ಸಂತ ಜೋಸೆಫ್ ಪ್ರೌಢ ಶಾಲೆಯ ವಾರ್ಷಿಕೋತ್ಸವ : ‘ನನ್ನಿಂದ ಸಾಧ್ಯವಿದೆಯೆಂದು ಧ್ರಡವಾಗಿ ನಂಬಿರಬೇಕು’- ಭಗಿನಿ ಆಶಾ

ಕುಂದಾಪುರ: ಡಿ.20: “ಪ್ರತಿಭೆಗಳು ಎಲ್ಲರಲ್ಲಿಯು ಆದಗಿವೆ, ಅವುಗಳನು ಸದುಪಯೋಗಿಸಿ ಕೊಂಡರೆ ಅವುಗಳು ಅಭಿವ್ರದ್ದಿ ಹೊಂದುತ್ತವೆ, ಉಪಯೋಗಿಸಿಕೊಳ್ಳದಿದ್ದಲ್ಲಿ, ಕಬ್ಬಿಣ ತುಕ್ಕು ಹಿಡಿಯುವಂತೆ, ನಶಿಸಿ ಹೋಗುತ್ತವೆ. ಓದು, ಧ್ಯಾನ ಮತ್ತು ವ್ಯಾಯಮ ಮನುಷ್ಯನಿಗೆ ಅತೀ ಮುಖ್ಯ” ಎಂದು ಸಂತ ಜೋಸೆಫ್ ಶಾಲೆಗಳ ಜಂಟಿ ಕಾರ್ಯದರ್ಶಿ ಭಗಿನಿ ಆಶಾ ಎ.ಸಿ. ಹೇಳಿದರು.
ಅವರು ಸಂತ ಜೋಸೆಫ್ ಪ್ರೌಢ ಶಾಲೆಯ ವಾರ್ಷಿಕೋತ್ಸವದ (10—12-22) ದಿನದಂದು ಅಧ್ಯಕ್ಷತೆ ವಹಿಸಿಕೊಂಡು ಮಾತಾನಾಡುತ್ತ ‘ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ತೊಡಗಿಕೊಳ್ಳಲು ಬೆಳಗಿನ ಸಮಯವನ್ನು ಆರಿಸಿಕೊಳ್ಳಬೇಕು, ಬೆಳಿಗೆ ಮನಸು ಶುಭ್ರವಾಗಿದ್ದು, ನಾವು ಒದಿದ ವಿಷಗಳು ಮನಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಬೇಕು, ಅದರಂತೆ ನಿಗದಿತ ಸಮಯದೊಳಗೆ ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಬೇಕು, ಗುರಿ ಇದ್ದರೆ ಮಾತ್ರ ಸಾಲದು, ಗುರಿಯಡೆ ಗಮನವೂ ಇರಬೇಕು. ಹಳೆಯದನ್ನು ನೆಚ್ಚಿಕೊಂಡಿರಬಾರದು, ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು, ನನ್ನಿಂದ ಸಾಧ್ಯವಿದೆಯೆಂದು ಧ್ರಡವಾಗಿ ನಂಬಿರಬೇಕು’ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಮ್.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಎಲ್‍ರೋಯ್ ಕಿರಣ್ ಕ್ರಾಸ್ಟೊ ಮಾತನಾಡಿ, ‘ಏಕಾಗ್ರತೆಯಿಂದ, ಮನಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಪಾಠಗಳನ್ನು ಅಧ್ಯಯನ ಮಾಡಿದರೆ, ಉತ್ತಮ ಸಫಲತೆ ಪಡೆಯಹುದು, ಮಕ್ಕಳು ಮೊಬಾಯ್ಲ್ ಆಟಗಳನ್ನು ಕಡಿಮೆ ಮಾಡಿ, ಮೈದಾನದ ಆಟಗಳಲ್ಲಿ ತೊಡಗಿಸಿಕೊಂಡು, ಓದಿನಲ್ಲಿ ಅಲ್ಲದೆ ತಮ್ಮ ದೈಹಿಕ ಕ್ಷಮತೆಯನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆಯೆಂದು’ ತಿಳಿಸಿದರು.
ಕುಂದಾಪುರ ಸಂತ ಜೋಸೆಫ್ ಕನ್ಯಾಮಠದ ಮುಖ್ಯಸ್ಥೆ ಭಗಿನಿ ಮರಿಯಾ ಸಂಗೀತ ನಮ್ಮ ಜೀವನದಲ್ಲಿ ಅಸಾಧ್ಯವೆಂಬುದೇ ಇಲ್ಲ. ಸತತ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ.ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವುಗಳಲ್ಲೆ ಯಸಸ್ಸನ್ನು ಪಡೆಯಲು ಶ್ರಮಿಸಬೇಕು’ ಎಂದರು.
ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವಿ ಪೂಜಾರಿ ಶುಭ ಕೋಇದರು, ಸಂತ ಜೋಸೆಫ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರೇಮಿಕಾ ಉಪಸ್ಥಿತರಿದ್ದರು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಮತ್ತು ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಶಿಕ್ಷಕಿಯರಾದ ಸ್ವಾತಿ, ಸೆಲಿನ್ ಡಿಸೋಜಾ, ಪ್ರತಿಮಾ ಸಹಕರಿಸಿದರು.
ಸಂತ ಜೋಸೆಫ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಐವಿ ಶಾಲಾ ವರದಿಯನ್ನು ವಾಚಿಸಿದರು, ಶಿಕ್ಷಕಿ ಸರ್ಸಪತಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು. ಶಿಕ್ಷಕ ಅಶೋಕ ದೇವಾಡಿಗ ನಿರೂಪಿಸಿದರು.