೇಕಾದ ಅನಿವಾರ್ಯತೆ ಹೆತ್ತವರು ಹಾಗೂ ಶಿಕ್ಷಕರಿಗೆ ಇದೆ .ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಆಶಾ ರವರು ಮಾತನಾಡಿ ಪೋಷಕರು ಮನೆಯಲ್ಲಿ ಮಕ್ಕಳಿಗೆ ಕಲಿಕೆಯ ವಾತಾವರಣವನ್ನು ಕಲ್ಪಿಸಿಕೊಡಬೇಕು” ಎಂದರು. ಕಾನ್ವೆಂಟಿನಾ ಸುಪೀರಿಯರ್ ಆಗಿರುವ ಸಿಸ್ಟರ್ ಸಂಗೀತ ರವರು ಶುಭಹಾರೈಸಿದರು .ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಇವರು ವರದಿ ವಾಚಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ಸ್ವಾಗತಿಸಿದರು .ಶಿಕ್ಷಕಿ ಶ್ರೀಮತಿ ಸರಸ್ವತಿ ಇವರು ವಂದಿಸಿದರು ದೈಹಿಕ ಶಿಕ್ಷಕರಾದ ಮೈಕಲ್ ಇವರು ನಿರೂಪಿಸಿದರು .ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.